ದಿನದ ಅಪರಾಧಗಳ ಪಕ್ಷಿನೋಟ 20 ಏಪ್ರಿಲ್‌ 2019

– ಕೊಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಜಯಲಕ್ಷ್ಮೀ ಕೊಂ ವೆಂಕಟೇಶ್, ಕೊಡಿಗೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ವೆಂಕಟೇಶಪ್ಪ, 28 ವರ್ಷ ರವರನ್ನು ದಿನಾಂಕ 18-04-2019 ರಂದು ರಾತ್ರಿ 9.30 ಗಂಟೆಯಲ್ಲಿ ಗುಮಾನಿ ಆಸಾಮಿಗಳಾದ ತಿರುಮಲೇಶ್‌ ಮತ್ತು ಇತರೆ 7 ಜನರು  ಕರೆದುಕೊಂಡು ಹೋಗಿದ್ದು, ರಾತ್ರಿ 10.30 ಗಂಟೆಯಲ್ಲಿ ವೆಂಕಟೇಶ್ ಮೈ ತುಂಬಾ ಗಾಯಗಳಾಗಿ ಓಡಿ ಬಂದು ಮನೆಯ ಬಳಿ ಕುಸಿದು ಬಿದ್ದಿದ್ದು, ಆತನನ್ನು ಯಾವುದೋ ಆಯುದಗಳಿಂದ ಹೊಡೆದು ಸಾಯಿಸಿಸಲು ಪ್ರಯತ್ನಿಸಿದ್ದು, ಚಿಕಿತ್ಸೆಗಾಗಿ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 19.04.2019 ರಂದು ಮದ್ಯಾಹ್ನ 12.00 ಗಂಟೆಯಲ್ಲಿ  ಮೃತ ಪಟ್ಟಿರುತ್ತಾರೆ.

 

 –ಹಲ್ಲೆ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅನಿಲ್ ಬಾಬು ಬಿನ್ ರಮೇಶ್ ನಾಯ್ಡು, ಕುವೆಂಪು ನಗರ, ದಾಸರಹೊಸಹಳ್ಳಿ, ಬಂಗಾರಪೇಟೆ ರವರು ದಿನಾಂಕ 19-04-2019 ರಂದು ಸಂಜೆ 4-00 ಗಂಟೆಯಲ್ಲಿ ಬೆಮಲ್ ನಗರದ ವೆಂಕಟರಾಮಯ್ಯ ಲೇ ಔಟ್ ನಲ್ಲಿರುವ ಸೂರ್ಯಬಾರ್ ನಲ್ಲಿ ಮುಂಭಾಗದಲ್ಲಿ ಹೋಗುತ್ತಿರುವಾಗ,  ವಿನೋದ್,  ಪಾಂಡಿಯನ್ ಮತ್ತು ನವೀನ್, ಕುವೆಂಪು ನಗರದ ವಾಸಿಗಳು ದೂರುದಾರರ ಬಳಿ ಬಂದು, ವಿನೋದ್ ರವರು ನಮ್ಮ ಮನೆ ಮೇಲೆ ಕೇಸು ಹಾಕಿರುವೆಯ ಎಂದು ಹೇಳಿ, ಮೂರು ಜನರು ದೂರುದಾರರೊಂದಿಗೆ ಗಲಾಟೆ ಮಾಡಿ, ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *