ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 20.10.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 21.10.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕೊಲೆ : ಇಲ್ಲ
– ಕೊಲೆ ಪ್ರಯತ್ನ : ಇಲ್ಲ
– ಡಕಾಯಿತಿ : ಇಲ್ಲ
– ಸುಲಿಗೆ : ಇಲ್ಲ
– ಕನ್ನ ಕಳುವು : ಇಲ್ಲ
– ಸಾಧಾರಣ ಕಳ್ಳತನ : ಇಲ್ಲ
– ಮೋಸ/ವಂಚನೆ : ಇಲ್ಲ
– ರಸ್ತೆ ಅಪಘಾತಗಳು : ಇಲ್ಲ
– ದೊಂಬಿ : ಇಲ್ಲ
– ಜೂಜಾಟ ಕಾಯ್ದೆ : ಇಲ್ಲ
– ಅಪಹರಣ : ಇಲ್ಲ
– ಹಲ್ಲೆ : 02
ಚಾಂಪಿಯನ್ರೀಫ್ಸ್ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.
ದೂರುದಾರರಾದ ಶ್ರೀ. ಶ್ರೀನಿವಾಸ ಮೂರ್ತಿ ಬಿನ್ ಪ್ರಭಾಕರನ್, ಇ.ಟಿ ಬ್ಲಾಕ್, ಚಾಂಪಿಯನ್ರೀಫ್ಸ್, ಕೆ.ಜಿ.ಎಫ್ ರವರು ಹೆಂಡತಿ ಶ್ರೀಮತಿ ಕಲೈವಾಣಿಗೆ ಸಂಸಾರದ ವಿಚಾರದಲ್ಲಿ ಅನ್ಯೋನ್ಯತೆ ಇಲ್ಲದೆ ಇರುವುದರಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ದಿನಾಂಕ:20.10.2020 ರಂದು ಸಂಜೆ 4.00 ಗಂಟೆಗೆ ದೂರುದಾರರು ಕಲೈವಾಣಿರವರು ವಾಸಿಸುತ್ತಿರುವ ಮನೆ ಬಳಿ ಹೋಗಿ ಕಲೈವಾಣಿರವರೊಂದಿಗೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಮದಿಮಾರನ್, ಇಳಮಾರನ್, ದಿನೇಶ್, ಜೋಸ್ವಾ, ಮತ್ತು ಅಪ್ಪು ರವರು ದೂರುದಾರರಿಗೆ ನೀನು ಇಲ್ಲಿಗೆ ಬಂದು ನಮ್ಮ ಏರಿಯಾದ ವಾಸಿ ಕಲೈವಾಣಿ ರವರೊಂದಿಗೆ ಗಲಾಟೆ ಮಾಡುತ್ತೀಯಾ ಎಂದು ಹೇಳಿ, ಮಚ್ಚು, ದೊಣ್ಣೆ ಮತ್ತು ಕೈಗಳಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ.
ದೂರುದಾರರಾದ ಶ್ರೀ. ರವಿ ಕುಮಾರ್ ಬಿನ್ ರಮೇಶ್, ಇ.ಟಿ ಬ್ಲಾಕ್, ಚಾಂಪಿಯನ್ರೀಫ್ಸ್, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ:20.10.2020 ರಂದು ಸಂಜೆ 4.00 ಗಂಟೆಯಲ್ಲಿ ಶ್ರೀನಿವಾಸ ಮೂರ್ತಿ ರವರು ತನ್ನ ಸಂಸಾರದ ವಿಚಾರದಲ್ಲಿ ಅನ್ಯೋನ್ಯತೆ ಇಲ್ಲದೆ ಬೇರೆ ಯಾಗಿ ವಾಸಿಸುತ್ತಿರುವ ಆತನ ಹೆಂಡತಿ ರವರ ಮನೆ ಬಳಿ ಬಂದು ಕಲೈವಾಣಿ ರವರೊಂದಿಗೆ ಏರು ದ್ವನಿಯಲ್ಲಿ ಬೈದಾಡಿ ಗಲಾಟೆ ಮಾಡುತ್ತಿದ್ದಾಗ ಸಮಾಧಾನ ಪಡಿಸಲು ಬಂದ ಮದಿಮಾರನ್, ಇಳಮಾರನ್, ದಿನೇಶ್, ಅಪ್ಪು ಮತ್ತು ದೂರುದಾರರೊಂದಿಗೆ ಗಲಾಟೆ ಮಾಡಿ ಕೈಗಳಿಂದ ಮತ್ತು ಮರದ ರಿಫೀಸ್ ನಿಂದ ಹೊಡೆದಿರುತ್ತಾರೆ.
– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : ಇಲ್ಲ
– ಅಬಕಾರಿ ಕಾಯ್ದೆ : ಇಲ್ಲ
– ಎನ್.ಡಿ.ಪಿ.ಎಸ್ ಕಾಯ್ದೆ : ಇಲ್ಲ
– ಇತರೆ : ಇಲ್ಲ
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ
– ಅಸ್ವಾಭಾವಿಕ ಮರಣ ಪ್ರಕರಣ : ಇಲ್ಲ