ದಿನದ ಅಪರಾಧಗಳ ಪಕ್ಷಿನೋಟ 22 ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:21.01.2020 ರಂದು    ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 03

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರಾದ ಲೋಕೇಶ್, ಪೊಲೀಸ್ ಹೆಡ್‌ ಕಾನ್ಸ್‌ಟೇಬಲ್, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ, ಕೆ.ಜಿ.ಎಫ್ ರವರು   ದಿನಾಂಕ 21.01.2020 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ವಾರೆಂಟ್ ಜಾರಿಗಾಗಿ ಕ್ಯಾಸಂಬಳ್ಳಿ ಗ್ರಾಮದ ಕಡೆ ಹೋಗಲು ಕೆ.ಜಿ.ಎಫ್-ಕ್ಯಾಸಂಬಳ್ಳಿ ರಸ್ತೆಯ ಬಸವಣಗುಡಿ ಮಿಟ್ಟೆಯ ಬಳಿ ಹೋಗುತ್ತಿದ್ದಾಗ, ಬಸವಣಗುಡಿ ಮಿಟ್ಟೆಯ ಬಳಿ ರಸ್ತೆಯಲ್ಲಿ ಈ ಕೇಸಿನ ಆರೋಪಿ  ಆರೋಪಿ ಇರ್ಪಾನ್ ಬಿನ್ ಕಲೀಲ್, ವಯಸ್ಸು 19 ವರ್ಷ, ವಾಸ ನಂಜಂಪೇಟೆ ಗ್ರಾಮ, ಶಿವರಾಮಪುರ ಅಂಚೆ, ಶಾಂತಿಪುರಂ ಮಂಡಲಂ, ಕುಪ್ಪಂ ತಾಲ್ಲೂಕು, ಆಂದ್ರಪ್ರಧೇಶ ರವರು ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-08 ಕೆ-1116 ಟಿ.ವಿ.ಎಸ್ ವಿಕ್ಟರ್ ಜಿ.ಎಕ್ಸ್ ವಾಹನವನ್ನು ತಳ್ಳಿಕೊಂಡು ಬರುತ್ತಿದ್ದು, ಸಮವಸ್ತ್ರದಲ್ಲಿದ್ದ ದೂರುದಾರರನ್ನು ದ್ವಿಚಕ್ರವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಲು ಪ್ರಯತ್ನಿಸಿದ್ದು, ತಕ್ಷಣ ಸದರಿ ಆಸಾಮಿಯನ್ನು ಹಿಡಿದುಕೊಂಡು ಆರೋಪಿ ಬಳಿ ಇದ್ದ ದ್ವಿಚಕ್ರ ವಾಹನದ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲವೆಂದೂ ಆದ್ದರಿಂದ ಸದರಿ ಆಸಾಮಿಯು ಹೊರ ರಾಜ್ಯದ ವ್ಯಕ್ತಿಯಾಗಿದ್ದು, ಸದರಿ ದ್ವಿ ಚಕ್ರ ವಾಹನವನ್ನು ಎಲ್ಲಿಯೋ ಕಳ್ಳತನ ಮಾಡಿ ಬಂದಿರಬಹುದೆಂತ ಅನುಮಾನದ ಮೇರೆಗೆ ಸದರಿ ವ್ಯಕ್ತಿಯನ್ನು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಹಾಜರುಪಡಿಸಿ ವರದಿ ನೀಡಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಕ್ತ ಚಂದನ ಕಳ್ಳತನ ಹಾಗೂ ಅಕ್ರಮ ಸಾಗಾಟಣೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ 21.01.2020 ರಂದು ಸಂಜೆ 6.00 ಗಂಟೆಗೆ ಈ ಕೇಸಿನ ದೂರುದಾರರಾದ ಸೂರ್ಯ ಪ್ರಕಾಶ್, ಪೊಲೀಸ್ ವೃತ್ತ ನಿರೀಕ್ಷಕರು, ರಾಬರ್ಟ್‌‌ಸನ್‌ಪೇಟೆ ವೃತ್ತ, ಕೆ.ಜಿ.ಎಫ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ  ಸಿಬ್ಬಂದಿಯವರಾದ ಶ್ರೀ ರಮೇಶ್ ಸಿ.ಹೆಚ್.