ದಿನದ ಅಪರಾಧಗಳ ಪಕ್ಷಿನೋಟ 21ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 20.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪಾನಸಂಬಾಲ್‌, ಸಿ.ಎಸ್.ಓ., ಸ್ವರ್ಣ ಭವನ, ಕೆ.ಜಿ.ಎಫ್ ರವರು ದಿನಾಂಕ: 20.03.2020  ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಬಿ.ಜಿ.ಎಂ.ಎಲ್. ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ಎನ್.ಡಿ. ಮಿಲ್ ಗೆ ಗಸ್ತಿಗಾಗಿ ಹೋದಾಗ ಮಿಲ್ ಒಳಗಿನಿಂದ ಶಬ್ದ ಕೇಳಿಸಿದ್ದು, ತಕ್ಷಣ ಸೀಲ್ ಮಾಡಿರುವ ಮಿಲ್ ಡೋರ್ ತೆಗೆಸಿ ಒಳಗೆ ಹೋದಾಗ ಒಟ್ಟು 06 ಆರೋಪಿಗಳು ಚಿನ್ನದ ಗಣಿಯ ಮಿಲ್ ನೊಳಗಿದ್ದ ಮಣ್ಣನ್ನು ಕಳುವು ಮಾಡಲು ಪ್ರಯತ್ನಿಸುತ್ತಿದ್ದು, ಅವರನ್ನು ದೂರುದಾರರು ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ಹಿಡಿಯಲು ಪ್ರಯತ್ನಿಸಿದ್ದು, 1. ಕುಮಾರ್‌, ಕೆ.ಎನ್.ಜಿ.ಎಸ್ ಬ್ಲಾಕ್, 2. ಸತ್ಯವೇಲು, ಡಿ ಬ್ಲಾಕ್, ಮಸ್ಕಂ, 3. ಆಂಥೋನಿ, ಸಿ. ಬ್ಲಾಕ್ ರವರನ್ನು ಹಿಡಿದುಕೊಂಡಿದ್ದು, 3 ಜನ ಆರೋಪಿಗಳು ತಪ್ಪಿಸಿಕೊಂಡು ಓಡಿಹೋಗಿರುತ್ತಾರೆ.

 

– ದೊಂಬಿ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರುಕ್ಮನ್‌ ರೆಡ್ಡಿ ಬಿನ್ ಜಯರಾಮರೆಡ್ಡಿ, ಎಂ.ಆರ್‌.ಕೊತ್ತೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೆ  ಮತ್ತು ವೆಂಕಟರಾಮ, ಗೋಪಾಲಪ್ಪ, ಮುರುಗೇಶ್‌, ಮುರಳಿ, ಸುಧಾ, ಮಂಜುಳಾ ರವರಿಗೆ ಈ ಮೊದಲೆ ಗಲಾಟೆಗಳಿದ್ದು, ದಿನಾಂಕ 20.03.2020 ರಂದು ರಾತ್ರಿ 9.00 ಗಂಟೆಯಲ್ಲಿ  ದೂರುದಾರರ ಅಣ್ಣ ಮತ್ತು ದೂರುದಾರರು ಹಾಗೂ ದೊಡ್ಡಪ್ಪನ ಮಗಾನಾದ ವಿಜಯ ಭಾಸ್ಕರ್ ರೆಡ್ಡಿ ರವರು ಹಳೆ ಮನೆಯ ಬಳಿ ಹೋಗಿ ಮನೆ ದುರಸ್ಥಿ ಮಾಡಲು ನೊಡುತ್ತಿದ್ದಾಗ, ವೆಂಕಟರಾಮ, ಗೋಪಾಲಪ್ಪ, ಮುರುಗೇಶ್‌, ಮುರಳಿ, ಸುಧಾ, ಮಂಜುಳಾ ರವರು ಅಕ್ರಮ ಗುಂಪು ಕಟ್ಟಿಕೊಂಡು  ದೂರುದಾರರ ಅಣ್ಣಂದಿರ ಬಳಿ ಬಂದು ವಿನಾಕಾರಣ ಗಲಾಟೆ ಮಾಡಿ, ಪ್ರಕಾಶ್ ರೆಡ್ಡಿ ರವರನ್ನು ಚಾಕುವಿನಿಂದ ಹೊಡೆದು ರಕ್ತ ಗಾಯಪಡಿಸಿದ್ದು, ಕಲ್ಲಿನಿಂದ ವಿಜಯ ಭಾಸ್ಕರ್ ರೆಡ್ಡಿ ರವರಿಗೆ ಹೊಡೆದು ರಕ್ತ ಗಾಯ ಪಡೆಸಿರುತ್ತಾರೆ, ದೂರುದಾರರು ಜಗಳ ಬಿಡಿಸಲು ಹೋದಾಗ ಚಾಕುವಿನಿಂದ ಹೊಡೆದು ರಕ್ತ ಗಾಯವುಟು ಮಾಡಿ ಕೆಟ್ಟಮಾತುಗಳಿಂದ ಬೈದಿರುತ್ತಾರೆ.

 

– ಇತರೆ : 03

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಪಾಲಪ್ಪ ಬಿನ್ ವೀರಪ್ಪ, ಎಂ. ಆರ್. ಕೊತ್ತೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಜಯರಾಮರೆಡ್ಡಿ ರವರ ಹೆಂಡತಿ ಜಯಂತಿ ರವರನ್ನು  2ನೇ ಮದುವೆ ಮಾಡಿಕೊಂಡಿದ್ದು, ದಿನಾಂಕ 20.03.2020 ರಂದು ರಾತ್ರಿ 8.30 ಗಂಟೆಯಲ್ಲಿ ದೂರುದಾರರು ಮತ್ತು ಜಯಂತಿ ರವರು ಮನೆಯಲ್ಲಿದ್ದಾಗ, ವಿಜಯಭಾಸ್ಕರ್‌, ಜಯರಾಮರೆಡ್ಡಿ, ಪ್ರಕಾಶ್‌ ರೆಡ್ಡಿ ಮತ್ತು ರುಕ್ಮನ್‌ ರೆಡ್ಡಿ ರವರು ಮನೆಯ ಬಳಿ ಬಂದು, ದೂರುದಾರರನ್ನು ಕೆಟ್ಟಮಾತುಗಳಿಂದ ಬೈದು, ಮಚ್ಚು, ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ರಕ್ತಾಯಪಡಿಸಿದ್ದು, ಜಗಳ ಬಿಡಿಸಲು ಹೋದ ಜಯಂತಿ, ಸುಧಾ  ಮುರುಗೇಶ್‌ ರವರನ್ನು ಸಹ ಹೊಡೆದು ಗಾಯಪಡಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.03.2020 ರಂದು 17.15 ಗಂಟೆಯಲ್ಲಿ ಪಿ.ಎಸ್.ಐ. ಶ್ರೀ. ಜಗದೀಶ್‌ ರೆಡ್ಡಿ ಹಾಗೂ ಸಿಬ್ಬಂದಿ ಗಸ್ತಿನಲ್ಲಿದ್ದಾಗ, ಕೀಲುಕೊಪ್ಪ ಗ್ರಾಮದ ವಾಸಿಯಾದ ಹರೀಶ್‌ ಬಿನ್ ಪೆರಿಯಣ್ಣ ರವರು ಚಿಲ್ಲರೆ ಅಂಗಡಿಯ ಹಿಂಭಾಗದಲ್ಲಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸ್ಥಳದಲ್ಲಿದ್ದ, 1) Haywards Cheers Whisky 90 ml ನ 04 ಪಾಕೇಟ್ ಗಳು, ಖಾಲಿಯಾಗಿರುವ Haywards Cheers Whisky 90 ml ನ 03 ಪಾಕೇಟ್ ಗಳು, 05 ನೀರಿನ ಪಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.03.2020 ರಂದು ಬೆಳಿಗ್ಗೆ 10.15 ಗಂಟೆಯಲ್ಲಿ ಪಿ.ಎಸ್.ಐ. ಶ್ರೀ. ಜಗದೀಶ್‌ ರೆಡ್ಡಿ ರವರು ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ, ಬೂದಿಕೋಟೆ ಗ್ರಾಮದ ವಾಸಿ ಶ್ರೀನಿವಾಸ ಬಿನ್ ಕೃಷ್ಣಪ್ಪ ರವರು ಚಿಲ್ಲರೆ ಅಂಗಡಿಯ ಹಿಂಭಾಗದಲ್ಲಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರಿಗೆ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸ್ಥಳದಲ್ಲಿದ್ದ  1) ಅರ್ದಂಬರ್ದ ಮಧ್ಯವಿರುವ Haywards Cheers Whisky 90 ml ನ 05 ಪಾಕೇಟ್ ಗಳು, ಖಾಲಿಯಾಗಿರುವ Haywards Cheers Whisky 90 ml ನ 06 ಪಾಕೇಟ್ ಗಳು, ಖಾಲಿಯಾಗಿರುವ 05 ನೀರಿನ ಪಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *