ದಿನದ ಅಪರಾಧಗಳ ಪಕ್ಷಿನೋಟ 22ನೇ ಏಪ್ರಿಲ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 21.04.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಹೆಂಗಸ್ಸು ನಾಪತ್ತೆ ಪ್ರಕಣ ದಾಖಲಾಗಿರುತ್ತದೆ.  ದೂರುದಾರರಾದ ಬಾಬು ಬಿನ್‌ ಲೋಗನಾಥನ್‌, ಒರಿಯಂಟಲ್‌ ಲೈನ್‌, ಉರಿಗಾಂ, ಕೆ.ಜಿ.ಎಫ್ ರವರ ಮಗಳಾದ ಮೋನಾಲಿಷ, 19 ವರ್ಷ ರವರು  ದಿನಾಂಕ:20.04.2020 ರಂದು ಸಂಜೆ 6-30 ಗಂಟೆಗೆ ಮನೆಗೆ ಹಾಲು ತರಲು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಮತ್ತೆ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.

 

– ದೊಂಬಿ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ಪಾಕರಹಳ್ಳಿ ವಾಸಿಯಾದ ಅಶ್ವತ್ ಎಂಬುವರ ಸ್ವತ್ತಿನಲ್ಲಿ ರಸ್ತೆಗೆ ಅಡ್ಡವಾಗಿ ಚಪ್ಪಡಿಗಳನ್ನು ಹೂಣಿದ್ದು, ಈ ವಿಚಾರದಲ್ಲಿ ಅಶ್ವತ್ ರವರು ಪಿಡಿಓ ರವರಿಗೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದರಿಂದ ಪಿಡಿಓ ರವರು ಸ್ಥಳ ಪರಿಶೀಲನೆಗೆ ಸದರಿ ಸ್ಥಳಕ್ಕೆ  ದಿನಾಂಕ 20.04.2020 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ಬಂದಿದ್ದು, ಸದರಿ ಸ್ಥಳದಲ್ಲಿದ್ದ ದೂರುದಾರರಾದ ಶ್ರೀ. ಮಂಜುನಾಥ ಬಿನ್ ಚಿನ್ನಪ್ಪ, ಪಾಕರನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ ಶ್ರೀನಾಥ, ನಾಗರಾಜ, ರವಿಚಂದ್ರ, ಮಂಜುನಾಥ, ಚೌಡರೆಡ್ಡಿ ಮತ್ತು ನರಸಿಂಹರೆಡ್ಡಿ ರವರು ‘ಅಶ್ವತ್ ರವರಿಗೆ ನಿಂದೇ ಸಪೋರ್ಟ್, ನೀನು ಊರಿನಲ್ಲಿ ಮೆರೆಯುತ್ತಿದ್ದೀಯಾ, ನಿನಗೆ ಒಂದು ಗತಿ ಕಾಣಿಸುತ್ತೇವೆ” ಎಂದು ಹೇಳಿ, ಕೆಟ್ಟ ಮಾತುಗಳಿಂದ ಬೈದು, ಪ್ರಾಣಬೆದರಿಕೆ ಹಾಕಿದ್ದು, ನಂತರ ಮಧ್ಯರಾತ್ರಿ ಸುಮಾರು 12.00 ಗಂಟೆಯಲ್ಲಿ ಆರೋಪಿಗಳೆಲ್ಲರೂ ದೂರುದಾರರಿಗೆ ಸೇರಿದ ಜಮೀನುಗಳಲ್ಲಿ ಹಾಕಿದ್ದ ಸುಮಾರು 3 ರಿಂದ 3.50 ಲಕ್ಷ ರೂಗಳ ಬೆಲೆ ಬಾಳುವ ನೆಟ್ ಮತ್ತು ಪಾಲಿತಿನ್ ಪೇಪರ್ ನ್ನು ಯಾವುದೋ ಆಯುಧದಿಂದ ಹರಿದು ಹಾಕಿ ನಷ್ಟವನ್ನುಂಟುಪಡಿಸಿರುತ್ತಾರೆ.

 

– ಅಸ್ವಾಭಾವಿಕ ಮರಣ ಪ್ರಕರಣ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿ. ರಾಮಸ್ವಾಮಿ, ವಿಜಯನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರ ಕಾಂಪೌಂಡ್ ನಲ್ಲಿರುವ ಮನೆಯಲ್ಲಿ ವಿಜಯ್ ಬಿನ್ ರಂಜನ್ ವಾಸ ಹೆನ್ರೀಸ್ 01 ನೇ ಲೈನ್, ಉರಿಗಾಂ ರವರು ಮತ್ತು ಆತನ ಹೆಂಡತಿ ಮೋನಿಕ @ ಮೋನಿಷ, 22 ವರ್ಷ ರವರು ಬಾಡಿಗೆಗೆ ವಾಸವಾಗಿದ್ದು, ದಿನಾಂಕ. 21.04.2020 ರಂದು ಸಂಜೆ 4-00 ಗಂಟೆಯಲ್ಲಿ ವಿಜಯ್ ರವರು ಆತನ ಮಾವನಾದ ಸ್ವಾಮಿವೇಲು ರವರೊಂದಿಗೆ ಪೋನ್ನಲ್ಲಿ ಮಾತನಾಡುತ್ತಿರುವಾಗ ಮೋನಿಕ @ ಮೋನಿಷ ರವರು ವಿಜಯ್ ರವರನ್ನು ಯಾರೊಂದಿಗೆ ಪೋನ್ನಲ್ಲಿ ಮಾತನಾಡುತ್ತಿದ್ದೀಯ ಎಂದು ಅನುಮಾನಪಟ್ಟು ಕೇಳಿದ್ದು, ಆಗ ವಿಜಯ್ ಮತ್ತು  ಮೋನಿಷಾ ರವರಿಗೆ ಬಾಯಿ ಮಾತಿನ ಜಗಳವಾಗಿದ್ದು, ಪಕ್ಕದ ಮನೆಯ ವಾಸಿಗಳು ಅವರಿಬ್ಬರನ್ನು ಸಮಾದಾನ ಮಾಡಿ, ವಿಜಯ್ ನನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬಂದು ಮಾತನಾಡುತ್ತಿದ್ದಾಗ, ಮೋನಿಕ @ ಮೋನಿಷ ರವರು ಅವರ ಮನೆಯ ಒಳಗೆ ಹೋಗಿ ಬಾಗಿಲಿನ ಚಿಲಕವನ್ನು ಹಾಕಿಕೊಂಡು ಮನೆಯ  ಮೇಲ್ಚಾವಣಿಯ ಉಕ್ಕಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *