ದಿನದ ಅಪರಾಧಗಳ ಪಕ್ಷಿನೋಟ 20ನೇ ಅಕ್ಟೋಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಕ 19.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸರಸಮ್ಮ ಕೊಂ ಶ್ರೀನವಾಸ್, ಪೆದ್ದಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳು ಶ್ರೀಮತಿ ಕವಿತಾ, 25 ವರ್ಷ ಎಂಬಾಕೆಯು ದಿನಾಂಕ:15.10.2020 ರಂದು ಬೆಳಿಗ್ಗೆ 09.30 ಗಂಟೆಯಲ್ಲಿ ಪೆದ್ದಪಲ್ಲಿಗ್ರಾಮದಲ್ಲಿ ವಾಸವಿರುವ ಮನೆಯಿಂದ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿರುವವರು ಪುನಃ ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾಗವೇಣಿ, ಬ್ಯಾಡಬೆಲೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ನಾಗರಾಜ್, 45 ವರ್ಷ ರವರು ದಿನಾಂಕ 18.10.2020 ರಂದು ಸಂಜೆ ಅತಿಯಾಗಿ ಮದ್ಯಪಾನ ಮಾಡಿಕೊಂಡು ಮಾರಾಂಡಹಳ್ಳಿ ಗ್ರಾಮಕ್ಕೆ ಹೋಗಿ ಸಂಸಾರದ ವಿಚಾರದಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು, ಮಾರಾಂಡಹಳ್ಳಿ ಗ್ರಾಮದ ವೆಂಕಟೇಶಪ್ಪ ರವರ ಪೆಟ್ಟಿಗೆ ಅಂಗಡಿಯ ಮುಂಭಾಗದ ವರಾಂಡದ ಪೈಪ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *