ದಿನದ ಅಪರಾಧಗಳ ಪಕ್ಷಿನೋಟ 21ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಕ 20.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

 

ಇತರೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಮಾಡಿದವನನ್ನು ಹಿಡಿದು ಪ್ರಕರಣ ದಾಖಲಿಸಿರುತ್ತಾರೆ. ದಿನಾಂಕ 20.11.2020 ರಂದು 15-30 ಗಂಟೆಗೆ ದೂರುದಾರರಾದ ಶ್ರೀ. ಜಗದೀಶ್‌ರೆಡ್ಡಿ, ಪಿ.ಎಸ್.ಐ ರವರು ಸಿಬ್ಬಂದಿಯೊಂದಿಗೆ ಬಂಗಾರಪೇಟೆಯ ಕೆಂಪೇಗೌಡ ವೃತ್ತದ ಬಳಿ ಇದ್ದಾಗ, ಶಬ್ಬೀರ್‌, ಕುಂಬಾರಪಾಳ್ಯ ಗುಡಿಸಲು, ಬಂಗರಪೇಟೆ ರವರು ನಂಬರ್ ಪ್ಲೇಟ್ ಇಲ್ಲದ ಆಟೋವಿನಲ್ಲಿ ಬರುತ್ತಿದ್ದು, ಪೊಲೀಸರನ್ನು ಕಂಡು ವಾಹನವನ್ನು ಹಿಂದಕ್ಕೆ ತಿರುಗಿಸಿ ಓಡಿ ಹೋಗಲು ಪ್ರಯತ್ನಿಸಿದ್ದು, ಹಿಂಭಾಲಿಸಿ ವಾಹನ ಸಮೇತ ಹಿಡಿದು ವಿಚಾರಿಸಲಾಗಿ ಆಟೋವನ್ನು ಕಳ್ಳತನ ಮಾಡಿ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿರುತ್ತಾನೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಂಕರಪ್ಪ ಬಿನ್ ತಿಮ್ಮಯ್ಯ, ದ್ಯಾಪಸಂದ್ರ ಗ್ರಾಮ, ಮಾಲೂರು ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ 19.11.2020 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ದೂರುದಾರರ ಮಗಳು ರೂಪ, 26 ವರ್ಷ ಮತ್ತು ಆಕೆಯ ಗಂಡ ಸುರೇಶ್, 28 ವರ್ಷ ಇಬ್ಬರೂ ಜೀವನದಲ್ಲಿ ಜಿಗುಪ್ಸೆಗೊಂದು ಮುಗಳಬೆಲೆ ಗ್ರಾಮದಲ್ಲಿರುವ ವೆಂಕಟರಾಮಪ್ಪ ರವರ ಕೃಷಿಹೊಂಡದ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *