ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 21.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ದೊಂಬಿ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುರೇಖ ಕೊಂ ಗೋಪಾಲ್, ಆಲಂಬಾಡಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಾವ ಗುವ್ವಪ್ಪ ರವರ ಜಮೀನಿಗೆ ಸರ್ವೆಯರ್ ರವರು ಚೆಕ್ ಬಂದಿಗಳನ್ನು ಗುರ್ತಿಸಲು ದಿನಾಂಕ 20.10.2020 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಬಂದಿದ್ದಾಗ, ಪ್ರಸನ್ನ, ನವೀನ್, ರಾಮಕೃಷ್ಣಪ್ಪ & ಮುನಿವೆಂಕಟಪ್ಪ ರವರು ಚೆಕ್ ಬಂದಿಗಳನ್ನು ಗುರ್ತಿಸಬಾರದೆಂದು ಗುವ್ವಪ್ಪ, ಅವರ ಮಕ್ಕಳಾದ ಗೋಪಾಲ್, ಮಂಜುನಾಥ ರವರೊಂದಿಗೆ ಗಲಾಟೆಗಳನ್ನು ಮಾಡಿ, ಕೈಗಳಿಂದ ಹೊಡೆದಿದ್ದು, ನಂತರ ಸಂಜೆ 5.30 ಗಂಟೆಯಲ್ಲಿ ದೂರುದಾರರು ಆಲಂಬಾಡಿ ಗ್ರಾಮದ ಬಳಿಯಿರುವ ಬಂಡೆಯ ಹತ್ತಿರ ಕಸವನ್ನು ಗುಡಿಸುತ್ತಿದ್ದಾಗ, ನಂದೀಶ್, ಸುಂದರೇಶ್, ಸುನಿಲ್ ರವರು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈಯುತ್ತಿದ್ದು, ದೂರುದಾರರು ಕೇಳಿದ್ದಕ್ಕೆ ಗಲಾಟೆ ಮಾಡಿ, ದೊಣ್ಣೆ ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.