ದಿನದ ಅಪರಾಧಗಳ ಪಕ್ಷಿನೋಟ 22ನೇ ಅಕ್ಟೋಬರ್‌ 2019

– ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಗಂಗಮ್ಮ ಕೊಂ ಸುಬ್ರಮಣಿ, ಅಡಂಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಸುಮಾರು 15 ವರ್ಷಗಳ ಹಿಂದೆ ಅಡಂಪಲ್ಲಿ ವಾಸಿ ಸುಬ್ರಮಣಿ ಬಿನ್ ಗುರಪ್ಪ ಎಂಬುವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು,  ಮೊದಲು ಅನ್ಯೋನ್ಯವಾಗಿ ಜೀವನ ಮಾಡಿಕೊಂಡಿದ್ದು, ನಂತರ ಸುಬ್ರಮಣಿ ಸಂಸಾರದಲ್ಲಿ ಸಣ್ಣಪುಟ್ಟ ವಿಚಾರದಲ್ಲಿ ಗಲಾಟೆ ಮಾಡುವುದು, ಬೈಯುವುದು ಕೈಗಳಿಂದ ಹೊಡೆಯುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ದಿನಾಂಕ: 21.10.2019 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ದೂರುದಾರರು ಸುಬ್ರಮಣಿ ರವರಿಗೆ ಸಂಸಾರಕ್ಕೆ ಏನು ತಂದು ಹಾಕವುದಿಲ್ಲ, ತಾನು ಮಕ್ಕಳನ್ನು ಹೇಗೆ ಸಾಕುವುದು ಎಂದು ಕೇಳಿದಾಗ, ಸುಬ್ರಮಣಿ  ಕೆಟ್ಟ ಮಾತುಗಳಿಂದ ಬೈದು, ಕಂಚಿನ ದೀಪದಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.

Leave a Reply

Your email address will not be published. Required fields are marked *