ದಿನದ ಅಪರಾಧಗಳ ಪಕ್ಷಿನೋಟ 22 ನೇ ಮೇ 2018

– ರಸ್ತೆ ಅಪಘಾತಗಳು :‍ 02

ಬಂಗಾರಪೇಟೆ ಪೊಲೀಸ್  ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.05.2018 ರಂದು ದೂರುದಾರರಾದ ಶ್ರೀ. ವೆಂಕಟೇಶ್ ಬಿನ್  ವೆಂಕಟಣ್ಣ ಕುಪ್ಪಸ್ವಾಮಿ ಲೇಔಟ್‌ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ಮದುವೆಯಿಂದ ದಿನಾಂಕ 21.05.2018 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಅವರ ದ್ವಿಚಕ್ರ ವಾಹನ ಸಂಖ್ಯೆ ಕೆಎ-07-ವೈ-6922 ರಲ್ಲಿ ಬಂಗಾರಪೇಟೆಯಿಂದ ಒಂಬತ್ತುಗುಳಿಗೆ ಸಾಮಾನ್ನುಗಳನ್ನು ಹಾಕಿಕೊಂಡು ಬಂದು ಚರ್ಚನಲ್ಲಿ ಸಾಮಾನುಗಳನ್ನು ಹಾಕಿ ನೀರು  ತರಲು  ಒಂಬತ್ತುಗುಳಿ ಗ್ರಾಮದ ನಾಗೇಶ್ ಮತ್ತು  ಮಣಿಕಂಠ ರವರುಗಳು ನೀರನ್ನು ತೆಗೆದುಕೊಂಡು ಬರುತ್ತೇವೆಂದು ನೀರಿನ ಕ್ಯಾನನ್ನು ತೆಗೆದುಕೊಂಡು ದೂರುದಾರರ ದ್ವಿಚಕ್ರವಾಹನ ಸಂಖ್ಯೆ ಕೆಎ-07-ವೈ-6922 ಡಿಯೋ ವಾಹನವನ್ನು  ಚಲಾಯಿಸಿಕೊಂಡು ಇಬ್ಬರು ಹೋಗಿದ್ದು ಐನೂರು ಹೊಸಹಳ್ಳಿ ಕಡೆಯಿಂದ ಒಂಬತ್ತುಗುಳಿ ಕಡೆಗೆ ಹೋಗುತ್ತಿದ್ದಾಗ  ಪ್ಯಾಸೆಂಜರ್ ಆಟೋ ಸಂಖ್ಯೆ ಕೆಎ-08-9243 ರ ಚಾಲಕನು ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಹೋಗಿ ದ್ವಿಚಕ್ರವಾಹನ ಸಂಖ್ಯೆ ಕೆಎ-07-ವೈ-6922 ರಲ್ಲಿ ಹೋಗುತ್ತಿದ್ದವರಿಗೆ ಡಿಕ್ಕಿಪಡಿಸಿದ ಪ್ರಯುಕ್ತ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಮಣಿಕಂಠ 20 ವರ್ಷ ಮತ್ತು ನಾಗೇಶ್ 16 ವರ್ಷ ಎಂಬುರಿಗೆ  ತಲೆಗೆ ತೀವ್ರ ಸ್ವರೂಪ ರಕ್ತಗಾಯಗಳಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಆಟೋವಿನ ಚಾಲಕ ಆಟೋವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾರೆ.

ಬಂಗಾರಪೇಟೆ ಪೊಲೀಸ್  ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.05.2018 ರಂದು ದೂರುದಾರರಾದ ಶ್ರೀ. ಶ್ರೀನಿವಾಸ ಬಿನ್‌ ಕೃಷ್ಣಪ್ಪ ಕೊಮ್ಮೇನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ: 19.05.2018 ರಂದು ಸಂಜೆ ಸುಮಾರು 4-00 ಗಂಟೆಯಲ್ಲಿ ದೂರುದಾರರು ಬೂದಿಕೋಟೆ ಸರ್ಕಲ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ  ಆರೋಪಿ ಆಟೋ ಚಾಲಕನು ಆಟೋ ನಂ ಕೆಎ-08-9034 ರಲ್ಲಿ ಬಂದು ದೂರುದಾರರನ್ನು ಕುಳ್ಳರಿಸಿಕೊಂಡು ಬೂದಿಕೋಟೆ ಸಮೀಪವಿರುವ ಆರುಮೈಲಿ ಬಳಿ ರಸ್ತೆಯ ಸಮೀಪ ಆಟೋ ಚಾಲಕನು  ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದ ಕಾರಣ ದೂರುದಾರರು ಆಟೋವಿನಿಂದ ಕೆಳಗೆ ಬಿದ್ದಾಗ ಆಟೋವಿನ ಚಕ್ರವು ಎಡ ತೊಡೆಯ ಸೊಂಟದ ಬಳಿ ಹರಿದು ರಕ್ತ ಗಾಯವಾಗಿರುತ್ತದೆ.

ಅಪಹರಣ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ತಾಮರೈ ಕಣ್ಣನ್, ನಂಬಿರಾಜನ್, ಕೀಲುಕೃಷ್ಣಾವರಂ, ಕೆ.ಜಿ.ಎಫ್ ರವರ ಮಗಳು 16 ವರ್ಷದ 9ನೇ ತರಗತಿಯ ವಿದ್ಯಾರ್ಥಿನಿ  ಮನೆಯಿಂದ ಅಂಗಡಿಗೆ ಹೋಗುವುದಾಗಿ ಹೇಳಿ ಹೋದವಳು ನಂತರ ಮನೆಗೆ ಬರದೇ ಇದ್ದು, ಮೇಲ್ ಕೃಷ್ಣಾವರಂ ಗ್ರಾಮದ ಚಂದ್ರು ಎಂಬುವನು ಅಪಹರಿಸಿಕೊಂಡು ಹೋಗಿರಬಹುದೆಂದು ದೂರು.

 ಹಲ್ಲೆ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವೀಂದ್ರ ಬಿನ್ ಚಿಕ್ಕರಾಮರೆಡ್ಡಿ, ಉರಿಗಾಂಪೇಟೆ, ಕೆ.ಜಿ.ಎಫ್ ರವರ ಮತ್ತು  ಆರೋಪಿ ಸುರೇಶ್ ರವರ ಖಾಲಿ ನಿವೇಶನಗಳ ಮದ್ಯೆ ಇರುವ ಒಂದು ತೆಂಗಿನ ಮರದ ವಿಚಾರದಲ್ಲಿ ಮನಸ್ಥಾಪಗಳಿದ್ದು, ದಿನಾಂಕ: 21.05.2018 ರಂದು ಬೆಳಿಗ್ಗೆ 7.15 ಗಂಟೆಯಲ್ಲಿ ದೂರುದಾರರು ಮನೆಯಲ್ಲಿದ್ದಾಗ ಸದರಿ ತೆಂಗಿನ ಮರದಿಂದ ಒಂದು ಒಣ ತೆಂಗಿನ ಕಾಯಿ ದೂರುದಾರರ ಮನೆಯ ಕಾಂಪೌಂಡ್ ನಲ್ಲಿ ಬಿದ್ದಿದ್ದು, ಅದನ್ನು ತೆಗೆದುಕೊಳ್ಳಲು ಹೋದಾಗ ಆರೋಪಿ ಸುರೇಶ್ ಕೆಟ್ಟ ಮಾತಿನಿಂದ ಬೈದು,  ದೊಣ್ಣೆಯನ್ನು ಹೊಡೆದು ರಕ್ತಗಾಯಪಡಿಸಿದ್ದು, ಇಂದ್ರಾಣಿ ರವರು ಸಹ ಕೈಗಳಿಂದ ಹೊಡೆದು   ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *