ದಿನದ ಅಪರಾಧಗಳ ಪಕ್ಷಿನೋಟ 21 ನೇ ಆಗಸ್ಟ್‌ 2019

–ಹಲ್ಲೆ :01

ಬಂಗಾರಪೇಟೆ ಪೊಲಿಸ್‌ ಠಾಣೆಯಲ್ಲಿ ಗಲಾಟೆ ಪ್ರರಕಣ ದಾಖಲಾಗಿರುತ್ತದೆ. ದಿನಾಂಕ: 20.08.2019 ರಂದು ದೂರುದಾರರಾದ ಶ್ರೀಮತಿ ಕಲ್ಪನಾ ಕೋಂ ರಾಜಣ್ಣ ಅತ್ತಿಗಿರಿಕುಪ್ಪ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 16.08.2019 ರಂದು ರಾತ್ರಿ ಸುಮಾರು 9.30 ಗಂಟೆಯಲ್ಲಿ ದೂರುದಾರರು ಕೆಲಸವನ್ನು ಮುಗಿಸಿಕೊಂಡು ವೆಂಕಟೇಶ್‌ ರವರ ಮನೆಯ ಮುಂದೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಳೆಯ ಧ್ವೇಷದಿಂದ ಆರೋಪಿಗಳಾದ ವೆಂಕಟೇಶ್‌ ಮತ್ತು ಸತ್ಯವೇಲು ರವರು ದೂರುದಾರರನ್ನು ಡೆಮಾಡಿ, ಏಕಾಏಕಿ ಜಗಳ ತೆಗೆದು ಕೈಗಳಿಂದ ಹೊಡೆದಿದ್ದು, ಕೆಟ್ಟ ಮಾತುಗಳಿಂದ ಬೈದು ರಕ್ತಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲಿಸ್‌ ಠಾಣೆಯಲ್ಲಿ ಹೆಂಗಸ್ಸು ಕಾಣೆಯಾಗಿರುವ ಪ್ರರಕಣ ದಾಖಲಾಗಿರುತ್ತದೆ. ದಿನಾಂಕ 19.08.2019 ರಂದು ದೂರುದಾರರಾದ ಶ್ರೀ. ರಘು ಬಿನ್‌ ಸೀನಪ್ಪ, ನಾಯಕರಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ಹೆಂಡತಿಯಾದ ಶ್ರೀಮತಿ ಅನಿತ, ವಯಸ್ಸು 20 ವರ್ಷ ರವರು ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿದ್ದು, ಸಂಬಂಧಿಕರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ.

Leave a Reply

Your email address will not be published. Required fields are marked *