ದಿನದ ಅಪರಾಧಗಳ ಪಕ್ಷಿನೋಟ 22 ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 21.08.2020 ರಂದು
 ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಹಲ್ಲೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 21.08.2020 ರಂದು ದೂರುದಾರರಾದ ಶ್ರೀ. ಮುನಿರಾಜು ಬಿನ್‌ ಪಾಪಣ್ಣ ಗಂಗಮ್ಮನಪಾಳ್ಯಾ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ: 20.08.2020 ರಂದು ದೂರುದಾರರು ಮನೆಯಲ್ಲಿರುವಾಗ ಆರೋಪಿ ಅರುಣ್ ಎಂಬುವರು ಮನೆ ಬಳಿ ಹೋಗಿ ಏಕಾಏಕಿ ‘ತನಗೆ ಆಸ್ತಿಯನ್ನು ತನ್ನ ತಾಯಿಯ ಕಡೆಯಿಂದ ಕೊಡಿಸು ಎಂತ ಹೇಳಿದ್ದು, ಅದಕ್ಕೆ ದೂರುದಾರರು ಆಸ್ತಿ ಏನು ಇಲ್ಲವೆಂದು ಹೇಳಿದ ಕಾರಣ ಆರೋಪಿ ದೂರುದಾರರೊಂದಿಗೆ ಗಲಾಟೆ ಮಾಡಿ ಕೈಯಲ್ಲಿದ್ದ ಒಂದು ದೊಣ್ಣೆಯಿಂದ ಹೊಡೆದು ರಕ್ತಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *