ದಿನದ ಅಪರಾಧಗಳ ಪಕ್ಷಿನೋಟ 20ನೇ ಜೂನ್‌ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:19.06.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

–ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಗೋವಿಂದಪ್ಪ, ಬೇತಮಂಗಲ ವಾಟರ್ ವರ್ಕ್ಸ ನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿಕೊಂಡಿದ್ದು ಮೇಲಾಧಿಕಾರಿಗಳ ಆದೇಶದಂತೆ ಪ್ರತಿ ದಿನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಚೇರಿಯ ಮುಖ್ಯ ದ್ವಾರದಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಕಛೇರಿಯ ಆವರಣವು ನಿರ್ಭಂದಿತ ಪ್ರದೇಶವಾಗಿರುವುದರಿಂದ ಆವರಣದೊಳಗೆ ಅನ್ಯರ ಪ್ರವೇಶವಾಗದಂತೆ ಕಾವಲು ಕಾಯುವುದು ಮತ್ತು ಗೇಟ್ ಬಳಿ ಬಂದು ಹೋಗುವವರನ್ನು ವಿಚಾರಣೆ ಮಾಡಿ ಒಳಗಡೆ ಕಳುಹಿಸುವ ಕೆಲಸ ಮಾಡಿಕೊಂಡಿರುವುದು ದೂರುದಾರರ ಕೆಲಸವಾಗಿರುತ್ತೆ. ಈಗಿರುವಲ್ಲಿ ದಿನಾಂಕ:18.06.2019 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ದೂರುದಾರರು ಮುಖ್ಯ ದ್ವಾರದ ಬಳಿ ಕಾವಲು ಕಾಯುತ್ತಿದ್ದಾಗ ಆರೋಪಿ ಹರೀಶ್ ಹಂಗಲ ಗ್ರಾಮ ರವರು ಅಲ್ಲಿಗೆ ಬಂದು ಏಕಾಏಕಿ ಗೇಟನ್ನು ತೆಗೆದುಕೊಂಡು ಹೋಗುತ್ತಿದ್ದಾಗ ದೂರುದಾರರು ತಡೆದಾಗ ಆರೋಪಿ ದೂರುದಾರರೊಂದಿಗೆ ಜಗಳ ಕಾದು, ಕೈಗಳಿಂದ ಎದೆಯ ಮೇಲೆ ಹೊಡೆದು ಹಾಗೂ ಒಂದು ಕಲ್ಲನ್ನು ಎತ್ತಿಕೊಂಡು ಎಡಕಿವಿಯ ಮೇಲೆ ಹೊಡೆದು ಗಾಯಗೊಳಿಸಿರುತ್ತಾನೆ.

–ಇತರೆ : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಕಾಪಿರೈಟ್‌ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಆರೋಪಿ ರೆಡ್ಡಿಯಪ್ಪ, ರಾತೇನಹಳ್ಳಿ ಗ್ರಾಮದ ವಾಸಿ ರವರು ರೆಡ್ಡಿಯಪ್ಪ ಕೇಬಲ್ ನೆಟ್ ವರ್ಕ್ ನಡೆಸುತ್ತಿದ್ದು ಈತನು ಸ್ಥಳೀಯ ಕೇಬಲ್ ಚಾನೆಲ್ ನೆಟ್ ವರ್ಕ್ ಎನ್.ಎಕ್ಸ್.ಟಿ ಮಾಲೀಕರೊಂದಿಗೆ ಶಾಮೀಲಾಗಿ ZEE TELUGU ಚಾನಲ್ ಅನ್ನು Analogue mode ಮುಖಾಂತರ ಗ್ರಾಮಸ್ಥರಿಗೆ ಪ್ರಸಾರ ಮಾಡಿ ZEE TELUGU ಚಾನೆಲ್ ಕಂಪನಿಗೆ ಯಾವುದೇ ಹಣವನ್ನು ಸಂದಾಯ ಮಾಡದೇ ಕಾನೂನು ಬಾಹಿರವಾಗಿ ಕಾಫೀರೈಟ್ ಕಾಯ್ದೆಯನ್ನು ಉಲ್ಲಂಘಣೆ ಮಾಡಿ ಝೀ ಕಂಪನಿಗೆ ಮೋಸ ಮಾಡಿರುತ್ತಾರೆ ಎಂದು ಅರ್ಶದ್‌ ಖುಲಿ, ವಾಸ ಗೋವಿಂದಿ, ಮುಂಬಾಯಿ, ಮಹರಾಷ್ಟ್ರ ರವರು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *