ದಿನದ ಅಪರಾಧಗಳ ಪಕ್ಷಿನೋಟ 22ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 20.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಕಾಶ್‌ ಬಿನ್ ಕೃಷ್ಣಪ್ಪ, ಭೀಮಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 21.03.2020 ರಂದು ಮಧ್ಯಾಹ್ನ 12.00 ಗಂಟೆಯಲ್ಲಿ ಅವರ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದಾಗ, ಆರೋಪಿಗಳಾದ ರಾಮಕೃಷ್ಣಪ್ಪ ಬಿನ್ ಮುನಿವೆಂಕಟಪ್ಪ, ಮುನಿವೆಂಕಟಪ್ಪ ಬಿನ್ ತಿಮ್ಮಯ್ಯ,  ಶಾಂತಕುಮಾರ್ ಬಿನ್ ಮುನಿವೆಂಕಟಪ್ಪ, ನಾಗಯ್ಯ ಬಿನ್ ವೆಂಕಟೇಶಪ್ಪ ರವರು ಸದರಿ ಜಮೀನಿನಲ್ಲಿ  ಜೆ.ಸಿ.ಬಿ ತಂದು ದಾರಿ ಮಾಡಲು ಬಂದಾಗ, ದೂರುದಾರರು ಇದು ನಮ್ಮ ಜಮೀನು ದಾರಿ ಮಾಡಬೇಡಿ ಎಂದು ಹೇಳಿದ್ದಕ್ಕೆ, ಆರೋಪಿಗಳು ಕೆಟ್ಟ ಮಾತುಗಳಿಂದ ಬೈದ್ದು ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಾನ್ಸನ್‌ ಬಿನ್ ಸೆಲ್ವಮ್‌, ನಾರ್ಥ್ ಟ್ಯಾಂಕ್‌ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ: 21.03.2020 ರಂದು ರಾತ್ರಿ 10-15 ಗಂಟೆಯಲ್ಲಿ ವೇಲಾಂಗಾಣಿ ರವರ ಬಳಿ  ಅವರಿಗೆ ಕೊಡಬೇಕಾದ 10,000/- ರೂಪಾಯಿಗಳನ್ನು ಕೇಳಿದಾಗ, ವೇಲಾಂಗಾಣಿ ಎಂಬುವನು ಕಾಸು ಕೊಡುವುದಿಲ್ಲ ಏನು ಮಾಡುತ್ತೀಯೋ ಎಂದು ಹೇಳಿದ್ದು, ನಂತರ ವೇಲಾಂಗಾಣಿ ಮತ್ತು ಆತನ ತಮ್ಮ ಆಂಥೋಣಿ ಎಂಬುವರು ದೂರುದಾರರ ಮನೆ ಬಳಿಗೆ ಬಂದು ಕೆಟ್ಟಮಾತುಗಳಿಂದ ಬೈದು, ರೀಪರ್‌ ಪೀಸ್‌‌ನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *