ದಿನದ ಅಪರಾಧಗಳ ಪಕ್ಷಿನೋಟ 20ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 19.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಎನ್‌.ಡಿ.ಪಿ.ಎಸ್‌  ಕಾಯ್ದೆ : 02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:19.03.2021 ರಂದು ಸಂಜೆ 4-15 ಗಂಟೆಯಲ್ಲಿ  ಆಂತೋಣಿ @ ಚಿಂಟು ಬಿನ್ ಮೋಸಸ್ ಬರ್ನಾಡ್ @ ಬೆನ್ನಿ, ಸುಸೈಪಾಳ್ಯಂ, ಕೆ.ಜಿ.ಎಫ್  ಎಂಬುವನು ರಾಬರ್ಟಸನ್ ಪೇಟೆಯ ಇರುದಯಪುರಂ ಬಳಿ ಇರುವ ಡಾನ್ ಬಾಸ್ಕೋ ವಿಧ್ಯಾಸಂಸ್ಥೆಯ ಪೂರ್ವ ಭಾಗದಲ್ಲಿ ಇರುವ ಖಾಲಿ  ಜಾಗದಲ್ಲಿ  ಒಂದು ಬ್ಯಾಗಿನಲ್ಲಿ ಗಾಂಜಾ ಮಾದಕ ವಸ್ತುವನ್ನು ಇಟ್ಟಿಕೊಂಡಿದ್ದವನನ್ನು ದೂರುದಾರರಾದ ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಐ ಶ್ರೀ. ಸೂರ್ಯಪ್ರಕಾಶ್‌ ಮತ್ತು ಸಿಬ್ಬಂದಿಯವರು ಸುತ್ತುವರೆದು  ಆಂತೋಣಿ @ ಚಿಂಟು ನನ್ನು ಹಿಡಿದುಕೊಂಡು, ಬ್ಯಾಗಿನಲ್ಲಿದ್ದ 890 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ: 19.03.2021 ರಂದು ಸಂಜೆ 4.00  ಗಂಟೆಯಲ್ಲಿ ವಸಂತ್‌ಕುಮಾರ್‌, ಎಂ.ಎಲ್ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ಎಂಬುವನು ಎಂ.ಎಲ್ ಬ್ಲಾಕ್-ಎನ್.ಟಿ ಬ್ಲಾಕ್  ಮದ್ಯೆ ಇರುವ ಮುಳ್ಳಿನ ಪೊದೆಗಳಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದವನನ್ನು  ದೂರುದಾರರಾದ ಶ್ರೀ. ನಾಗರಾಜ್‌, ಸಿ.ಪಿ.ಐ, ರಾಬರ್ಟ್‌ಸನ್‌ಪೇಟೆ ವೃತ್ತ  ಮತ್ತು ಸಿಬ್ಬಂದಿಯವರು ವಸಂತ್‌ಕುಮಾರ್‌ ರವರನ್ನು ಹಿಡಿದು ಆತನ ವಶದಲ್ಲಿದ್ದ  150 ಗ್ರಾಂ ತೂಕದ ಗಾಂಜಾ ಮತ್ತು  220/- ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಜೂಜಾಟ ಕಾಯ್ದೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 19.03.2021 ರಂದು ಮದ್ಯಾಹ್ನ 2.30 ಗಂಟೆಯಲ್ಲಿ ಹುಣಸನಹಳ್ಳಿ ವಾಸಿಯಾದ ಷಣ್ಮುಗಂ ಎಂಬುವರ ಮನೆಯ ಬಳಿ ಷಣ್ಮುಗಂ, ನಾಹೀದ್, ರಣಜಿತ್, ಕುಮಾರ್ ರವರುಗಳು ಯಾವುದೇ ಪರವಾನಿಗಿ ಇಲ್ಲದೇ ಮೊಬೈಲ್ ಗಳಿಂದ ಆನ್ ಲೈನ್ ನ ಅಂಕಿಗಳ ಮೇಲೆ, 100, 500 ರೂಗಳು ಎಂದು ಹೇಳಿಕೊಂಡು, ಹಣವನ್ನು ಪಣವಾಗಿಟ್ಟು, ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿ.ಎಸ್.ಐ ಶ್ರೀ. ಜಗದೀಶ್ ರೆಡ್ಡಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಜೂಜಾಟವಾಡಲು ಉಪಯೋಗಿಸಿದ 1) ರೆಡ್ ಮಿ ಮೊಬೈಲ್ ಪೋನ್, 2) ಲೆನೋವಾ ಮೊಬೈಲ್ ಪೋನ್, ನಗದು 6,630-00 ರೂಗಳು, ಒಂದು ಪೇಪರ್ ಮತ್ತು ನೋಟ್ ಪುಸ್ತಕವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

– ಅಬಕಾರಿ ಕಾಯ್ದೆ : 01

 ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 19-03-2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ದೊಡ್ಡಚಿನ್ನಹಳ್ಳಿ ಗ್ರಾಮದ ಪಾಂಡುರಂಗ ದೇವಸ್ಥಾನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಬಲರಾಮ್‌ಸಿಂಗ್‌ ಬಿನ್ ರಾಮ್‌ಸಿಂಗ್‌, ದೊಡ್ಡಚಿನ್ನಹಳ್ಳಿ ಗ್ರಾಮ ರವರು ಕುಳಿತುಕೊಂಡು ಮದ್ಯಪಾನ ಸೇವನೆ ಹಿಡಿದು ಸ್ಥಳದಲ್ಲಿದ್ದ 180 ML ನ  NO.01 Highway deluxe Whisky 02 ಪಾಕೆಟ್ ಗಳನ್ನು ಹಾಗೂ ಒಂದು ಪ್ಲಾಸ್ಟಿಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

 

 

Leave a Reply

Your email address will not be published. Required fields are marked *