ದಿನದ ಅಪರಾಧಗಳ ಪಕ್ಷಿನೋಟ 21 ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍20.01.2020 ರಂದು    ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

– ಕನ್ನಕಳುವು : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರು ಪನ್ನೀರ್‍ ಸೆಲ್ವಂ ರವರ ಮಗಳಾದ ಶ್ರೀಮತಿ. ಪ್ರಿಯದರ್ಶಿನಿ, ಅಳಿಯ ರಾಜ ಅವರ ಮಗ ಕೆವಿನ್ ದರ್ಶನ್ ಬೆಮಲ್ ನಗರದ ವಸಂತನಗರದಲ್ಲಿರುವ ಮನೆ ಸಂಖ್ಯೆ-63 ರಲ್ಲಿ ವಾಸವಾಗಿದ್ದು, ಪ್ರಿಯದರ್ಶಿನಿ, ಆಕೆಯ ಗಂಡ ಹಾಗೂ ಮಗ ಮತ್ತು ಪಿರ್ಯಾದಿಯ ಹೆಂಡತಿ ಕಲೈವಾಣಿ ರವರೊಂದಿಗೆ ದಿನಾಂಕ.13-01-2020 ರಂದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಈಳಪಾಕಂ ಗ್ರಾಮಕ್ಕೆ ಮತ್ತು ನೆಂಟರಿಷ್ಟರ ಮನೆಗಳಿಗೆ ಹೋಗುವ ಸಮಯದಲ್ಲಿ ಅವರ ಮನೆಯ ಬೀಗದ ಕೈಯನ್ನು ದೂರುದಾರರಿಗೆ ನೀಡಿದ್ದು ದೂರುದಾರರು ಪ್ರತಿದಿನ ಸಂಜೆ 5-00 ಗಂಟೆಗೆ ಮನೆಗೆ ಬಂದು ರಾತ್ರಿ ಮಲಗಿಕೊಳ್ಳುತ್ತಿದ್ದು, ದಿನಾಂಕ.19-01-2020 ರಂದು ರಾತ್ರಿ 7-00 ಗಂಟೆಗೆ ದೂರುದಾರರು ಮಗಳ ಮನೆಗೆ ಬಂದು ಗೇಟಿನ ಬೀಗ ತೆಗೆದು ಒಳಗೆ ಹೋದಾಗ ಗೇಟಿನ ಪಕ್ಕದಲ್ಲಿರುವ ಟೆರೆಸ್ ಗೆ ಹೋಗುವ ಸ್ಟೇರ್ ಕೇಸ್ ಗ್ರಿಲ್ ಗೇಟ್ ಮತ್ತು, ಅದರ ಹ್ಯಾಂಗಿಂಗ್ ಬೀಗ ನೆಲದ ಮೇಲೆ ಬಿದ್ದಿದ್ದು, ಮೈನ್ ಡೋರ್ ತೆರೆದಿದ್ದು, ಅದರ ಡೋರ್ ಲಾಕ್ ನ ಕೊಂಡಿ ಮತ್ತು ಕ್ಲಾಂಪ್ ಬೆಂಡಾಗಿದ್ದರಿಂದ ಒಳಗೆ ಹೋಗಿ ನೋಡಿ, ಅವರ ಮಗಳು ಪ್ರಿಯದರ್ಶಿನಿಗೆ ಪೋನ್ ಮಾಡಿ ಮಾಹಿತಿ ತಿಳಿಸಿದ್ದು, ದಿನಾಂಕ.20-01-2020 ರಂದು ಪ್ರಿಯದರ್ಶಿನಿ ರವರು ಮನೆಗೆ ಬಂದು ಪರಿಶೀಲಿಸಿದಾಗ ಮನೆಯ ರೂಮಿನ ಬೀರುವಿನಲ್ಲಿಟ್ಟಿದ್ದ 1) ಚಿನ್ನದ ನಕ್ಲೆಸ್, ತೂಕ ಸುಮಾರು 16.5 ಗ್ರಾಂ, 2) ಚಿನ್ನದ ಸೈಡ್ ಮತ್ತು ಡ್ರಾಪ್ಸ್ ಸುಮಾರು 6.5 ಗ್ರಾಂ, 3) ಚಿನ್ನದ ಹಾರ ತೂಕ ಸುಮಾರು 37.5 ಗ್ರಾಂ, 4) ಕಿವಿ ಜುಮುಕಿ ತೂಕ ಸುಮಾರು 6 ಗ್ರಾಂ, ಒಟ್ಟು 66.5 ಗ್ರಾಂ ತೂಕದ ಸುಮಾರು 1,33,000/- ರೂ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿರುತ್ತಾರೆ.

