ದಿನದ ಅಪರಾಧಗಳ ಪಕ್ಷಿನೋಟ 19 ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಕ 18.11.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 19.11.2020 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ನಾಗೇಶ್ ಬಿನ್ ಚಿಕ್ಕಮುನಿಯಪ್ಪ, ವಡಗೇರಿ ಗ್ರಾಮ, ಕೋಲಾರ ತಾಲ್ಲೂಕು ರವರು ದಿನಾಂಕ 15.11.2020 ರಂದು ಸಂಜೆ 6.45 ಗಂಟೆಯಲ್ಲಿ ಅವರ ಗ್ರಾಮದಿಂದ ಹೆಚ್.ಮಲ್ಲಂಡಹಳ್ಳಿಗೆ ಹೋಗಲು ಕಾರ್ ಸಂಖ್ಯೆ ಕೆಎ-03-ಎಎಫ್-6856 ನ್ನು ಹಂಚಾಳ ಬಳಿಯಿರುವ ಗಾಲ್ಫ್ ಸಮೀಪ ಚಲಾಯಿಸಿಕೊಂಡು ಬರುತ್ತಿರುವಾಗ, ಎದುರುಗಡೆಯಿಂದ ರಂಜಿತ್‌‌ ಎಂಬುವರು ನೀರಿನ ಟ್ಯಾಂಕರ್ ಟ್ರಾಕ್ಟರ್ ಸಂಖ್ಯೆ ಕೆಎ-08-ಟಿ-2134 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸತೀಶ್ ಬಿನ್ ಸುರೇಶ್, ಎಂ.ವಿ ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರ ತಂದೆ ಸುರೇಶ್, 67 ವರ್ಷ ರವರಿಗೆ 40 ವರ್ಷಗಳಿಂದ ಮದ್ಯಪಾನ ಸೇವನೆ ಮಾಡುವ ಅಭ್ಯಾಸವಿದ್ದು ಹಾಗೂ ಬುದ್ದಿ ಭ್ರಮಣೆಯಾಗಿದ್ದು, ದಿನಾಂಕ 17-11-2020 ರಂದು ರಾತ್ರಿ ಸುರೇಶ್ ರವರು ಮದ್ಯಪಾನ ಸೇವನೆ ಮಾಡಿ ಜೀವನದಲ್ಲಿ ಜಿಗುಪ್ಸೆಗೊಂಡು 1 ನೇ ಅಂತಸ್ಥಿನ ಮನೆಯ ಪೋರ್ಟಿಕ್ ಗೆ ಅಳವಡಿಸಿದ್ದ ಕಬ್ಬಿಣದ ಹುಕ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *