ದಿನದ ಅಪರಾಧಗಳ ಪಕ್ಷಿನೋಟ 20 ನೇ ಮಾರ್ಚ್‌ 2018

– ರಸ್ತೆ ಅಪಘಾತಗಳು :‍ ‌02

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:18.03.2018 ರಂದು ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್‌ ಬ್ಯಾಟಪ್ಪ, ಘಟ್ಟನಾಯನಪಲ್ಲಿ ಗ್ರಾಮ ಕುಪ್ಪಂ, ಆಂದ್ರ ಪ್ರದೇಶ ರವರು ನೀಡಿದ ದೂರಿನಲ್ಲಿ ದೂರುದಾರರು ಬಂಗಾರಪೇಟೆ ಮತ್ತು ಬೂದಿಕೋಟೆ ಮುಖ್ಯ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದಾಗ, ಕೆ.ಎ.08.ಕೆ .8405 ರ ದ್ವಿಚಕ್ರ ವಾಹನದ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ದೂರುದಾರರು ಕೆಳಗೆ ಬಿದ್ದು ತಲೆಗೆ ರಕ್ತಗಾಯಗಳಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣ ಬಿನ್ ಮುನಿಸ್ವಾಮಿ, ಪಲವತಿಮ್ಮನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲುಕು ರವರು ದಿನಾಂಕ 18.03.2018 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ  ಆಕ್ಟೀವಾ ದ್ವಿಚಕ್ರ ವಾಹನ ಸಂಖ್ಯೆ KA-07, Y-0540 ರಲ್ಲಿ  ಬಂಗಾರಪೇಟೆ ಬಸ್ ನಿಲ್ದಾಣದ ತಿರುವಿನಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ಅಂದರೆ ಕೆ.ಜಿ.ಎಫ್ ಕಡೆಯಿಂದ ಟಿಪ್ಪರ್ ಲಾರಿ ಸಂಖ್ಯೆ KA-08, 9963 ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಢು ಬಂದು ದೂರುದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ರಮಣಿ ಬಿನ್ ಹನುಮಪ್ಪ, ಸುವರ್ಣಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಮಗಳಾದ ಪ್ರಿಯಾಂಕ @ ಶ್ರಾವಣಿ, 19 ವರ್ಷ ರವರು ದಿನಾಂಕ-17-03-2018 ರಂದು ಬೆಳಿಗ್ಗೆ 6.30 ಗಂಟೆಯಲ್ಲಿ ಮನೆಯಿಂದ ಕಾಲೇಜಿಗೆ ಹೋದವಳು ಪುನಃ ಮನೆಗೆ ವಾಪಸ್‌ ಬಾರದೇ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *