ದಿನದ ಅಪರಾಧಗಳ ಪಕ್ಷಿನೋಟ 19 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 18.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ಮುನಿವೆಂಕಟಪ್ಪ, ಕಂಗಾನಲ್ಲೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ಸೌಜನ್ಯ, 20 ವರ್ಷ ರವರು ದಿನಾಂಕ-14-01-2021 ರಂದು ಮದ್ಯಾಹ್ನ 12.00 ಗಂಟೆಯಿಂದ 1.30 ಗಂಟೆಯ ಮದ್ಯೆ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ಮನೆಯಿಂದ ಕಾಣೆಯಾಗಿರುತ್ತಾರೆ.

ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಸನ್ನ ಬಿನ್ ಕೃಷ್ಣಪ್ಪ, ಚೆನ್ನಪಲ್ಲಿ ಗ್ರಾಮ, ಕೆ.ಜಿ.ಎಫ್ ರವರ ಮಾವನಾದ ಬಾಬು ಬಿನ್ ಬೆಲ್ಲಪ್ಪ, 45 ವರ್ಷ, ಚೆನ್ನಪಲ್ಲಿ ಗ್ರಾಮ ರವರು ದಿನಾಂಕ:17.01.2021 ರಂದು ಸಂಜೆ 4.30 ಗಂಟೆಯಿಂದ 5-30 ಗಂಟೆಯೊಳಗೆ ದ್ವಿಚಕ್ರವಾಹನ ಸಂಖ್ಯೆ ಕೆಎ-08-ಇ-3010 ಸಿ.ಡಿ 100 ರ ಹಿಂಬದಿಯಲ್ಲಿ ಚೀಮಲಬಂಡಹಳ್ಳಿ ಗ್ರಾಮದ ಗಜೇಂದ್ರ ಬಿನ್ ಕೃಷ್ಣಪ್ಪ ಎಂಬುವರನ್ನು ಕುಳ್ಳರಿಸಿಕೊಂಡು ಬೇತಮಂಗಲ-ಕೆ.ಜಿ.ಎಫ್ ಮುಖ್ಯ ರಸ್ತೆ  ಕಮ್ಮಸಂದ್ರ ಗ್ರಾಮದ ಬಳಿ ಶ್ಯಾಂ ಪಾರಂ  ಮುಂಭಾಗ ಬೇತಮಂಗಲ ಕಡೆ ಹೋಗುತ್ತಿದ್ದಾಗ, ಎದುರುಗಡೆಯಿಂದ ಬಂದ ಕೆ.ಎ-07-ಇಇ-1204 ಹೀರೋ ಸ್ಪ್ಲೆಂಡರ್ ದ್ವಿಚಕ್ರ ವಾಹನದ ಸವಾರ ಆತನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಾಬು ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ಬಾಬು ರವರು ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಗಜೇಂದ್ರ ರವರು  ವಾಹನ ಸಮೇತ ಕೆಳಗೆ ಬಿದ್ದು, ರಕ್ತಗಾಯಗಳಾಗಿರುತ್ತದೆ.

Leave a Reply

Your email address will not be published. Required fields are marked *