ದಿನದ ಅಪರಾಧಗಳ ಪಕ್ಷಿನೋಟ 22 ನೇ ಆಗಸ್ವ್ 2019

-ಕನ್ನ ಕಳುವು : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ- 21-08-2019 ರಂದು ದೂರುದಾರರಾದ ಶ್ರೀಮತಿ ಶಕುಂತಲ ಕೋಂ ಆಶ್ವಥ್ ವೆಂಕಟಾಪುರ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರು ಮನೆಗೆ ಬೀಗ ಹಾಕಿಕೊಂಡು ಹಸು ಮೇಯಿಸಲು ಹೋಗಿ ನಂತರ ಅದೇ ದಿನ ಮದ್ಯಾನ 12.00 ಗಂಟೆಗೆ ಮನೆಗೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲನ್ನು ರಾಡಿನಿಂದ ಮೀಟಿ ಒಳಗೆ ಪ್ರವೇಶಿಸಿ ಬೀರುವಿನ ಬೀಗ ಮುರಿದು ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ನಕ್ಲೇಸ್ ಸುಮಾರು 26 ಗ್ರಾಂ, ಕಿವಿ ಸೆಟ್ಟು ಸುಮಾರು 14 ಗ್ರಾಂ, ಕತ್ತಿನ ಸರ ಸುಮಾರು 32 ಗ್ರಾಂ, ಉಂಗುರ 4 ಗ್ರಾಂ, ನಗದು ಹಣ 50.000 ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು 76 ಗ್ರಾಂ ಚಿನ್ನದ ಒಡವೆ ಬೆಲೆ ಸುಮಾರು 2.28.000 ಆಗಿರುತ್ತದೆ. ಆದುದರಿಂದ , ನಗದು ಹಣ 50.000 ಮತ್ತು ಚಿನ್ನದ ಒಡವೆಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿ ಕೊಂಡು ಹೋಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 21.08.2019 ರಂದು ದೂರುದಾರರಾದ ಶ್ರೀ. ವೆಂಕಟಾಚಲಂ ಗಂದಾರಮಾಕಲಪಲ್ಲಿ ಅಂದ್ರಪ್ರದೇಶ ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಕು: ಗಂಗೋತ್ರಿ, ವಯಸ್ಸು 16 ವರ್ಷ ರವರನ್ನು ದಾಸರಹೊಸಹಳ್ಳಿ ಗ್ರಾಮದ ಪ್ರಕಾಶ್ ನಾಯ್ಡು ರವರಿಗೆ ಮದುವೆ ಮಾಡಿಕೊಟ್ಟಿದ್ದು ಗಂಗೋತ್ರಿ ರವರಿಗೆ 08 ವರ್ಷದ ಮಗು ಇದ್ದಾಗಿನಿಂದಲೂ ನರಗಳ ದೌರ್ಬಲ್ಯ ಖಾಯಿಲೆ ಇದ್ದು, ಇದರಿಂದ ಆಕೆಗೆ ವಿಪರೀತವಾದ ತಲೆ ನೋವು ಬರುತ್ತಿದ್ದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿ ಸೀರೆಯಿಂದ ಮನೆಯ ಮೇಲ್ಚಾವಣಿ ಮರಕ್ಕೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *