ದಿನದ ಅಪರಾಧಗಳ ಪಕ್ಷಿನೋಟ 21ನೇ ಡಿಸೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 20.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರಾದ ಶ್ರೀಮತಿ ಶಹಾನಾಜ್ ಬಾನು, ಸಿ ರಹೀಂ ಕಾಂಪೌಂಡ್, ಬಂಗಾರಪೇಟೆ ರವರ ಗಂಡನಾದ ರಫೀಕ್ ಪಾಷ, ೪೫ ವರ್ಷ ರವರು ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 19.12.2020 ರಂದು ರಾತ್ರಿ ಸುಮಾರು 11.30 ಗಂಟೆಯಲ್ಲಿ ರಫೀಕ್ ಪಾಷ ರವರು ಊಟ ಮಾಡುತ್ತಿದ್ದಾಗ, ಆತನ ಮೊಬೈಲ್ ಗೆ ಆರೋಪಿಯಾದ ಆ3-ವಜೀರ್ ಎಂಬುವರು ಪೋನ್ ಮಾಡಿ, ಲಾರಿಯ ಬಳಿ ಬರಲು ತಿಳಿಸಿದ್ದರಿಂದ, ರಾತ್ರಿ ಸುಮಾರು 11.45 ಗಂಟೆಗೆ ರಫೀಕ್ ಪಾಷ ರವರು ಮನೆಯಿಂದ ಹೋಗಿದ್ದು, ದಿನಾಂಕ 20.12.2020 ರಂದು ಬೆಳಿಗ್ಗೆ 6.30 ಗಂಟೆ ಮಧ್ಯೆ ಆರೋಪಿಗಳಾದ ಆ1-ಮೆಹಬೂಬ್, ಆ2-ಅಕ್ರಮ್ & ಆ3-ವಜೀರ್ ರವರುಗಳು ಸೇರಿ ಲಾರಿ ಸಂಖ್ಯೆ ಕೆಎ-01-ಎಕೆ-1995 ರ ವಾಹನವನ್ನು ರಫೀಕ್ ಪಾಷ ರವರ ಹೊಟ್ಟೆಯ ಮೇಲೆ, ಕಾಲುಗಳ ಮೇಲೆ ಹತ್ತಿಸಿ ಕೊಲೆ ಮಾಡಿ, ಗಂಗಮ್ಮನಪಾಳ್ಯದ ಆಟೋ ನಿಲ್ದಾಣದ ಬಳಿ ಮಲಗಿಸಿ ಹೊರಟುಹೋಗಿರುತ್ತಾರೆಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *