ದಿನದ ಅಪರಾಧಗಳ ಪಕ್ಷಿನೋಟ 21 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 20.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಿಜಾಮುದ್ದೀನ್ ಬಿನ್ ಸೈಯದ್ ಮೊಹಮ್ಮದ್, ಕೊಂಡಶೆಟ್ಟಿಹಳ್ಳಿ ಗ್ರಾಮ, ಮಾಲೂರು ತಾಲ್ಲೂಕು ರವರು ದಿನಾಂಕ: 15.10.2020 ರಂದು ರಾತ್ರಿ 7.00 ಗಂಟೆಯಲ್ಲಿ SUZUKI FIERO ದ್ವಿ ಚಕ್ರ ವಾಹನ ಸಂ. ಕೆ.ಎ. 03 ಇಇ 0605 ರಲ್ಲಿ ಬೇತಮಂಗಲ-ಆಲದಮರ ರಸ್ತೆ ಮಾರ್ಗವಾಗಿ ಬರುತ್ತಿದ್ದಾಗ ಕೃಷ್ಣಾವರಂ ಬಸ್ ನಿಲ್ದಾಣದ ಬಳಿ ಪೆಟ್ರೋಲ್ ಇಲ್ಲದೆ ನಿಂತು ಹೋಗಿದ್ದು, ದೂರುದಾರರು ದ್ವಿಚಕ್ರವಾಹನವನ್ನು ಮೂರ್ತಿ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಒಂದು ಮರದ ಕೆಳಗೆ ನಿಲ್ಲಿಸಿ ದ್ವಿ ಚಕ್ರ ವಾಹನಕ್ಕೆ ಲಾಕ್ ಮಾಡಿಕೊಂಡು ಮನೆಗೆ ಹೋಗಿ ದಿನಾಂಕ: 16.01.2021 ಬೆಳಿಗ್ಗೆ 10.00 ಗಂಟೆಗೆ ಬಂದು ನೋಡಿದಾಗ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ.

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ತಿಮ್ಮರಾಯಪ್ಪ ಬಿನ್ ಚಲಪ್ಪ, ಮಲ್ಲಯ್ಯನಗುರ್ಕಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 20.01.2021 ರಂದು ಸಂಜೆ ಮಲ್ಲೆಂಗುರ್ಕಿ ಗ್ರಾಮದ ವಾಸಿಯಾದ ಶ್ರೀನಿವಾಸ್ ರವರು ದೂರುದಾರರಿಗೆ ಪೋನ್ ಮಾಡಿ, ಬಂಗಾರಪೇಟೆಯಿಂದ ಬೂಸವನ್ನು ಹಾಕಿಕೊಂಡು ಹೋಗಬೇಕು ಬಾ ಎಂತ ತಿಳಿಸಿದ್ದು, ನಂತರ ದೂರುದಾರರು & ಶ್ರೀನಿವಾಸ್‌ ರವರು ಬೂಸವನ್ನು ಆಟೋದಲ್ಲಿ ಹಾಕಿಕೊಂಡು ಬಂಗಾರಪೇಟೆ-ಮಲ್ಲೆಂಗುರ್ಕಿ ರಸ್ತೆಯ ರೈಲ್ವೇ ಅಂಡರ್ ಪಾಸ್ ಬಳಿ ಸಂಜೆ 5.30 ಗಂಟೆಯಲ್ಲಿ ಹೋಗುತ್ತಿದ್ದಾಗ, ಶ್ರೀನಿವಾಸ್ ರವರು ಮಲ ವಿಸರ್ಜನೆಗೆ ನಿಲ್ಲಿಸಿದ್ದು, ಮಲ ವಿಸರ್ಜನೆ ಮಾಡುತ್ತಿದ್ದಾಗ, ವೀರಣ್ಣ, ರವಿ, ಮಂಜುನಾಥ ರವರುಗಳು ಬಂದು ಯಾವುದೋ ಹಳೆಯ ದ್ವೇಷದಿಂದ ದೂರುದಾರರ ಮೇಲೆ ಜಗಳ ಮಾಡಿ ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

Leave a Reply

Your email address will not be published. Required fields are marked *