ಸಿ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-08 ಜಿ- 158 ರ ವಾಹನದಲ್ಲಿ ಚಾಲಕರಾದ ಶ್ರೀ ಸತ್ಯ ಪ್ರಕಾಶ್ ರವರೊಂದಿಗೆ ಕ್ಯಾಸಂಬಳ್ಳಿ ಕಡೆಗೆ ದಾವಿಸಿ ಆಂಡ್ರಸನ್ ಪೇಟೆಯ ಪೊಲೀಸ್ ಠಾಣಾ ಸರಹದ್ದು ಅಲ್ಲಿಕುಂಟೆ ಕದಿರೇನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ತಿರುವ ಸಮೀಪ ಬರುತ್ತಿದ್ದ ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ, ಒಂದು ಕಾರ್ ಸ್ವಲ್ಪ ದೂರದಲ್ಲಿ ನಿಲ್ಲಿಸಿ ವಾಪಸ್ಸು ಕ್ಯಾಸಂಬಳ್ಳಿ ಕಡೆಗೆ ತಿರುಗಿಸಿಕೊಳ್ಳಲು ಪ್ರಯತ್ನಿಸಿದಾಗ ಕೂಡಲೆ ದೂರುದಾರರು ಸಿಬ್ಬಂದಿಯವರ ಸಹಾಯದಿಂದ ಕಾರನ್ನು ಸುತ್ತುವರೆದು ಸದರಿ ಆರೋಪಿ ಬತಲಾ ನಾಗೇಶ್ ಬಿನ್ ಗಣೇಶ, ಭೀಮಗಾನಪಲ್ಲಿ, ಪುಂಗನೂರು, ಆಂದ್ರಪ್ರದೇಶ ರವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ, ಸದರಿ ಕಾರ್ ಅನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಲಾಗಿ ಸದರಿ ಕಾರ್ ಟಯೋಟೋ ಇಟಿಯಸ್ ನೊಂದಣಿ ಸಂಖ್ಯೆ ಎ.ಪಿ-39 ಸಿ.ಕೆ-8109 ರ ಬೂದು ಬಣ್ಣದಾಗಿದ್ದು, ಕಾರಿನ ಹಿಂಭದಿಯ ಡಿಕ್ಕಿಯಲ್ಲಿ ಹಾಗೂ ಕಾರಿನ ಹಿಂಭದಿಯ ಸೀಟ್ ಕೆಳಗೆ ಮರದ ತುಂಡುಗಳಿದ್ದು, ಅವುಗಳ ಬಗ್ಗೆ ವಿಚಾರಿಸಲಾಗಿ ರಕ್ತ ಚಂದನ ತುಂಡುಗಳೆಂದು ತಿಳಿಸಿದ್ದು, ಅವು ಕೆಂಪು ಬಣ್ಣದಲ್ಲಿದ್ದು ಲೆಕ್ಕ ಮಾಡಲಾಗಿ ವಿವಿದ ಅಳತೆಯ ಒಟ್ಟು 12 ತುಂಡುಗಳಿತ್ತೆಂದೂ, ಆರೋಪಿಯು ಅಕ್ರಮವಾಗಿ, ಕಾನೂನು ಬಾಹಿರವಾಗಿ ರಕ್ತ ಚಂದನ ತುಂಡುಗಳನ್ನು ಸಾಗಿಸುತ್ತಿದ್ದರಿಂದ ಆರೋಪಿಯನ್ನು ವಶಕ್ಕೆ ಪಡೆದು ರಕ್ತ ಚಂದನ ತುಂಡುಗಳು ಹಾಗೂ ಇ.ಟಿ.ಯೋಸ್ ಕಾರ್ ಸಂಖ್ಯೆ ಎ.ಪಿ-39 ಸಿ.ಕೆ-8109 ಅನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿ ವರದಿ ನೀಡಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರು ಮಂಜುನಾಥ್, ನಾಚಪಲ್ಲಿ, ರಾಬರ್ಟ್‌ಸನ್‌ಪೇಟೆ ರವರು  ಬಂಗಾರಪೇಟೆ ಅಪೊಲೋ ಪಾರ್ಮಸಿಯಲ್ಲಿ ಸೂಪರ್ ವೈಸರ್ ಅಗಿ ಕೆಲಸ ಮಾಡುತ್ತಿದ್ದು, ದಿನಾಂಕ 16.01.2020 ರಂದು ದೂರುದಾರರು ಹೀರೋ ಮೆಸ್ಟ್ರೋ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-07-ಇಸಿ-1426 ಅನ್ನು ತೆಗೆದುಕೊಂಡು ಸಂಜೆ 4-00 ಗಂಟೆಗೆ ಬಂಗಾರಪೇಟೆಯಲ್ಲಿರುವ ಅಪೋಲೋ ಪಾರ್ಮಸಿಗೆ ಕೆಲಸಕ್ಕೆಂದು ಬಂದು ದ್ವಿ ಚಕ್ರವಾಹನವನ್ನು ಪಾರ್ಮಸಿ ಮುಂಭಾಗದಲ್ಲಿ ನಿಲ್ಲಿಸಿ ಬೀಗ ಹಾಕಿಕೊಂಡು ಪಾರ್ಮಸಿ ಒಳಗಡೆ ಕೆಲಸ ಮುಗಿಸಿಕೊಂಡು ಸಂಜೆ 7-00 ಗಂಟೆಗೆ ಹೊರಗಡೆ ಬಂದು ನೋಡಲಾಗಿ ದ್ವಿಚಕ್ರ ವಾಹನ ಕಾಣಿಸದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದುವರೆಗೆ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಇದರ ಬೆಲೆ ಸುಮಾರು 48000/- ರೂಗಳಾಗಿರುತ್ತದೆಂದು ದೂರು ನೀಡಿರುತ್ತಾರೆ.

 

Leave a Reply

Your email address will not be published. Required fields are marked *