ದಿನದ ಅಪರಾಧಗಳ ಪಕ್ಷಿನೋಟ 22ನೇ ಮಾರ್ಚ್‌ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 20.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಬಕಾರಿ ಕಾಯ್ದೆ : 01

 ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 21.03.2021 ರಂದು ಬೆಳಿಗ್ಗೆ 10.10 ಗಂಟೆಗೆ ಲಕ್ಷ್ಮೀಸಾಗರ ಗ್ರಾಮದ ಬಳಿ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ವಿವೇಕ್‌ ಬಾಬು, ಘಟ್ಟಮಾದಮಂಗಲ ಗ್ರಾಮ ರವರು ಮದ್ಯಪಾನ ಸೇವನೆ ಮಾಡುತ್ತಿದ್ದವರನ್ನು ಮತ್ತು  ಸ್ಥಳದಲ್ಲಿದ್ದ 1) HAYWARDS CHEERS WHISKEY 90 ML 1 POCKET 2.) HAYWARDS CHEERS WHISKEY 90 ML 1 POCKET 1 ಖಾಲಿ ಪ್ಯಾಕೆಟ್ 3) ಎರಡು ನೀರಿನ ಪಾಕೇಟುಗಳನ್ನು 4) ಒಂದು ಪ್ಲಾಸ್ಟಿಕ್ ಲೋಟಗಳನ್ನು ದೂರುದಾರರಾದ ಶ್ರೀ. ಶಿವಕುಮಾರ್‌, ಸಿ.ಹೆಚ್.ಸಿ ರವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ 21.03.2021 ರಂದು ಬೆಳಿಗ್ಗೆ 11.30 ಗಂಟೆಗೆ ರಾಜೇಶ್ ಕ್ಯಾಂಪ್ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗುಣಶೀಲನ್, ರಾಜೇಶ್ ಕ್ಯಾಂಪ್‌, ಮಾರಿಕುಪ್ಪಂ, ಕೆ.ಜಿ.ಎಫ್ ರವರು ಮದ್ಯಪಾನ ಸೇವನೆ ಮಾಡುತ್ತಿದ್ದು, ಆತನನ್ನು ಮತ್ತು ಸ್ಥಳದಲ್ಲಿದ್ದ 1) HAYWARDS CHEERS WHISKEY 90 ML 1 POCKET ಅರ್ದ ಖಾಲಿಯಾಗಿರುತ್ತದೆ. 2.) HAYWARDS CHEERS WHISKEY 90 ML 1 POCKET 1  ಖಾಲಿ ಪ್ಯಾಕೆಟ್ 3) ಎರಡು ನೀರಿನ ಪಾಕೇಟುಗಳನ್ನು 4) ಒಂದು ಪ್ಲಾಸ್ಟಿಕ್ ಲೋಟಗಳನ್ನು ದೂರುದಾರರಾದ ಶ್ರೀಮತಿ. ವಸಂತ, ಸಿ.ಹೆಚ್.ಸಿ ರವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 21.03.2021 ರಂದು  ಸಂಜೆ 4.30 ಗಂಟೆಯಲ್ಲಿ ಕಾಮಸಮುದ್ರಂ ಕಡೆಯಿಂದ ನರಿನತ್ತಂ ಕಡೆಗೆ ಹೋಗುವ ರಸ್ತೆಯಲ್ಲಿ ಮುರಳಿ, ರಂಗಪ್ಪ, ಧರ್ಮನ್, ಮತ್ತು ವೇದನಾಯಗಂ ರವರು ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದವರನ್ನು  ಮತ್ತು ಸ್ಥಳದಲ್ಲಿದ್ದ 1) Haywards Deluxe Whisky 90 ml  ನ 04  ಮದ್ಯದ ಖಾಲಿ ಪಾಕೇಟ್, 2) 04  ಪ್ಲಾಸ್ಟಿಕ್ ಖಾಲಿ ಲೋಟ, 3) 06 ಖಾಲಿ ವಾಟರ್ ಪ್ಯಾಕೆಟ್ಗಳನ್ನು ದೂರುದಾರರಾದ ಶ್ರೀ. ಜನಾರ್ಧನ್‌ ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

– ಸಾಧಾರಣ ಕಳ್ಳತನ : ಇಲ್ಲ

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಜಯ್‌ಕುಮಾರ್‌ ಬಿನ್ ಪೊನ್ನೇಪಲ್ಲಿ ಗ್ರಾಮ, ಕುಪ್ಪಂ, ಆಂದ್ರಪ್ರದೇಶ ರವರು ಪಲ್ಸರ್ ದ್ವಿ-ಚಕ್ರ ವಾಹನ ಸಂಖ್ಯೆ TN-24 AP-9842  ಅನ್ನು ಕೆ.ಜಿ.ಎಫ್ ತಾಲ್ಲೂಕು ನಕ್ಕನಹಳ್ಳಿ  ಗ್ರಾಮದಲ್ಲಿರುವ ನಡುಪನ್ನ ರವರ ಮನೆಯ ಮುಂದೆ ದಿನಾಂಕ 28.02.2021 ರಂದು ನಿಲ್ಲಿಸಿದ್ದು, ರಾತ್ರಿ  ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ. ಸದರಿ ವಾಹನ 93,000/- ರೂ ಬೆಲೆ ಬಾಳುವುದಾಗಿರುತ್ತದೆ.

Leave a Reply

Your email address will not be published. Required fields are marked *