ದಿನದ ಅಪರಾಧಗಳ ಪಕ್ಷಿನೋಟ 20 ನೇ ಡಿಸೆಂಬರ್ 2018

 

– ಮೋಸ/ವಂಚನೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸೈಯದ್ ಫರ್ವೇಜ್ ಬಿನ್ ಸೈಯದ್ ಮುನೀರ್‌, ಪೈಪ್‌ಲೈನ್‌ ರಸ್ತೆ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರಿಗೆ 2015 ಮತ್ತು 2016 ನೇ ಸಾಲಿನಲ್ಲಿ ತೊಂದರೆಗಳಿದ್ದ ಕಾರಣ  ರಾಬರ್ಟ್ ಸನ್ ಪೇಟೆ ಜಾಮೀಯಾ ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದ ವಾಲೀಸ್ ಆಲಿ ರವರು ದೇವರ ಪ್ರಾರ್ಥನೆ ಮಾಡಿ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡುತ್ತೇನೆ ಎಂದು ತಿಳಿಸಿ, ಒಂದು ಸ್ಟೀಲ್ ಬಾಕ್ಸ್ ನಲ್ಲಿ 300 ಗ್ರಾಂಗಳ ಬಂಗಾರದ ಒಡವೆಗಳನ್ನು ತೆಗೆದುಕೊಂಡು ಬಾ ನಿಮ್ಮ ಮನೆಯಲ್ಲಿ ಇಟ್ಟು 40 ದಿನಗಳು ಪ್ರಾರ್ಥನೆ ಮಾಡೋಣ ನಿಮಗೆ ಕೆಲಸ ಸಿಗುತ್ತೆ ಮತ್ತು ಕಷ್ಟಗಳು ಪರಿಹಾರವಾಗುತ್ತೆ. ಒಡವೆಗಳನ್ನು ತರುವಾಗ ಯಾರಿಗೂ ತಿಳಿಸಬಾರದೆಂದು ದೂರುದಾರರಿಗೆ ಸೂಚಿಸಿದ್ದು, ಅದವಂತೆ ದೂರುದಾರರು ಸ್ಟೀಲ್ ಬಾಕ್ಸ್ ನಲ್ಲಿ 300 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ತೆಗೆದುಕೊಂಡು ಬಂದು ಕೊಟ್ಟಿದ್ದು, ಆರೋಪಿಯು ಪ್ರಾರ್ಥನೆ ಮಾಡುವಾಗ ದೂರುದಾರರಿಗೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಳ್ಳಲು ತಿಳಿಸಿ, ನಂತರ ಬಂಗಾರದ ಒಡವೆಗಳಿರುವ ಬಾಕ್ಸ್ ನ್ನು  ಮನೆಯ ಕಬೋರ್ಡ್ ನಲ್ಲಿಟ್ಟು 40 ದಿನಗಳ ಕಾಲ ಪೂಜೆ ಮಾಡಲು ತಿಳಿಸಿದ್ದು, 40 ದಿನಗಳ ನಂತರ ಆರೋಪಿಗೆ ಪೋನ್ ಮಾಡಿ ಕೇಳಿದಾಗ ನಾನೇ ಓಪನ್ ಮಾಡುತ್ತೇನೆ ಎಂದು ಹೇಳಿ ಮನಗೆ ಬಾರದೇ ಆರು ತಿಂಗಳ ಕಾಲ ಬಾರದೇ ಇದ್ದುದ್ದರಿಂದ ದೂರುದಾರರು ಬಂಗಾರ ಇಟ್ಟಿದ್ದ ಸ್ಟೀಲ್ ಬಾಕ್ಸ್ ನ್ನು ತೆಗೆದು ನೋಡಿದಾಗ ಬಾಕ್ಸ್ ನಲ್ಲಿ ಬಂಗಾರದ ವಡವೆಗಳ ಬದಲಾಗಿ ಸಾಮ್ರಾಣಿ ಇರುವುದು ಕಂಡು ಬಂದಿರುತ್ತೆ. ಆರೋಪಿ ವಾಲೀಸ್‌ ಆಲಿ ದೂರುದಾರರಿಗೆ ಮೋಸ ಮಾಡಿ ಬಂಗಾರದ ಒಡವೆಗಳನ್ನು ಎತ್ತಿಕೊಂಡು ಸಾಮ್ರಾಣಿಯನ್ನು ಇಟ್ಟು  ಮೋಸ ಮಾಡಿರುತ್ತಾನೆ.

 

–ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಷಣ್ಮುಗಂ ಬಿನ್ ವಡಮಲೈ, ನ್ಯೂ ಓರಿಯನ್‌ಟಲ್‌ ಲೈನ್, ಉರಿಗಾಂ, ಕೆ.ಜಿ.ಎಫ್ ರವರ ಮಗಳು ಕುಮಾರಿ ಪ್ರಿಯದರ್ಶಿನಿ, 20 ವರ್ಷ ಎಂಬಾಕೆಯು ದಿನಾಂಕ 15.12.2018 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಮನೆಯಿಂದ ಹೋದವಳು ಪುನಃ ಮನೆಗೆ ಬರದೇ ಕಾಣೆಯಾಗಿರುತ್ತಾಳೆ.

–ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮೋಷಿಕ್‌ ಖಾನ್, ವಜೀರ್‌ ಖಾನ್, ಸಿ. ರಹೀಂ ಕಾಂಪೌಂಡ್‌, ಬಂಗಾರಪೇಟೆ ರವರ  ಆಟೋ ಮೊಬೈಲ್ಸ್ ಅಂಗಡಿಯ ಸಮೀಪವಿರುವ ಸಂದಿಯಲ್ಲಿ ದಿನಾಂಕ: 18.12.2018 ರಂದು ಬೆಳಿಗ್ಗೆ  9.00 ಗಂಟೆಗೆ ಯಾರೋ ಬಿಕ್ಷೆ ಬೇಡುವ ತರಹವಿರುವ ಸುಮಾರು 75 ರಿಂದ 80 ವರ್ಷದ ಗಂಡಸು ತುಂಬಾ ಸುಸ್ತಾಗಿ, ಯಾವುದೋ ಖಾಯಿಲೆಯಿಂದ ಬಳಲಿ ಊಟವಿಲ್ಲದೆ ನಿಶ್ಯಕ್ತನಾಗಿದ್ದರಿಂದ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 19.12.2018 ರಂದು ಬೆಳಿಗ್ಗೆ 5.30 ಗಂಟೆಗೆ ಮೃತಪಟ್ಟಿರುತ್ತಾನೆ. ಈತನ ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲ.

Leave a Reply

Your email address will not be published. Required fields are marked *