ದಿನದ ಅಪರಾಧಗಳ ಪಕ್ಷಿನೋಟ 22ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಕ 21.11.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 22.11.2020 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಸಾಧಾರಣ ಕಳ್ಳತನ : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.13.11.2020 ರಂದು ಈ ಕೇಸಿನ ಪಿರ್ಯಾದಿದಾರರು ಕುಮರೇಶ್, ಭಾರತ್ ನಗರ, ಬೆಮಲ್ ನಗರ ರವರು  ತನ್ನ Royal Enfiled Bullet Classic 350 CC ಸಂಖ್ಯೆ ಕೆ.ಎ.08-Y.8915 ನ್ನು ಸಂಜೆ ಸುಮಾರು 6-30 ಗಂಟೆಗೆ ಮನೆಯ ಮುಂದೆ ಕಾಂಪೌಂಡ್ನಲ್ಲಿ ನಿಲ್ಲಿಸಿ, ನಂತರ ರಾತ್ರಿ ಸುಮಾರು 11.30 ಗಂಟೆಯಲ್ಲಿ  ಮನೆಯ ಕಾಂಪೌಂಡ್ ಗೇಟಿಗೆ ಬೀಗ ಹಾಕುವಾಗ ದ್ವಿಚಕ್ರ ವಾಹನ ಇದ್ದುದ್ದನ್ನು ನೋಡಿ. ಮನೆಯ ಬಾಗಿಲು ಲಾಕ್ ಮಾಡಿದ್ದು ದಿನಾಂಕ.14.11.2020 ರಂದು ಬೆಳಿಗ್ಗೆ 06-30 ಗಂಟೆಗೆ ಎದ್ದು ತನ್ನ ಮನೆಯ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ನೋಡಲಾಗಿ ಯಾರೋ ಕಳ್ಳರು ತನ್ನ Royal Enfiled Bullet Classic 350 CC ಸಂಖ್ಯೆ ಕೆ.ಎ.08-Y.8915, ENGINE NO.U3S5F1LF300787, CHASIS NO. ME3U3S5F1LF676911ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ರಸ್ತೆ ಅಪಘಾತಗಳು : 02

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 17.11.2020 ರಂದು ರಾತ್ರಿ ಸುಮಾರು 8.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರು ತಿರುಪತಿ ಒಂತಿಯಮ್‌ ಗ್ರಾಮ ಕೃಷ್ಣಗಿರಿ ಜಿಲ್ಲೆ ತಮಿಳ್ ನಾಡು ರವರ ಲಾರಿ ಸಂಖ್ಯೆ TN-29-AD-4569 ಯಲ್ಲಿ ನೂಚ್ಚು ಅಕ್ಕಿಯ ಮೂಟೆಗಳನ್ನು ಲೋಡ್ ಮಾಡಿಕೊಂಡು ಕಾವೇರಿಪಟ್ಟಣಂ(ತಮಿಳುನಾಡು)ಗೆ ಬರಲು ಕಾಮಸಮುದ್ರಂ-ತೊಪ್ಪನಹಳ್ಳಿ ಮಾರ್ಗವಾಗಿ ರಾತ್ರಿ ಸುಮಾರು 11.30 ಗಂಟೆಯಲ್ಲಿ ಕಳವಂಚಿ ವೃತ್ತದ ಸಮೀಪ ಸದರಿ ಲಾರಿಯನ್ನು ರಸ್ತೆಯ ಎಡ ಭಾಗದಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಎದರುಗಡೆಯಿಂದ ಆರೋಪಿ ಕಾಮೇಶ್ ಕುಮಾರ್‍, ಅಯ್ಯಕೊಂಡಂ ಗ್ರಾಮ, ವಿರುದುನಗರ ತಮಿಳ್ ನಾಡು ರವರು ಲಾರಿ ಸಂಖ್ಯೆ TN-28-AA-9479 ರ ಚಾಲಕ ಕಳವಂಚಿ ವೃತ್ತದ ಕಡೆಯಿಂದ ಕಾಮಸಮುದ್ರಂ ಕಡೆಗೆ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಲಾರಿಗೆ ಡಿಕ್ಕಿಹೊಡೆದ ಪ್ರಯುಕ್ತ ಪಿರ್ಯಾದಿಯ ಎರಡು ಕಾಲುಗಳಿಗೆ ಮೂಳೆ ಮುರಿತದ ಗಾಯವಾಗಿದ್ದು, ಬಲಗೈ ಮೊಣಕೈ ಬಳಿ ರಕ್ತ ಗಾಯವಾಗಿದ್ದು, ಲಾರಿಯ ಮುಂಭಾಗ ಜಕ್ಕಂಗೊಂಡಿರುತ್ತೆ. ಅಲ್ಲಿನ ಸ್ಥಳಿಯರು ಆಂಬ್ಯುಲೆನ್ಸ್ ವಾಹನದಲ್ಲಿ ಪಿರ್ಯಾದಿ ಮತ್ತು ಆರೋಪಿಯನ್ನು ಕೋಲಾರದ RL ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಿರ್ಯಾದಿಯು ದಿನಾಂಕ 18.11.2020 ರಂದು ಬೆಳಿಗ್ಗೆ 11.00 ಗಂಟೆಗೆ ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ .

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಕು// ಚಂದನ, ಸುಣ್ಣುಪಕುಂಟೆ, ಬೈರ್‍ಕೂರು ಹೋಬಳಿ, ಮುಳಬಾಗಿಲು ರವರು ದಿನಾಂಕ.14.11.20202 ರಂದು ಸಂಜೆ ತನ್ನ ಅತ್ತೆ ಅಂಬಿಕಾ ರವರೊಂದಿಗೆ ಹಬ್ಬದ ಸಾಮಾನು ತರಲು ಕೆ.ಜಿ.ಎಫ್ ಹೋಗಲು ಅವರ ಹೀರೋ ಪ್ಲೆಜರ್ ದ್ವಿಚಕ್ರ ವಾಹನ ಸಂಖ್ಯೆ: ಕೆ.ಎ.08-ಎಕ್ಸ್ 2473 ರಲ್ಲಿ ಅಂಬಿಕಾ ರವರು ದ್ವಿಕಚ್ರ ವಾಹನ ಚಲಾಯಿಸಿಕೊಂಡು ಪಿರ್ಯಾದಿ ಹಿಂಬದಿಯಲ್ಲಿ ಕುಳಿತುಕೊಂಡು ಇಬ್ಬರು ಕೆ.ಜಿ.ಎಫ್ ರಾಬರ್ಟಸನ್ ಪೇಟೆ ಎಂ.ಜಿ ಮಾರ್ಕೇಟ್ ಗೆ ಬಂದು, ಹಬ್ಬಕ್ಕೆ ಬೇಕಾದ ದಿನಸಿ ಸಾಮಾನುಗಳನ್ನು ತೆಗೆದುಕೊಂಡು ಮನೆಗೆ ವಾಪಸ್ಸು ಸ್ವರ್ಣನಗರದಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಲು ಅಂಬಿಕಾ ರವರು ಇಂಡಿಕೇಟರ್ ಹಾಕಿ ದ್ವಿಚಕ್ರ ವಾಹನವನ್ನು ನಿಧಾನವಾಗಿ ಪೆಟ್ರೋಲ್ ಬಂಕ್ ಒಳಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಮುಂದೆ ಪಾರಾಂಡಹಳ್ಳಿ ಕಡೆಯಿಂದ ರಾಯಲ್ ಎನ್ ಫೀಲ್ಡ್ ದ್ವಿಚಕ್ರ ವಾಹನ ಸಂಖ್ಯೆ:ಕೆ.ಎ.08-ಎಕ್ಸ್ 5503 ರನ್ನು ಅದರ ಚಾಲಕ ರಾಕೇಶ್ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆ ದಾಟುತ್ತಿದ್ದ ಕೆ.ಎ.08-ಎಕ್ಸ್ 2473  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಮತ್ತು ಅಂಬಿಕಾ ದ್ವಿಚಕ್ರ ವಾಹನ ಸಮೇತ ರಸ್ತೆ ಮೇಲೆ ಬಿದ್ದು, ಪಿರ್ಯಾದಿಯ ತಲೆಯ ಹಿಂಭಾಗ ರಕ್ತಗಾಯ ಮತ್ತು ಅಂಬಿಕಾರವರ ಎಡಗಾಲಿಗೆ ಮೂಳೆ ಮುರಿತದ ಗಾಯವಾಗಿ ಕೆ.ಎ.08-ಎಕ್ಸ್ 2473 ರ ದ್ವಿಚಕ್ರ ವಾಹನದ ಮುಂಭಾಗದ ಚಕ್ರ ಮತ್ತು ಪುಟ್ ರೆಸ್ಟ್ ಜಕಂ ಆಗಿದ್ದು. ರಾಯಲ್ ಎನ್ ಫೀಲ್ಡ್ ದ್ವಿಚಕ್ರ ವಾಹನ ಸಂಖ್ಯೆ:ಕೆ.ಎ.08-ಎಕ್ಸ್ 5503 ರ ಚಾಲಕ ರಾಕೇಶ್ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ನಿಲ್ಲಿಸಿ ಪರಾರಿಯಾಗಿರುತ್ತಾನೆಂದು, ಪಿರ್ಯಾದಿಯು ಅಂಬಿಕಾರವರಿಗೆ ಭಾರಿ ಗಾಯವಾಗಿ ಕೋಲಾರ ಜಾಲಪ್ಪ ಆಸ್ವತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಆಕೆಯ ಆರೈಕೆ ಮಾಡಿಕೊಂಡು, ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *