ದಿನದ ಅಪರಾಧಗಳ ಪಕ್ಷಿನೋಟ 21ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 20.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಸಾಧಾರಣ ಕಳ್ಳತನ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 12.02.2021 ರಂದು ರಾತ್ರಿ 8.00 ಗಂಟೆಗೆ ಪಿರ್ಯಾದಿ  ಸುಗಂಧಿ, ಪೈಪ್‌ಲೈನ್, ರಾಬರ್ಟ್‌ಸನ್‌ಪೇಟೆ ವಾಸಿ ರವರ ಗಂಡ, ತನ್ನ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನ ಸಂ. KA-08-S-2109 ನ್ನು ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದು, ಮರು ದಿನ ದಿನಾಂಕ. 13.02.2021 ರಂದು ಬೆಳಿಗ್ಗೆ 6.30 ಗಂಟೆಗೆ ಪಿರ್ಯಾದಿ ಗಂಡ ಹೊರಗಡೆ ಬಂದು ನೋಡಿದಾಗ ದ್ವಿಚಕ್ರವಾಹನ ಕಾಂಪೌಂಡ್ ನಲ್ಲಿ ಇರದೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದುರುತ್ತಾರೆ,  ಸದರಿ ವಾಹನ ಸುಮಾರು 30,000/- ರೂ. ಬೆಲೆಬಾಳುವುದಾಗಿರುತ್ತೆಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *