ದಿನದ ಅಪರಾಧಗಳ ಪಕ್ಷಿನೋಟ 20ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:19.02.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರರಾದ ಶ್ರೀಮತಿ. ಸತ್ಯ ಕೊಂ ಜಾನ್‌ಪಾಲ್‌, ಐ ಬ್ಲಾಕ್‌, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ಅಕ್ಕ ಜಮುನಾರಾಣಿ, 47 ವರ್ಷ ರವರು ದಿನಾಂಕ.18.02.2020 ರಂದು ಸಂಜೆ 3-30 ಗಂಟೆಯಲ್ಲಿ ಬಿ.ಎಂ. ರಸ್ತೆ ಸುಭಾಷಿಣಿ ಕಾಲೇಜು ಮುಂಭಾಗ ನಡೆದು ಸಡಲನಾ ಸರ್ಕಲ್ ಕಡೆ ಬರುತ್ತಿದ್ದಾಗ, ಹಿಂದಿನಿಂದ  ದ್ವಿಚಕ್ರ ವಾಹನ ಸವಾರ ಅತಿವೇಗವಾಗಿ ಚಲಾಯಿಸಿಕೊಂಡು ಹೋಗಿ ಜಮುನಾರಾಣಿರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಎರಡೂ ಕಾಲುಗಳು ಮುರಿದಿದ್ದು, ದ್ವಿಚಕ್ರ ವಾಹನ ಸವಾರ ವಾಹನ ಸಮೇತ ಪರಾರಿಯಾಗಿರುತ್ತಾನೆ.

 

– ಇತರೆ : 02

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಲಾಟರಿ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಕೋನಪ್ಪರೆಡ್ಡಿ, ಹೆಚ್.ಸಿ ರವರು  ದಿನಾಂಕ: 19.02.2020 ರಂದು ಆಂಡ್ರಸನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ, ಆಂಡ್ರಸನ್‌ಪೇಟೆಯ ಓಡ್ಯಾನಿಯಲ್ ರಸ್ತೆಯಲ್ಲಿರುವ ಯಾದಗಿರ್ ಹೋಟಲ್ ಪಕ್ಕದಲ್ಲಿರುವ ಚಿಲ್ಲರೆ ಅಂಗಡಿಯಲ್ಲಿ ಗೋವಿಂದರಾಜ್ ಎಂಬುವರು ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇದ ವಿದ್ದರೂ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ಮಾರಾಟ ಮಾಡುತ್ತಿರುತ್ತಾರೆಂದು ದೂರು.

ದೂರುದಾರರಾದ ಶ್ರೀ. ಚಲಪತಿ, ಹೆಚ್.ಸಿ ರವರು 19.02.2020 ರಂದು ಆಂಡ್ರಸನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ, ಆಂಡ್ರಸನ್‌ಪೇಟೆಯ ಓಡ್ಯಾನಿಯಲ್ ರಸ್ತೆಯಲ್ಲಿರುವ ಯಾದಗಿರ್ ಹೋಟಲ್ ನಲ್ಲಿ ಅದರ ಕ್ಯಾಷಿಯರ್ ಆಗಿರುವ ಅಲ್ಲಾ ಬಕಾಶ್ ಎಂಬುವರು ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇದ ವಿದ್ದರೂ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ಮಾರಾಟ ಮಾಡುತ್ತಿರುತ್ತಾರೆಂದು ದೂರು.

Leave a Reply

Your email address will not be published. Required fields are marked *