ದಿನದ ಅಪರಾಧಗಳ ಪಕ್ಷಿನೋಟ 22ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 21.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಮುನಿಯಪ್ಪ, ತಿಮ್ಮಾಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 20.02.2021 ರಂದು ಸಂಜೆ 7.45 ಗಂಟೆಯಲ್ಲಿ   ರಘು  ಬಿನ್  ಶ್ರೀರಾಮಪ್ಪ  ರವರೊಂದಿಗೆ   ದ್ವಿ ಚಕ್ರವಾಹನ  ಹೊಂಡಾ ಡ್ರಿಮ್  KA 07 X 1503   ರಲ್ಲಿ  ಕೋಲಾರ ಬೇತಮಂಗಲ ಮುಖ್ಯರಸ್ತೆ  ಮಾರ್ಗವಾಗಿ  ಬೇತಮಂಗಲ ಬಳಿ ಇರುವ  ಗ್ಯಾಸ್ ಗೋಡನ್  ಸಮೀಪ  ಹೋಗುತ್ತಿದ್ದಾಗ, ಬೇತಮಂಗಲ ಕಡೆಯಿಂದ   ಆಕ್ಟೀವಾ ದ್ವಿಚಕ್ರ ವಾಹನ ಸಂಖ್ಯೆ  KA08-EA-2277  ರ ಚಾಲಕ  ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆ ಯಿಂದ ಚಲಾಯಿಸಿಕೊಂಡು ಬಂದು  ದೂರುದಾರರ  ದ್ವಿ ಚಕ್ರ ವಾಹನಕ್ಕೆ ಡಿಕ್ಕಿ  ಹೊಡೆದ ಪ್ರಯುಕ್ತ  ದೂರುದಾರರು ಮತ್ತು ರಘು ರವರು ವಾಹನ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತೆ.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬಿನ್ ಮುನಿಸ್ವಾಮಿನಾಯ್ಡು, ಬಾಲಾಜಿ ಟ್ರೇಡರ್‍ಸ್‌, ಕೆ.ಜಿ.ಎಫ್ ರವರ ಬೊಲೆರೋ ವಾಹನ ಸಂಖ್ಯೆ ಕೆಎ-08-9085 ನ್ನು ಚಾಲಕ ನವೀನ್ ಕುಮಾರ್ ದಿನಾಂಕ: 15.02.2021 ರಂದು ರಾತ್ರಿ 10.00 ಗಂಟೆಗೆ ಕೆಜಿಎಫ್ ಮುಖ್ಯ ರಸ್ತೆ ದೇಶಿಹಳ್ಳಿ ಪಿಡಬ್ಲ್ಯೂಡಿ ವಾಟರ್ ವರ್ಕ್ಸ್ ಬಳಿ ಬಂಗಾರಪೇಟೆ ದೂರುದಾರರ ಬ್ರಾಂಚ್ ಆಫೀಸ್ ಮುಂದೆ ನಿಲ್ಲಿಸಿ ಹೋಗಿದ್ದು, ದಿನಾಂಕ 16.02.2021ರಂದು ಬೆಳಿಗ್ಗೆ 07.00 ಗಂಟೆಗೆ ನೋಡಲಾಗಿ ಬೋಲೇರೋ ವಾಹನವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ. ಸದರಿ ವಾಹನದ ಬೆಲೆ  3,12,750/-ರೂ ಬಾಳುವುದಾಗಿರುತ್ತದೆ.

Leave a Reply

Your email address will not be published. Required fields are marked *