ದಿನದ ಅಪರಾಧಗಳ ಪಕ್ಷಿನೋಟ 23ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:22.02.2020 ರಂದು    ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಕನ್ನಕಳುವು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮೋಹಿತ್‌ ಬಿನ್ ಶ್ರೀನಿವಾಸಮೂರ್ತಿ, ವಾಣಿ ನಗರ, ಬೆಮೆಲ್‌ ನಗರ, ಕೆ.ಜಿ.ಎಫ್ ರವರು ದಿನಾಂಕ.21-02-2020 ರಂದು ಮಧ್ಯಾಹ್ನ 3-00 ಗಂಟೆಗೆ ಅವರ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಕುಟುಂಬದೊಂದಿಗೆ ತಮಿಳುನಾಡಿನ ಕಾಟ್ ಪಾಡಿ ಪಕ್ಕದಲ್ಲಿರುವ ಮಾದಿಮಲೈ ದೇವಸ್ಥಾನಕ್ಕೆ ಹೋಗಿ  ದಿನಾಂಕ.22-02-2020 ರಂದು ಬೆಳಿಗ್ಗೆ 08-30 ಗಂಟೆಗೆ  ಮನೆಗೆ ವಾಪಸ್ ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗಗಳನ್ನು ಮುರಿದು, ಮನೆಯೊಳಗೆ ಪ್ರವೇಶಿಸಿ, ಬೀರುಗಳಲ್ಲಿ ಇಟ್ಟಿದ್ದ 21,400/- ರೂ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

 

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ  ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗರಾಜ್‌ ಬಿನ್ ವೆಂಕಟರಾಮಪ್ಪ, ಎಸ್ ಮಾದಮಂಗಲ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 21.02.2020 ರಂದು ರಾತ್ರಿ 8.00 ಗಂಟೆಯಲ್ಲಿ  ದ್ವಿಚಕ್ರ ವಾಹನ ಕೆಎ-08-ಡಬ್ಲ್ಯೂ-9476 ರಲ್ಲಿ ಕೋಲಾರದಿಂದ ಎಸ್.ಮಾದಮಂಗಲ ಗ್ರಾಮಕ್ಕೆ ಹೋಗಲು ಹಂಚಾಳ ರಸ್ತೆಯ ಗಾಲ್ಫ್ ಸಮೀಪ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ದೂರುದಾರರ ಮುಂದೆ ಲಕ್ಷ್ಮಣ ಮತ್ತು ವೆಂಕಟೇಶ್ ರವರುಗಳು ಅವರ ದ್ವಿಚಕ್ರ ವಾಹನದಲ್ಲಿ ಅಡ್ಡಾದಿಡ್ಡಿಯಾಗಿ ಹೋಗುತ್ತಿದ್ದುದನ್ನು ದೂರುದಾರರು ಕೇಳಿದ್ದಕ್ಕೆ, ಇಬ್ಬರೂ ದೂರುದಾರರ ವಾಹನವನ್ನು ನಿಲ್ಲಿಸಿ, ಗಲಾಟೆ ಮಾಡಿ, ಕೈಗಳಿಂದ ಹೊಡೆದು ಗಾಯಗಳನ್ನುಂಟು ಮಾಡಿ, ಕೆಟ್ಟ ಮಾತುಗಳಿಂದ ಬೈದು,  ಪ್ರಾಣಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *