ದಿನದ ಅಪರಾಧಗಳ ಪಕ್ಷಿನೋಟ 20 ನೇ ಮೇ 2019

ರಸ್ತೆ ಅಪಘಾತಗಳು : 01

ಬೆಮೆಲ್ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:18.05.2019 ರಂದು  ದೂರುದಾರರಾದ ಶ್ರೀ. ಕಾರ್ತಿಗೇಯನ್‌ ಬಿನ್‌ ಮುನಿರತ್ನಂ ನ್ಯೂ ಒರಿಯಂಟಲ್‌ ಲೈನ್‌ ಉರಿಗಾಂ ರವರು ನೀಡಿದ ದೂರಿನಲ್ಲಿ. ದೂರುದಾರರ ಮಾವ ಗಾಯಾಳು ಪಿಚ್ಚಮುತ್ತು ರವರು ಬೆಮಲ್ ಕಾರ್ಖಾನೆಯ ಎಂ.ಆರ್.ಎಸ್ ಗೇಟ್ ಒಳಗಡೆಯಿಂದ ಕೆ.ಜಿ.ಎಫ್. ಕಡೆಗೆ ಹೋಗಲು  ದ್ವಿಚಕ್ರ ವಾಹನ ಟಿ.ವಿ.ಎಸ್ ವೀಗೋ ಸಂಖ್ಯೆ ಕೆ.ಎ.08-ಆರ್.277 ನ್ನು ಚಲಾಯಿಸಿಕೊಂಡು ಬಂಗಾರಪೇಟೆ-ಕೆ.ಜಿ.ಎಫ್. ಮುಖ್ಯರಸ್ತೆ ಎಂ.ಆರ್.ಎಸ್. ಗೇಟ್ ಮುಂಭಾಗವಿರುವ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಬಳಿ ತಿರುಗಿಸುತ್ತಿದ್ದಾಗ ಬಂಗಾರಪೇಟೆ ಕಡೆಯಿಂದ ಕೆ.ಜಿ.ಎಫ್. ಕಡೆಗೆ ಹೋಗಲು HONDA NTORQ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.08-5514 ರ ಸವಾರ ಸಂತೋಷ್ ಕುಮಾರ್ ಎಂಬುವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಚ್ಚಮುತ್ತು ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿಚ್ಚಮುತ್ತು ರವರು ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ರಕ್ತಗಾಯ,ವಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:19.05.2019 ರಂದು ದೂರುದಾರರಾದ ಶ್ರೀ. ಕೊಂಡಪ್ಪ ಬಿನ್‌ ಪೆದ್ದದಾಸಪ್ಪ ಪೆದ್ದಪಂಜನಿ ಗ್ರಾಮ ಮೂತನೂರು ಅಂಚೆ, ಪಲಮನೇರು, ಆಂದ್ರಪ್ರದೇಶ್‌ ರವರು ನೀಡಿದ ದೂರಿನಲ್ಲಿ. ದೂರುದಾರರು ವಿ ಕೊಟೆ ಕುಪ್ಪಂ ,ಮುಖ್ಯರಸ್ತೆ ಪಂಥನಹಳ್ಳಿ ಗೇಟ್ ಬಳಿ ಇರುವ ಮೋಹನ್ ರಾವ್ ರವರ ಕೋಳಿ ಪಾರಂ ನಲ್ಲಿ 12 ವರ್ಷಗಳಿಂದ ಸುಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಈಗ್ಗೆ ಸುಮಾರು 4-5 ತಿಂಗಳಿಂದ ಸುಮಾರು 60-65 ವರ್ಷ ಒಬ್ಬ ಅನಾಮದೇಯ ಗಂಡಸು ಅಲ್ಲಿ ಇಲ್ಲಿ ಅಂಗಡಿಗಳ ಬಳಿ ಬಿಕ್ಷೆ ಬೇಡಿಕೊಂಡು ಓಡಾಡುತ್ತಿದ್ದು ಆಗಾಗ ದೂರುದಾರರು ಕೆಲಸ ಮಾಡುತ್ತಿದ್ದ ಕೋಳಿ ಪಾರಂ ಬಳಿ ಬಂದು ಊಟ ಮತ್ತು ನೀರು ಕೊಡುವಂತೆ ಕೈ ಸನ್ನೆ ಮೂಲಕ ಕೇಳುತ್ತಿದ್ದು ಅವರು ಊಟ ಮತ್ತು ನೀರು ಕೊಡುತ್ತಿದ್ದರು. ಆತನ ಎಡಕೈ ಮುರಿದಂತೆ ಕಾಣಿಸುತ್ತಿದ್ದು ಯಾವಾಗಲೂ ಕೈಯನ್ನು ಮುಡಿಚಿರುತ್ತಿದ್ದ ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಆತನು ಯಾವುದೇ ಮಾಹಿತಿ ಹೇಳುತ್ತಿರಲಿಲ್ಲ ಮಾತನಾಡುತ್ತಿರಲಿಲ್ಲ. ಈಗ್ಗೆ 5-6 ದಿನಗಳಿಂದ ದೂರುದಾರರ ಕೋಳಿ ಪಾರಂ ಪಕ್ಕದಲ್ಲಿ ಇರುವ ರಸ್ತೆ ಬದಿಯಲ್ಲಿ ಒಂದು ಅರಳಿ ಮರದ ಕೆಳಗೆ ಮಲಗಿ ಕೊಂಡಿದ್ದು ಕೋಳಿ ಪಾರಂ ನಲ್ಲಿ ಕೆಲಸ ಮಾಡುವರು ಊಟ ತಿಂಡಿ ಕೊಡುತ್ತಿದ್ದರು. ದಿನಾಂಕ-19-05-2019 ರಂದು ದೂರುದಾರರು  ಊಟ ನೀಡಲು ಹೋಗಿ ನೋಡಲಾಗಿ  ಮಲಗಿರುವ ಸ್ಥಳದಲ್ಲಿ ಪಟ್ಟಿರುತ್ತಾನೆ.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.05.2019 ರಂದು ಶ್ರೀಮತಿ ಗೌರಮ್ಮ ಕೋಂ  ವೆಂಕಟಗಿರಿಯಪ್ಪ ಕುಪ್ಪನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರು ಬಂಗಾರಪೇಟೆಯಿಂದ ಕುಪ್ಪನಹಳ್ಳಿಗೆ ಹೋಗಲು ಆಟೋವೊಂದರಲ್ಲಿ ಹೋಗಿ ಬಂಗಾರಪೇಟೆ-ಸೂಲಿಕುಂಟೆ ರಸ್ತೆ ಮಾರ್ಗದಲ್ಲಿರುವ ಬ್ಯಾಡಬೆಲೆ ಬಸ್ ಸ್ಟಾಪ್ ಬಳಿ ಇಳಿದು, ಕುಪ್ಪನಹಳ್ಳಿ ಕಡೆಗೆ ಹೋಗುತ್ತಿದ್ದಾಗ ಬಂಗಾರಪೇಟೆಯ ಕಡೆಯಿಂದ ಸೂಲಿಕುಂಟೆ ಕಡೆಗೆ ಹೋಗಲು ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಎಸ್-4863 ರ ಸವಾರನಾದ ಮಂಜುನಾಥನು ಆತನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ದೂರುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ, ರಕ್ತಗಾಯಗಳಾಗಿರುತ್ತದೆ.

 –ಹಲ್ಲೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.05.2019 ರಂದು ದೂರುದಾರರಾದ ಶ್ರೀ.ಮತಿ ಯಶೋಧಮ್ಮ ಕೋಂ ವಸರಾಯಪ್ಪ ಕದಿರಿಗಾನಕುಪ್ಪ ಗ್ರಾಮ ರವರಿಗೂ ಮತ್ತು ಆರೋಪಿ  ಇಂದ್ರಮ್ಮ ಎಂಬುವರಿಗೂ 3 ತಿಂಗಳುಗಳಿಂದ ನೀರು ಹಿಡಿಯುವ ವಿಚಾರದಲ್ಲಿ ಗಲಾಟೆಗಳು ನಡೆದಿದ್ದವು. ಇದೇ ವಿಚಾರದಲ್ಲಿ ದೂರುದಾರರು ಗಂಗಮ್ಮ ದೇವಾಲಯದ ಬಳಿ ಹೋಗುತ್ತಿದ್ದಾಗ  ಏಕಾಏಕಿ ಜಗಳ ಮಾಡಿ ಕೈಗಳಿಂದ ಹೊಡೆದಿರುವ ಕಾರಣ ರಕ್ತಗಾಯವಾಗಿರುತ್ತದೆಂದು ದೂರು.

 

Leave a Reply

Your email address will not be published. Required fields are marked *