ದಿನದ ಅಪರಾಧಗಳ ಪಕ್ಷಿನೋಟ 20ನೇ ಏಪ್ರಿಲ್ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 19.04.2018 ರಂದು  ದಾಖಲಾಗಿರುವ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು :‍ ‌01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಜಯಕುಮಾರ್‌ ಬಿನ್‌ ಚಂದ್ರಪ್ಪ, ಬೇತಮಂಗಲ ರವರು   ದಿನಾಂಕ-18.04.2018 ರಂದು ದ್ವಿ ಚಕ್ರ ವಾಹನದಲ್ಲಿ ಗುಟ್ಟಹಳ್ಳಿ ಕ್ರಾಸ್ ನಿಂದ ಬೇತಮಂಗಲ ಮುಖ್ಯರಸ್ತೆಯಲ್ಲಿ ಸಂಜೆ 7.00 ಗಂಟೆಯಲ್ಲಿ ಹಾಲಿನ ಡೈರಿ ಬಳಿ ಬರುತ್ತಿದ್ದಾಗ, ದೂರುದಾರರ ಮುಂದೆ  ದ್ವಿ ಚಕ್ರ ವಾಹನದಲ್ಲಿ 3 ಜನರು ಹೋಗುತ್ತಿದ್ದು ಟ್ಯಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗೂಕತೆಯಿಂದ ಚಲಾಯಿಸಕೊಂಡು ಮುಂದೆ ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪ್ರಯುಕ್ತ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂರು ಜನರು ಕೆಳಗೆ ಬಿದ್ದ ತಕ್ಷಣ  ಟ್ಯಾಕ್ಟರ್ ಚಾಲಕ ಅವರ ಮೇಲೆ ಹತ್ತಿಸಿ ಕೊಂಡು ಹೋಗಿರುತ್ತಾರೆ. ದೂರುದಾರರು ಅವರ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ನೋಡಲಾಗಿ ಅಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳು ಅವರ ಮಾವನಾದ ನಂಜುಂಡಪ್ಪ  50 ವರ್ಷ, ನ್ಯೂಟೌನ್ ಬೇತಮಂಗಲ,   ನವೀನ್ 25 ವರ್ಷ,  ನ್ಯೂಟೌನ್ ಬೇತಮಂಗಲ ಮತ್ತು ನಂಜುಂಡಪ್ಪ ರವರ ಕಿರಿಯ ಮಗನಾದ ತೇಜ  22 ವರ್ಷ,  ನ್ಯೂಟೌನ್ ಬೇತಮಂಗಲ ವಾಸಿಗಳು ಆಗಿದ್ದು ಅಪಘಾತದಿಂದ ನಂಜುಂಡಪ್ಪ ರವರಿಗೆ ಅವರ 2 ಕಾಲುಗಳ ಮೇಲೆ ಮತ್ತು ಎಡಗೈ, ತಲೆ ಮೇಲೆ ಟ್ಯಾಕ್ಟರ್ ಹರಿದು ತೀವ್ರವಾದ ರಕ್ತಗಾಯಗಳು ಆಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ. ನವೀನ್ ರವರಿಗೆ ತಲೆಗೆ ಗಾಯವಾಗಿ ಮೂಗಿನಲ್ಲಿ ರಕ್ತ ಬರುತ್ತಿದ್ದು ಆತನು ಸಹ ಪ್ರಜ್ಙಾ ಹೀನ ನಾಗಿ ಬಿದ್ದಿದ್ದು, ತೇಜು ರವರಿಗೆ ಬಲಗಾಲಿನ ಮೊಣಕಾಲಿನ ಮೇಲೆ ತೀವ್ರವಾದ ರಕ್ತ ಗಾಯವಾಗಿ ಬಲಗೈ ಗೆ ರಕ್ತ ಗಾಯವಾಗಿರುತ್ತದೆ.  ನವೀನ್ ಮತ್ತು ತೇಜು ರವರನ್ನು  ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಆಸ್ಪತ್ರೆಯ ವೈದ್ಯರು ನವೀನ್ ರನ್ನು ಪರೀಕ್ಷಸಿ  ಮೃತ ಪಟ್ಟಿರುತ್ತಾರೆಂದು ತಿಳಿಸಿದ್ದು,  ತೇಜು ರವರು ಚಿಕಿತ್ಸೆ ಸಲುವಾಗಿ ಒಳ ರೋಗಿಯಾಗಿ ದಾಖಲು ಮಾಡಿದ್ದು, ಅಪಘಾತ ಪಡಿಸಿದ ಟ್ಯಾಕ್ಟರ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿ ಯಾಗಿರುತ್ತಾನೆ.

Leave a Reply

Your email address will not be published. Required fields are marked *