ದಿನದ ಅಪರಾಧಗಳ ಪಕ್ಷಿನೋಟ 21ನೇ ಅಕ್ಟೋಬರ್‌ 2019

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿಯಪ್ಪ ಬಿನ್ ಮುನಿವೆಂಕಟಪ್ಪ, ಮದ್ದೇರಿ ಗ್ರಾಮ, ಮುಳಬಾಗಿಲು ತಾಲ್ಲೂಕು ರವರು 20-10-2019 ರಂದು ಮಧ್ಯಾಹ್ನ 02.35 ಗಂಟೆಗೆ ಬಜಾಜ್ ದ್ವಿಚಕ್ರ ವಾಹನ ಸಂಖ್ಯೆ KA-04-Y-6231 ರಲ್ಲಿ ಬೇತಮಂಗಲದಿಂದ ವಿ-ಕೋಟೆ ರಸ್ತೆ ಪಿಲ್ಲಗೊಂಡ್ಲಹಳ್ಳಿ ಹಾಗೂ ಮಹಬೂಬ್ ಸಾಬ್ ರವರ ಇಟ್ಟಿಗೆ ಫ್ಯಾಕ್ಟರಿ ಹತ್ತಿರ ಹೋಗುತ್ತಿದ್ದಾಗ, ಸುಂದರಪಾಳ್ಯ ಕಡೆಯಿಂದ ಕಾರ್‌  ಸಂಖ್ಯೆ KA-01-MB-4161 ರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕೆ ಹೊಡೆದ ಪ್ರಯುಕ್ತ ದೂರುದಾರರು ಕೆಳಗೆ ಬಿದಿದ್ದು ರಕ್ತ ಗಾಯಗಳಾಗಿರುತ್ತದೆ.

– ಇತರೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುವವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.10.2019 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಕ್ರಿಷ್ಣಗಿರಿ ಲೈನಿನ ಸಾರ್ವಜನಿಕ ಸ್ಥಳದಲ್ಲಿ ರಘು, ಶೇಖರನ್, ಚಂದ್ರ, ಸುಧಾಕರ್‌ ಮತ್ತು ಶಾಲಿನಿ ರವರು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಳ್ಳುತ್ತಾ ಕೆಟ್ಟ ಮಾತುಗಳಿಂದ ಬೈದಾಡಿಕೊಂಡು  ಸಾರ್ವಜನಿಕರಿಗೆ ತೊಂದರೆ ಕೊಡುತ್ತಾ ಭಯಬೀತಿ ಉಂಟು ಮಾಡುತ್ತಿದ್ದವರ ವಿರುದ್ದ ಎ.ಎಸ್.ಐ ಶ್ರೀ. ಸಮೀವುಲ್ಲಾ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಕವಿತಾ, ಇಂದಿರಾಶ್ರಯ ಬಡಾವಣೆ, ಬಂಗಾರಪೇಟೆ ರವರ ಗಂಡ ಸುಬ್ರಮಣಿ, 33 ವರ್ಷ ರವರು ಇಂದಿರಾಶ್ರಯ ಬಡಾವಣೆಯಲ್ಲಿ ಮನೆಯನ್ನು ನಿರ್ಮಿಸಲು ಹಾಗೂ ಮದುವೆ ಮಾಡಿಕೊಳ್ಳಲು ಸಾಲ ಮಾಡಿಕೊಂಡಿದ್ದು, ಸಾಲವನ್ನು ತೀರಿಸಲಾಗದೇ ಮನನೊಂದು ದಿನಾಂಕ 19.10.2019 ರಂದು ರಾತ್ರಿ ಮನೆಯ ಕೊಠಡಿ ಮೇಲ್ಚಾವಣಿಯ ಕಬ್ಬಿಣದ ಪೈಪ್ ಗೆ  ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *