ದಿನದ ಅಪರಾಧಗಳ ಪಕ್ಷಿನೋಟ 21 ನೇ ಮೇ 2019

– ದೊಂಬಿ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಕಾಶ್‌ ಸಿಂಗ್‌ ಬಿನ್ ಬಾಲಾಜಿ ಸಿಂಗ್‌, ತಟ್ನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಚಿಕ್ಕಪ್ಪನ ಮಗನಾದ ಏಕಾಂಬರ್ ಸಿಂಗ್ ರವರಿಗೆ ದಿನಾಂಕ 02.11.2016 ರಂದು ಬಂಗಾರಪೇಟೆ ತಾಲ್ಲೂಕು ಬೂರಗಮಾಕನಹಳ್ಳಿ ಗ್ರಾಮದ ನಂದಿನಿಬಾಯಿ ಬಿನ್ ಕನಕಸಿಂಗ್ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ದಿನಾಂಕ 15.05.2019 ರಂದು ನಂದಿನಿಬಾಯಿ ರವರು ತವರು ಮನೆಯಲ್ಲಿ ಮೃತಪಟ್ಟಿದ್ದು, ದಿನಾಂಕ 16.05.2019 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ನಂದಿನಿಬಾಯಿ ರವರ ಮೃತದೇಹವನ್ನು ಏಕಾಂಬರ್ ಸಿಂಗ್ ರವರ ಮನೆಯ ಬಳಿಗೆ ಆರೋಪಿಗಳಾದ ಸುಮಿತ್ರ, ಅಂಬುಬಾಯಿ, ಚಂದ್ರಿ, ಹನುಮಾನ್‌ ಸಿಂಗ್‌, ಶಿವ, ಕಿರಣ್, ಸಾಜನ್‌, ಪವನ್‌, ಸೂರಜ್‌, ರೋಷನ್, ಕನಕಸಿಂಗ್‌, ವನಜ ಮತ್ತು ಬಲ್ಲು ಮತ್ತು ಇತರೆ ಮೂರು ಜನರು ತಂದು ಏಕಾಂಬರ್ ಸಿಂಗ್ ರವರ ಮನೆಯ ಮುಂಭಾಗದ ಬಾಗಿಲು, ಕಿಟಕಿ ಗ್ಲಾಸ್ ಗಳನ್ನು ದೊಣ್ಣೆ, ಕಬ್ಬಿಣದ ರಾಡು ಮತ್ತು ಕಲ್ಲುಗಳಿಂದ ಹೊಡೆದು ಮನೆಯೊಳಗೆ ನುಗ್ಗಿ ಮನೆಯೊಳಗಿದ್ದ ಬೆಲೆ ಬಾಳುವ ವಸ್ತುಗಳನ್ನು ದ್ವಂಸಗೊಳಿಸಿ, ದೂರುದಾರರ ಚಿಕ್ಕಪ್ಪ ಮತ್ತು ಏಕಾಂಬರ್ ಸಿಂಗ್ ರವರಿಗೆ ಕೆಟ್ಟಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

 –ಹಲ್ಲೆ : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸರ್ತೀಶ್‌ ಕುಮಾರ್‌ ಬಿನ್ ಮುನಿವೆಂಕಟಪ್ಪ, ಕುಂದರಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ಮತ್ತು ಮುರಳೀಧರ ರವರು ದಿನಾಂಕ 19.05.2019 ರಂದು ರಾತ್ರಿ 9.00 ಗಂಟೆಯಲ್ಲಿ ಕುಂದರಸನಹಳ್ಳಿ ಗ್ರಾಮದ ಮುನಿಲಕ್ಷ್ಮಮ್ಮ ರವರ ಮನೆಯ ಮುಂದೆ ನಿಂತು ಮಾತನಾಡುತ್ತಿದ್ದಾಗ, ನಾಗರಾಜ್ ಮತ್ತು ಮುನಿವೆಂಕಟಪ್ಪ ರವರು ಅಲ್ಲಿಗೆ ಬಂದು ದೂರುದಾರರನ್ನು ಮತ್ತು ಮುರಳಿಧರ ರವರಿಗೆ ಜಮೀನಿನ ವಿಚಾರದಲ್ಲಿ ಕೇಸು ಹಾಕಿ ತೊಂದರೆ ಕೊಡುತ್ತಿರಾ ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು, ಮಚ್ಚು ಮತ್ತು ಕೈಗಳಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿದ್ದು,  ವಿನೋದ್‌ಕುಮಾರ್‌ ಮತ್ತು ರವಿ ರವರು ಸಹ ದೂರುದಾರನ್ನು ಮತ್ತು ಮುರಳೀಧರ ರವರನ್ನು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಇತರೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನಿಲರ್ಕ್ಷತನದಿಂದ ಸಾವು ಸಂಬವಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅನಿಲ್ ಕುಮಾರ್‌ ಬಿನ್ ವೆಂಕಟರಾಮಪ್ಪ, ಕೋಡಿಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಅಣ್ಣನಾದ ಕೆ.ವಿ ಶ್ರೀನಿವಾಸ, 26 ವರ್ಷ ರವರನ್ನು   ಬೇತಮಂಗಲ ವಾಸಿಯಾದ ಮುರುಗಪ್ಪ  ರವರು ಬೇತಮಂಗಲದ ಹನುಮಂತನಗರದಲ್ಲಿರುವ ಸೈಯದ್ ಜಿಯಾವುಲ್ಲಾ ರವರ ಮನೆ ರಿಪೇರಿ ಕೆಲಸಕ್ಕೆ ದಿನಾಂಕ-20-05-2019 ರಂದು ಕರೆದುಕೊಂಡು ಹೋಗಿದ್ದು, ಬೆಳಿಗ್ಗೆ 9.45 ಗಂಟೆಯಲ್ಲಿ ಶ್ರೀನಿವಾಸ ರವರು 3ನೇ ಮಹಡಿಗೆ ಮರಳು ಮೂಟೆಗಳನ್ನು ಮೇಲಕ್ಕೆ ಸಾಗಿಸಲು ಹುಕ್ಕಿಗೆ ಮರಳು ಮೂಟೆಗಳನ್ನು ಕಟ್ಟುತ್ತಿದ್ದಾಗ ಮೇಲಿಂದ ಹುಕ್ಕಿಗೆ ಕಟ್ಟಿದ ನೀಲಿಗಿರಿ ಮರ ಶ್ರೀನಿವಾಸರವರ ತಲೆಯ ಮೇಲೆ ಬಿದ್ದು ತಲೆಗೆ ರಕ್ತಗಾಯ ವಾಗಿದ್ದು, ಅವರನ್ನು ಚಿಕಿತ್ಸೆಗೆ ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ಮದ್ಯಾನ 12.05 ಗಂಟೆಯಲ್ಲಿ ಶ್ರೀನಿವಾಸ ರವರು ಮೃತ ಪಟ್ಟಿರುತ್ತಾರೆ. ಸೈಯದ್ ಜಯಾವುಲ್ಲಾ ಮತ್ತು ಮುರುಗಪ್ಪ ರವರು ಮನೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಯಾವುದೇ ಸುರಕ್ಷಿತ ಕ್ರಮಗಳನ್ನು ಅನುಸರಿಸದೇ, ಸುರಕ್ಷಿತ ವಸ್ತುಗಳನ್ನು ನೀಡದೇ ಅವೈಜ್ಞಾನಿಕವಾಗಿ ಕೆಲಸ ಮಾಡಿಸುತ್ತಿದ್ದುದ್ದರಿಂದ ಈ ಘಟನೆ ಸಂಭವಿಸಿರುತ್ತೆ.

 

Leave a Reply

Your email address will not be published. Required fields are marked *