ದಿನದ ಅಪರಾಧಗಳ ಪಕ್ಷಿನೋಟ 22 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 21.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಚಂದ್ರನ್ ಬಿನ್ ಬಾಲರಾಜ್, ಚಾಮರಾಜ್‌ಪೇಟೆ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ಮಗಳು ಪವಿತ್ರ, 28 ವರ್ಷ ರವರನ್ನು ಹೆನ್ರೀಸ್, 2ನೇ ಲೈನಿನ ವಾಸಿ ಶಿವಪ್ರಸಾದ್ ರವರಿಗೆ ಒಂದು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಈತನು ಪ್ರತಿ ದಿನ ಮಧ್ಯಪಾನ ಮಾಡಿ ಮನೆಗೆ ಬಂದು ಹೆಂಡತಿಗೆ ಕುಡಿಯಲು ಹಣ ಕೊಡು ಎಂತ ಕೇಳಿ ಗಲಾಟೆ ಮಾಡುತ್ತಿದ್ದು, ದಿನಾಂಕ: 17.01.2021 ರಂದು ಶಿವಪ್ರಸಾದ್ ಹೆಂಡತಿ ಪವಿತ್ರಳಿಗೆ ಗಲಾಟೆ ಮಾಡಿ ಕಿರುಕುಳ ನೀಡಿದ್ದು, ಆಕೆಯು ತಾಳಲಾರದೆ ಮನನೊಂದು ದಿನಾಂಕ: 21.01.2021 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.

Leave a Reply

Your email address will not be published. Required fields are marked *