ದಿನದ ಅಪರಾಧಗಳ ಪಕ್ಷಿನೋಟ 20 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 19.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ಕನ್ನ ಕಳುವು : 01

ಬೆಮೆಲ್ ನಗರ ಪೊಲೀಸ್  ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ.  ಶಿವರಾಜ್ ಬಿನ್ ಮುನಿರತ್ನಂ, ಭಾರತ್‌ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರ ಹೆಂಡತಿ ಅರ್ಚನ ಮತ್ತು ಮಕ್ಕಳು ದಿನಾಂಕ.04-01-2021 ರಂದು ಮಧ್ಯಾಹ್ನ 2-30 ಗಂಟೆಗೆ ಮನೆಯ ಮುಂಬಾಗಿಲಿಗೆ ಡೋರ್ ಲಾಕ್, ಗ್ರಿಲ್ ಬಾಗಿಲಿಗೆ ಮತ್ತು ಕಾಂಪೌಂಡ್ ಗೇಟ್ಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು, ದಿನಾಂಕ.05-01-2021 ರಂದು ಮಧ್ಯಾಹ್ನ 1-00 ಗಂಟೆಗೆ ಮನೆಯ ಬಳಿ ಬಂದು ಕಾಂಪೌಂಡ್ ಗೇಟಿನ ಬೀಗವನ್ನು ತೆಗೆದು ಒಳಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಮುಂಭಾಗಿಲಿಗೆ ಹಾಕಿದ್ದ ಡೋರ್ ಲಾಕ್ ಮತ್ತು ಗ್ರಿಲ್ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 1,10,241/- ರೂ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ರಸ್ತೆ ಅಪಘಾತಗಳು : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗುರು ಬಿನ್ ಕರಿಗಳನ್, ಸಂಜಯ್‌ಗಾಂಧಿನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ದೊಡ್ಡಪ್ಪನಾದ ಕರ್ಣ, 60 ವರ್ಷ ದಿನಾಂಕ 18.01.2021 ರಂದು ರಾತ್ರಿ 9:30 ಗಂಟೆಯಲ್ಲಿ  ಗೀತಾ ರಸ್ತೆಯ 5 ನೇ ಕ್ರಾಸ್ ರಸ್ತೆ ಬದಿಯಲ್ಲಿ ಕುಳಿತಿದ್ದಾಗ ಸೂರಜ್ ಮಲ್ ಸರ್ಕಲ್ ಕಡೆಯಿಂದ  ಕೆ.ಎ 04-ಎಂ.ಬಿ-3479 ಟಾಟಾ ಇಂಡಿಗೊ ಕಾರ್ ನ್ನು ಅದರ ಚಾಲಕ ಮುನಿಯಪ್ಪ ರವರು ಅತಿವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಕರ್ಣ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಸಂಬಂಧ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗೇಶ್ ಬಿನ್ ಮುದ್ದಪ್ಪ, ಐನೋರಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ರವರ ತಂದೆ ಮುದ್ದಪ್ಪ ಬಿನ್ ಬನಹಳ್ಳಿ ಮುನಿವೆಂಕಟಪ್ಪ, 84 ವರ್ಷ ರವರು ದಿನಾಂಕ 18.01.2021 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಬಂಗಾರಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *