ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿದಿನಾಂಕ 19.06.2020 ರಂದು ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.
– ರಸ್ತೆಅಪಘಾತಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕು||ಪೂಜಾ ಬಿನ್ ನಾರಾಯಣಸ್ವಾಮಿ, ನಾರಾಯಣಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 18.06.2020 ರಂದು ಬೆಳಿಗ್ಗೆ 09.30 ಗಂಟೆಯಲ್ಲಿ ಟಿವಿಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-40-ಎಲ್-9615 ರಲ್ಲಿ ಅನಿಗಾನಹಳ್ಳಿ ಗೇಟ್ ಬಳಿ ಬಲಗಡೆ ತಿರುಗಿಸಿದಾಗ, ಬಂಗಾರಪೇಟೆ ಕಡೆಯಿಂದ ನಂಬರ್ ಇಲ್ಲದ ಅಪಾಚಿ ದ್ವಿಚಕ್ರ ವಾಹನವನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ ಗಾಯಗಳಾಗಿರುತ್ತದೆ.