ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 20.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 02
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ 2 ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ 20.08.2020 ರಂದು ಬೆಳಿಗ್ಗೆ ಈ ಕೇಸಿನ ಪಿರ್ಯಾದಿದಾರರಾದ ಮುನಿವಂಕಟಪ್ಪ, ಹುಣಸನಹಳ್ಳಿ ಬಂಗಾರಪೇಟೆ ರವರು ಕೆಜಿಎಫ್ ನಲ್ಲಿ ಬೋರ್ವೆಲ್ ರಿಪೇರಿ ಮಾಡುವ ಸಲುವಾಗಿ ತನ್ನ ದ್ವಿಚಕ್ರವಾಹನ ಸೂಪರ್ ಎಕ್ಸೆಲ್ ರಲ್ಲಿ ಬಂಗಾರಪೇಟೆ-ಮಲ್ಲಂಗುರ್ಕಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-30 ಯು-5557 ರ ಸವಾರ ಏಕಾಏಕಿ ಬಲಗಡೆಗೆ ಬಂದು ಪಿರ್ಯಾದಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಪಿರ್ಯಾದಿ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಕಾಲು ಕೈಗಳಿಗೆ ರಕ್ತಗಾಯವಾಗಿ ತಲೆಯ ಹಿಂಭಾಗ ಬಲ ಭಾಗದ ಕೆಳಗೆ ತರಚಿದ ಗಾಯಗಳಾಗಿರುತ್ತದೆ.
ದಿನಾಂಕ 18.08.2020 ರಂದು ಬೆಳಿಗ್ಗೆ ಸುಮಾರು 7-00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರು ಗೋಪಾಲ್ ರಾಮಸಂದ್ರ ಗ್ರಾಮ, ಬಂಗಾರಪೇಟೆ ರವರು ತಮ್ಮ ಸೂಪರ್ ಎಕ್ಸೆಲ್ ದ್ವಿಚಕ್ರ ವಾಹನ ರಲ್ಲಿ ಬೂದಿಕೋಟೆಯಿಂದ ರಾಮಸಂದ್ರಕ್ಕೆ ಪೂಜೆ ಸಾಮಾಗ್ರಿಗಳನ್ನು ತೆಗೆದುಕೊಂಡು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ರಾಮಸಂದ್ರ ಕಡೆಯಿಂದ ಟೆಂಪೋ ಸಂಖ್ಯೆ ಕೆಎ-07-ಎ-8433 ನ್ನು ಅದರ ಚಾಲಕನು ರಾಮಸಂದ್ರ ಗ್ರಾಮದಿಂದ ಬೂದಿಕೋಟೆ ಕಡೆ ಹೋಗಲು ಅತಿವೇಗ ಮತ್ತು ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಣೆಯ ಎಡ ಭಾಗಕ್ಕೆ ಮತ್ತು ತಲೆಯ ಮೇಲೆ ರಕ್ತಗಾಯಗಳಾಗಿದ್ದು, ಮತ್ತು ಎಡತೊಡೆಗೆ ಬಲವಾದ ರಕ್ತಗಾಯವಾಗಿದ್ದು, ಟೆಂಪೋ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೊರಟು ಹೋಗಿರುತ್ತಾನೆ.