ದಿನದ ಅಪರಾಧಗಳ ಪಕ್ಷಿನೋಟ 20ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 19.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕನ್ನ ಕಳುವು : 01
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೇಲಾಯುದಂ ಬಿನ್ ಪಳನಿಮಾಲ, ಪಾಲಾರ್‌ ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು ದಿನಾಂಕ. 05-07-2018 ರಂದು ಬೆಳಿಗ್ಗೆ 6-15 ಗಂಟೆಗೆ ಮನೆಯ ಮುಂಭಾಗಿಲಿಗೆ ಮತ್ತು ಗ್ರಿಲ್ ಬಾಗಿಲಿಗೆ ಬೀಗ ಹಾಕಿಕೊಂಡು ಕೇರಳಾದ ಪಾಲ್ ಕಾಡ್ ಗೆ ಹೋಗಿದ್ದು, ದಿನಾಂಕ 19-07-2018 ರಂದು ಬೆಳಿಗ್ಗೆ 8-30 ಗಂಟೆಗೆ ಮನೆಗೆ ವಾಪಸ್ ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ  ಬೀಗವನ್ನು ಹೊಡೆದು, ಒಳಗೆ ಪ್ರವೇಶಿಸಿ ಬೆಡ್ ರೂಮಿನಲ್ಲಿದ್ದ ಬೀರುವಿನ ಡೋರ್ ಲಾಕ್ ನ್ನು ಯಾವುದೋ ಆಯುಧದಿಂದ ಮೀಟಿ, ಬೀರುವಿನಲ್ಲಿದ್ದ 30 ಗ್ರಾಂ ಬಂಗಾರದ ಒಡವೆಗಳನ್ನು ಹಾಗೂ  60,000/- ರೂ ನಗದು ಹಣ ಒಟ್ಟು 1,20,000/- ರೂ ಬಾಳುವುದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ಅಪಹರಣ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ರಾಜಪ್ಪ, ಪಿಚ್ಚಗುಂಟ್ರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ 17 ವರ್ಷದ ಅಪ್ರಾಪ್ತ ವಯಸ್ಸಿನ ಮಗಳು ದಿನಾಂಕ 18.07.2018 ರಂದು ರಾತ್ರಿ 09:00 ಗಂಟೆಯಲ್ಲಿ ಮನೆಯಿಂದ ಆಚೆ ಹೋಗಿ ವಾಪಸ್ ಬರದೇ ಇದ್ದು, ಅದೇ ಗ್ರಾಮದ ಅಶ್ವತ್ ಬಿನ್ ಗಂಗಪ್ಪ ರವರು ಕರೆದುಕೊಂಡು ಹೋಗಿರುವ ಅನುಮಾನವಿರುತ್ತೆಂದು ದೂರು.

Leave a Reply

Your email address will not be published. Required fields are marked *