ದಿನದ ಅಪರಾಧಗಳ ಪಕ್ಷಿನೋಟ 23ನೇ ಡಿಸೆಂಬರ್‌ 2019

– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 22.12.2019 ರಂದು ಮಧ್ಯಾಹ್ನ 3.45 ಗಂಟೆಯಿಂದ ಸಂಜೆ 4.45 ಗಂಟೆಯ ವರೆಗೆ ಬೆಂಗಳೂರಿನ ವಿಕ್ಟೋರಿಯ ಅಸ್ಪತ್ರೆಯಲ್ಲಿ ವೈಧ್ಯಾಧಿಕಾರಿಗಳ ಹಾಗೂ ತಹಶೀಲ್ಧಾರ್ ಕೆ.ಜಿ.ಎಫ್ ರವರ ಸಮಕ್ಷಮ ಈ ಕೇಸಿನ ಪಿರ್ಯಾದಿದಾರರು ಭುವನೇಶ್ವರಿ ಕೋಂ ಮಧುಸೂದನ್, ನ್ಯೂ ಮಾಡೆಲ್ ಹೌಸ್, ಮಾರಿಕುಪ್ಪಂ ಕೆ.ಜಿ.ಎಫ್ ರವರ ಹೇಳಿಕೆಯ ಸಾರಂಶವೇನೆಂದರೆ ಪಿರ್ಯಾದಿದಾರರು ಆರೋಪಿ-1 ಮಧುಸೂದನ್ ಬಿನ್ ದಕ್ಷಿಣ ಮೂರ್ತಿ, ನ್ಯೂ ಮಾಡೆಲ್ ಹೌಸ್ ಮಾರಿಕುಪ್ಪಂ ರವರನ್ನು ಸುಮಾರು ಹತ್ತು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು  ಮಧುಸೂದನ್ ರವರ ತಾಯಿಯಾದ ಲಕ್ಷ್ಮಿ ರವರಿಗೆ ಇವರ ಮದುವೆ ಬಗ್ಗೆ ಇಷ್ಟ ಇಲ್ಲದೆ ಇದ್ದುದ್ದರಿಂದ ಈಗ್ಗೆ ಸುಮಾರು ಆರು ತಿಂಗಳಿನಿಂದ ಲಕ್ಷ್ಮಿ ರವರು ಪಿರ್ಯಾದಿದಾರರನ್ನು ಕುರಿತು ನೀನು ಸರಿಯಿಲ್ಲ ಹೊರಟು ಹೋಗು ನೀನು ತನ್ನ ಮಗನನ್ನು ಮದುವೆ ಯಾಗದ್ದಿದ್ದರೆ ಬೇರೆ ಹುಡುಗಿಯನ್ನು ಮದುವೆ ಮಾಡುತ್ತಿದ್ದೆ, ಎಂದು ಮನಸ್ಸಿಗೆ ನೋವುಂಟಾಗುವಂತೆ ಮಾತನಾಡಿ ಮಾನಸಿಕವಾಗಿ ಕಿರುಕುಳ ನೀಡಿ ಗಂಡ ಮಧುಸೂದನ್ ರವರಿಗೆ ಪಿರ್ಯಾದಿದಾರರ ಬಗ್ಗೆ ಇಲ್ಲಸಲ್ಲದ ದೂರುಗಳನ್ನು ಹೇಳಿ ಸಂಸಾರದ ವಿಚಾರದಲ್ಲಿ ಪಿರ್ಯಾದಿದಾರರ ಮೇಲೆ ಅನುಮಾನ ಬರುವಂತೆ ತಿಳಿಸಿದ್ದರಿಂದ ಮಧುಸೂದನ್ ರವರು ಸಹ ಪಿರ್ಯಾದಿದಾರರ ಮೇಲೆ ಅನುಮಾನಪಟ್ಟು ಆಗಾಗ ವಿನಾಃಕಾರಣ ಸಂಸಾರದ ವಿಚಾರದಲ್ಲಿ ಜಗಳ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿದ್ದು ದಿನಾಂಕ 19.12.2019 ರಂದು ರಾತ್ರಿ ಸುಮಾರು 22.30 ಗಂಟೆಯಲ್ಲಿ ಗಂಡ ಮಧುಸೂದನ್ ಮತ್ತು ಅತ್ತೆ ಲಕ್ಷ್ಮಿ ರವರು ಪಿರ್ಯಾದಿದಾರರೊಂದಿಗೆ ಜಗಳ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿ ಉದ್ದೇಶಪೂರ್ವಕವಾಗಿ ತನ್ನ ಗಂಡ ಮನೆಯ ಬಳಿಯಿದ್ದ ಟಿನ್ನರ್ ಡಬ್ಬದಲ್ಲಿದ್ದ ಎಣ್ಣೆಯನ್ನು ಪಿರ್ಯಾದಿದಾರರ ಮೈ ಮೇಲೆ ಸುರಿದು ಅತ್ತೆ ಲಕ್ಷ್ಮಿ ರವರು ಬೆಂಕಿ ಗೀಚಿ ಪಿರ್ಯಾದಿದಾರರಿಗೆ ಅಂಟಿಸಿ ಕತ್ತು ಎದೆ, ಮತ್ತು ಹೊಟ್ಟೆಯ ಬಾಗ ಹಾಗೂ ಎರಡು ಕೈಗಳ ಮೇಲೆ ಸುಟ್ಟ ಗಾಯಗಳನ್ನು ಉಂಟುಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ, ಹಿಂಸೆ ನೀಡಿ ಕೊಲೆ ಮಾಡಿ ಸಾಯಿಸಲು ಪ್ರಯತ್ನ ಪಟ್ಟಿರುತ್ತಾರೆ.

ಇತರೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ    ವಿದ್ಯುತ್ ಶಾಕ್ ಹೊಡೆದಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-22.12.2019 ರಂದು ಮದ್ಯಾಹ್ನ 12.45 ಗಂಟೆಗೆ ಈ ಕೇಸಿನ ಪಿರ್ಯಾದಿದಾರರು ಖಾದರ್‍ ಬಾಷಾ, ರಾಮಯ್ಯ ಕಾಂಪೌಂಡ್,  ಓಲ್ಡ್‌ ಟೌನ್, ಬೇತಮಂಗಲ ರವರ ಮಗನಾದ ರೂಮಾನ್ ಪಾಷ 7 ವರ್ಷ ರವರು ದಿನಾಂಕ-21-12-2019 ರಂದು ಗಂಟೆಯಲ್ಲಿ ಚೆಂಡಿನ ಆಟ ಆಡಿಕೊಂಡು ಚೆಂಡು ಆರೋಪಿ ಕೃಷ್ಣಪ್ಪ, ವಾಸ ಓಲ್ಡ್‌ ಟೌನ್, ಬೇತಮಂಗಲ ರವರ ಮನೆ ಬಳಿಗೆ ಹೋಗಿದ್ದನ್ನು ತೆಗೆದುಕೊಳ್ಳಲು ಹೋದಾಗ ಆರೋಪಿ ಕೃಷ್ಣಪ್ಪ ರವರು ಅವರ ಮನೆಯ ನೀರು ಸಂಪು ಮೋಟಾರ್ ಗೆ ವಿದ್ಯುತ್ ಕನೇಕ್ಷನ್ ನೀಡಿರುವ ಕರೆಂಟ್ ವೈರುಗಳು ಮನೆ ಹಿಂಭಾಗದಲ್ಲಿ ಯಾವುದೇ ಭದ್ರತೆ ಇಲ್ಲದೆ ಹಾಕಿದ್ದು ಸದರಿ ವೈರುಗಳು ಪಿರ್ಯಾದಿ ಮಗನಿಗೆ ತಗುಲಿ ವಿದ್ಯತ್ ಸ್ಪರ್ಶ ಉಂಟಾಗಿ ರೂಮಾನ್ ಪಾಷಾ ರವರಿಗೆ ಎಡಕೆನ್ನೆ. ಹಣೆ, ಬಲಭುಜ, ಬಲಮುಂಗೈ ಮೇಲೆ ಸುಟ್ಟಗಾಯಗಳು ಆಗಿರುತ್ತೆ. ಆರೋಪಿ ತನ್ನ ಮನೆ ಬಳಿ ವಿದ್ಯುತ್ ವೈರುಗಳನ್ನು ಯಾವುದೇ ಭದ್ರತೆ ಇಲ್ಲದೆ ನಿರ್ಲಕ್ಷತೆ ಮತ್ತು ಬೇಜಾವ್ದಾರಿತನದಿಂದ ಹೊರಗಡೆ ಹಾಕಿದ್ದರಿಂದ ರೂಮಾನ್ ಪಾಷಾ ರವರಿಗೆ ವಿದ್ಯುತ್ ಶಾಕ್ ನಿಂದ ಸುಟ್ಟಗಾಯಗಳು ಆಗಿರುತ್ತೆ ಎಂದು ತನ್ನ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ಇದ್ದಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತಾರೆ.

– ಕನ್ನಕಳುವು : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.18-12-2019 ರಂದು ಸೋಮಸುಂದರ್ ನಾಯರ್, ಪುಲೇಂದ್ರ ಲೇಔಟ್, ಬೆಮಲ್ ನಗರ, ಕೆ.ಜಿ.ಎಫ್ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಇಬ್ಬರು ಮಕ್ಕಳನ್ನು ಕರೆದುಕೊಂಡು ಮಹಾರಾಷ್ಟ ರಾಜ್ಯದ ಪೂನಾಗೆ ಹೋಗಿದ್ದು, ದಿನಾಂಕ 18.12.2019 ರಿಂದ 21.12.2019 ರ  ಮಧ್ಯ ಯಾರೋ ಕಳ್ಳರು ಮನೆಯ ಹಿಂಭಾಗ ಬಾಗಿಲು ತೆರೆದು ಮನೆಯ ಒಂದನೇ ಮಹಡಿಯ ಗೆಸ್ಟ್ ರೂಮಿನಲ್ಲಿ ಇಟ್ಟಿದ್ದ ಚಿನ್ನದ ಚೈನನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

 

Leave a Reply

Your email address will not be published. Required fields are marked *