ದಿನದ ಅಪರಾಧಗಳ ಪಕ್ಷಿನೋಟ 20ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 19.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಇತರೆ01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಹನುಮಂತರಾಯಪ್ಪ, ಮಡಿವಾಳ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಮುಳಬಾಗಿಲು ತಾಲ್ಲೂಕು  ಮುಂಜೇನಹಳ್ಳಿ ಗ್ರಾಮದ ನಾಗರಾಜ್ ರವರ ಟಿಪ್ಪರ್ ಲಾರಿ ಸಂಖ್ಯೆ ಕೆಎ-07  ಎ-4033 ರ ವಾಹನಕ್ಕೆ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದೂರುದಾರರು  ದಿನಾಂಕ 17.02.2021 ರಂದು ಸಂಜೆ 6.00  ಗಂಟೆಗೆ ಮಡಿವಾಳ ಗ್ರಾಮದಲ್ಲಿ ಅವರ ತಾತ ವೆಂಕಟೇಗೌಡ ರವರ ಖಾಲಿ ನಿವೇಶನದಲ್ಲಿ ಟಿಪ್ಪರ್ ಲಾರಿಯನ್ನು ನಿಲ್ಲಿಸಿದ್ದು, ರಾತ್ರಿ 1.30 ಗಂಟೆಯಲ್ಲಿ ಸುರೇಶ್ ಬಿನ್ ಗಂಗೇಗೌಡ ರವರು ಹಳೇ ದ್ವೇಷದಿಂದ ಪೆಟ್ರೋಲ್ ಅನ್ನು  ಲಾರಿಯ ಟೈರ್ ಗಳ  ಮೇಲೆ ಸುರಿದು, ಬೆಂಕಿ ಹಚ್ಚಿ ಸುಮಾರು 75,000/-ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಹೇಮಂತ್‌ ಕುಮಾರ್‌ ಬಿನ್ ಸಂಪಂಗಿ, ಕಾರಹಳ್ಳಿ ಗ್ರಾಮ, ಬಂಗಾರಪೇಟೆ ರವರ ತಂಗಿ ಹರ್ಷಿತಾ.ಎಸ್, 22 ವರ್ಷ ರವರು ದಿನಾಂಕ 19.02.2021 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ಮನೆಯಿಂದ ಹೋದವರು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *