ದಿನದ ಅಪರಾಧಗಳ ಪಕ್ಷಿನೋಟ 20ನೇ ಏಪ್ರಿಲ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 19.04.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲೋಕೇಶ್‌ ಬಿನ್ ಗುಣಶೇಖರ್‌, ಶ್ರೀರಾಮನಗರ, ಉರಿಗಾಂಪೇಟೆ, ಕೆ.ಜಿ.ಎಫ್ ರವರ ಅತ್ತೆ ತಮಿಲ್ ಸೆಲ್ವಿ ರವರು ದಿನಾಂಕ.18.04.2020 ರಂದು ರಾತ್ರಿ 7.30 ಗಂಟೆಯಲ್ಲಿ ಸ್ವಾಮಿನಾಥ ಪುರಂನ ಬಿ.ಎಂ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಹಿಂದೆಯಿಂದ ಆಟೋ ಸಂಖ್ಯೆ ಕೆಎ-05-0774 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ ತಮಿಳ್ ಸೆಲ್ವಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ತಮಿಳ್ ಸೆಲ್ವಿ ರವರಿಗೆ ಗಾಯಗಳಾಗಿರುತ್ತದೆ.

Leave a Reply

Your email address will not be published. Required fields are marked *