– ರಸ್ತೆ ಅಪಘಾತಗಳು : 02

ಕಾಮಸಮುದ್ರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 19.01.2020 ರಂದು ಸಂಜೆ 4.00 ಗಂಟೆಯಲ್ಲಿ ಈ ಕೇಸಿನ ದೂರುದಾರರು ಮುರಗೇಶ್, ೨೪ ವಷ, ಕನಮನಹಳ್ಳಿ, ಬಂಗಾರಪೆಟೆ (ತ) ರವರು ತನ್ನ ಟಿವಿಎಸ್‌ ಸ್ಟಾರ್‍ ಸಿಟಿ ಸಂಖ್ಯೆ: ಕೆಎ.೦೧.ಹೆಚ್‌ಯೂ.೩೮೪೫ 3845 ದ್ವಿ ಚಕ್ರ ವಾಹನದಲ್ಲಿ ಕನಮನಹಳ್ಳಿ ಗ್ರಾಮದಿಂದ ಚತ್ತಗುಟ್ಟಹಳ್ಳಿ ಗ್ರಾಮಕ್ಕೆ ಹೋಗಲು ಕನಮನಹಳ್ಳಿ ಗ್ರಾಮ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ KA-08-A-0230 ಕಾರನ್ನು ಅದರ ಚಾಲಕ (ಕಾರ್ತಿಕ್.ವಿ ಬಿನ್ ವೆಂಕೋಬರಾವ್, ಕುಂತೂರು ಗ್ರಾಮ, ಮಾಲೂರು ತಾಲ್ಲೂಕು) ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಕಾರಣ ದೂರುದಾರರ ವಾಹನದ ಸಮೇತ ಕೆಳಗೆ ಬಿದ್ದು ಸೊಂಟಕ್ಕೆ ಒಳಗಾಯವಾಗಿರುತ್ತೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.01.2020 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ರಮೇಶ್, ಆಲಂಬಾಡಿ ಗ್ರಾಮ ಬಂಗಾರಪೇಟೆ ರವರು ಮತ್ತು ಆತನ ಸ್ನೇಹಿತ ರಂಗನಾಥ, ೨೮ ವರ್ಷ, ಆಲಂಬಾಡಿ ಗ್ರಾಮ ಬಂಗಾರಪೇಟೆ ರವರು  ಬಂಗಾರಪೇಟೆಯಂದ ತನ್ನ ಗ್ರಾಮಕ್ಕೆ ವಾಪಸ್ಸು ಹೋಗಲು ರಂಗನಾಥ ರವರು ದ್ವಿಚಕ್ರ ವಾಹನ ಸಂಖ್ಯೆ ಕೆಎ-08 ಎಸ್-9713 ವಾಹನವನ್ನು ಚಲಾಯಿಸುತ್ತಿದ್ದು, ಬೂದಿಕೋಟೆ ರಸ್ತೆಯಲ್ಲಿ ಸಿ ರಹೀಂ ಕಾಂಪೌಂಡ್ ರೈಲ್ವೇ ಗೇಟ್ ನ್ನು ಬಿಟ್ಟು ಮುಂದೆ ರಸ್ತೆಯ ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂಭಾಗದಿಂದ ಟ್ರಾಕ್ಟರ್ ಸಂಖ್ಯೆ ಕೆ.ಎ-07 ಬಿ.ಕೆ-4353 ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹವನ್ನು ಓವರ್ ಟೆಕ್ ಮಾಡಲು ಬಂದು, ಟ್ರಾಕ್ಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿ, ಟ್ರಾಕ್ಟರ್ ಚಕ್ರ ಮೃತ ರಂಗನಾಥ ರವರ ತಲೆಯ ಮೇಲೆ ಹರಿದು ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪಿರ್ಯಾದಿಗೆ ಬಲಕೈಗೆ ಮತ್ತು ಬಲಕಾಲಿಗೆ ರಕ್ತಗಾಯಗಳಾಗಿರುತ್ತೆಂತ ದೂರು ನೀಡಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶಿವ, ಜೆ.ಕೆ.ಪುರಂ ಗ್ರಾಮ ರವರ ಅಣ್ಣನಾದ  ವೆಂಕಟರಾಮ, ೩೮ ವರ್ಷ ರವರು ಸುಮಾರು ವರ್ಷಗಳಿಂದ ಅತಿಯಾದ ಮದ್ಯೆಸೇವೆನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದು, ಸುಮಾರು ತಿಂಗಳಿಂದ ಆಗಾಗ ಹೊಟ್ಟೆನೋವು ಸಹ ಬರುತ್ತಿದ್ದು,  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ವಾಸಿಯಾಗಿರುವುದಿಲ್ಲ, ವೆಂಕಟರಾಮ ರವರಿಗೆ ಒಂದು ವಾರದಿಂದ ಹೊಟ್ಟೆನೋವು ಜಾಸ್ತಿಯಾಗಿದ್ದು, ದಿನಾಂಕ 20.01.2020 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಹೊಟ್ಟೆನೋವು ತಾಳಲಾಗದೆ ಮನೆಯ ಹಾಲ್ ನಲ್ಲಿದ್ದ ಸೀಲಿಂಗ್ ಪ್ಯಾನ್ ಗೆ ಒಂದು ಸೀರೆಯಿಂದ ನೇಣು ಹಾಕಿಕೊಂಡು ನೇತಾಡುತ್ತಿದ್ದು, ತಕ್ಷಣ ದೂರುದಾರರು ಮತ್ತು ಅಕ್ಕ-ಪಕ್ಕದ ಮನೆಯವರು ಪ್ಯಾನ್ ಗೆ ನೇತಾಡುತ್ತಿದ್ದ ವೆಂಕಟರಾಮ ರವರನ್ನು ಕೆಳಗೆ ಇಳಿಸಿ ನೋಡಲಾಗಿ ಉಸಿರಾಡುತ್ತಿದ್ದು ತಕ್ಷಣ ಅವರನ್ನು ಚಿಕಿತ್ಸೆಯ ಬಗ್ಗೆ ಕುಪ್ಪಂನ ಸಾರ್ವಜನಿಕ ಆಸ್ಪತ್ರೆಗೆ ಆಟೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗಮದ್ಯೆದಲ್ಲಿ  ವೆಂಕಟರಾಮ ರವರು ಮೃತ ಪಟ್ಟಿರುತ್ತಾರೆ.

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಖಲಾಗಿರುತ್ತದೆ. ದಿನಾಂಕ 20.01.2020 ರಂದು ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬಿನ್‌ ಮುನಿಯಪ್ಪ ಕಳ್ಳಿಕುಪ್ಪ ಗ್ರಾಮ ರವರು ನೀಡಿದ ದೂರಿನಲ್ಲಿ ಶ್ರೀಮತಿ ಜ್ಯೋತಿ ಕೆ ಕೋಂ ಮೂರ್ತಿ , 28 ವರ್ಷ, ರವರಿಗೆ 3 ವರ್ಷಗಳ ಹಿಂದೆ ಬಂಗಾರಪೇಟೆ ಕೆರೆಕೋಡಿ ವಾಸಿ ಮೂರ್ತಿ ರವರೊಂದಿಗೆ ಮದುವೆಯಾಗಿದ್ದು, 2 ವರ್ಷಗಳ ಹಿಂದೆ ತನ್ನ ಗಂಡನೊಂದಿಗೆ ಸಂಸಾರದ ವಿಚಾರದಲ್ಲಿ ಮನಸ್ಥಾಪಗಳು ಇದ್ದುದರಿಂದ ತವರು ಮನೆಗೆ ಬಂದು ವಾಸವಾಗಿದ್ದು, ದಿನಾಂಕ 19.01.2020 ರಂದು ಸಂಜೆ 6.30 ಗಂಟೆಯಲ್ಲಿ ತಲೆ ನೋವು ಪ್ರಯುಕ್ತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಸಿ ರಾತ್ರಿ 8.30 ಗಂಟೆಯಲ್ಲಿ ಊಟ ಮಾಡುವಾಗ ಮುದ್ದೆಯಲ್ಲಿ ಮಾತ್ರೆಗಳನ್ನು ಹಾಕಿಕೊಂಡು ಸೇವಿಸಿದ್ದು, ಅರ್ದ ಗಂಟೆಯ ನಂತರ ವಾಂತಿಯಾಗಿದ್ದರಿಂದ ಕೂಡಲೇ ದೂರುದಾರರು ಮತ್ತು ಕುಟುಂದವರು ಕೆಜಿಎಫ್ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಬಳಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮತಪಟ್ಟಿರುವುದಾಗಿ ತಿಳಿಸಿರುತ್ತಾರೆಂದು ದೂರು.

Leave a Reply

Your email address will not be published. Required fields are marked *