ದಿನದ ಅಪರಾಧಗಳ ಪಕ್ಷಿನೋಟ 21ನೇ ಡಿಸೆಂಬರ್‌ 2019

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿನೋದ್‌ ಬಿನ್ ಮುನಿರಾಜು, ಕಾರಹಳ್ಳಿ, ಬಂಗಾರಪೇಟೆ ದಿನಾಂಕ 20.12.2019 ರಂದು ಬೆಳಿಗ್ಗೆ 05-45 ಗಂಟೆಯಲ್ಲಿ ಬಂಗಾರಪೇಟೆಯಿಂದ ತಮ್ಮ ಗ್ರಾಮಕ್ಕೆ ಹೋಗಲು ಟಿ.ವಿ.ಎಸ್. ಪಿನಿಕ್ಸ್ ದ್ವಿಚಕ್ರ ವಾಹನ  ಸಂಖ್ಯೆ ಕೆ.ಎ-08 ಎಸ್-4091 ನ್ನು ಚಲಾಯಿಸಿಕೊಂಡು ಕೆಂಪೇಗೌಡ ಸರ್ಕಲ್ ನಿಂದ ಮುಂದೆ ಕಾರಹಳ್ಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ,  ಬಸ್ ನಂ ಕೆ.ಎ-51 ಎ.ಬಿ-3306 ರ ಚಾಲಕ  ಬಸ್ಸನ್ನು ನಿಲ್ಲಿಸಿಕೊಂಡು ಜನರನ್ನು ಹತ್ತಿಸಿಕೊಳ್ಳುತ್ತಿದ್ದವನು ದೂರುದಾರರು ಬಸ್ ಸಮೀಪ ಹೋಗುವಷ್ಟರಲ್ಲಿ ಬಸ್ಸಿನ ಚಾಲಕ ಇದ್ದಕ್ಕಿದ್ದಂತೆ ಆಜಾಗರೂಕತೆಯಿಂದ ಚಲಾಯಿಸಿದ ಕಾರಣ ದೂರುದರರ ದ್ವಿಚಕ್ರವಾಹನಕ್ಕೆ ಬಸ್ ತಾಕಿ ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ಬಸ್ಸಿನ ಚಕ್ರ ದ್ವಿಚಕ್ರವಾಹನದ ಮೇಲೆ ಮತ್ತು ದೂರುದಾರರ ಬಲ ಕಾಲಿನ ಮೇಲೆ ಹರಿದು ಮೂಳೆ ಮುರಿದ ಗಾಯವಾಗಿ, ದ್ವಿಚಕ್ರವಾಹನ ಜಖಂಗೊಂಡಿರುತ್ತೆ.

 

ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಕ್ಷ್ಮೀ ಕೊಂ ನಾಗರಾಜ್‌, ಹನುಮಂತನಗರ, ಬೇತಮಂಗಲ ರವರು ದಿನಾಂಕ-20-12-2019 ರಂದು ಸಂಜೆ 6.45 ಗಂಟೆಯಲ್ಲಿ ಕ್ಯಾಸಂಬಳ್ಳಿ ರಸ್ತೆಯಲ್ಲಿರುವ ವಿಜಯ ಬಾರ್ ಮುಂಭಾಗ  ಮಗಳಾದ ನಳಿನಿ ರವರ ಜೊತೆ ನಡೆದುಕೊಂಡು  ಹೋಗುತ್ತಿರುವಾಗ, ರಾಜು ಮತ್ತು ಮಂಜುಳಾ ರವರು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ, ಹಣದ ವಿಚಾರದಲ್ಲಿ ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.12.2019 ರಂದು ಸಂಜೆ 6.00 ಗಂಟೆಯಲ್ಲಿ ಮಾದಮುತ್ತನಹಳ್ಳಿ ಗ್ರಾಮದ ಮುನಿವೆಂಕಟಪ್ಪ ರವರು ಯಾವುದೇ ಪರವಾನಗಿ ಇಲ್ಲದೆ ಮಧ್ಯದ ಪಾಕೇಟ್ ಗಳನ್ನು ತನ್ನ ಚಿಲ್ಲರೆ ಅಂಗಡಿಯ ಬಳಿ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದವರ ಮೇಲೆ ಪಿ.ಎಸ್.ಐ ಶ್ರೀ. ಜಗದೀಶ್‌ ರೆಡ್ಡಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ,  ಆರೋಪಿಯ ಬಳಿ ಇದ್ದ 1) No 01 Highway deluxe Whisky 90 ml ನ 04 ಪಾಕೇಟ್ ಗಳು ಮತ್ತು 2) Old tavern Whisky 180 ml ನ 01 ಪಾಕೇಟ್ ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *