ದಿನದ ಅಪರಾಧಗಳ ಪಕ್ಷಿನೋಟ 19 ನೇ ನವೆಂಬರ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 18.11.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಕೊಲೆ  ಪ್ರಯತ್ನ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಭಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಿರಿಚಂದ್ರನ್ ಬಿನ್ ಚಂದ್ರಮೋಹನ್‌, ಕಾರ್‌ಪೆಂರ್ಟ್ಸ್ ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎಫ್ ಹಾಗೂ ಅವರ ಮಾವ ಗಂಬೀರಂ ಮತ್ತು ಅವರ ಕುಟುಂಬದವರು ದಿನಾಂಕ 18.11.2018 ರಂದು ಸಂಜೆ 7.30 ಗಂಟೆಯಲ್ಲಿ ಮನೆಯ ಹೊರಗಡೆ ನಿಂತ್ತಿದ್ದಾಗ, ಒಂದು ಕಾರು ಮತ್ತು ದ್ವಿಚಕ್ರ ವಾಹನವಾದಲ್ಲಿ ಮಾಡೆಲ್‌ ಹೌಸ್ ವಾಸಿಗಳಾದ ವಿಜಯ್‌ ಮತ್ತು ರಾಜೇಶ್‌ಕುಮಾರ್‌ ರವರೊಂದಿಗೆ 7-8 ಜನ ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ಚಾಕುಗಳನ್ನು ಹಿಡಿದು ಬಂದು “ಬಾಲಚಂದ್ರನ್‌(ದೂರುದಾರರ ಚಿಕ್ಕಪ್ಪನ ಮಗ)  ಎಲ್ಲಿ ನಮ್ಮ ಹುಡುಗರ ಮೇಲೆ ಜಗಳ ಮಾಡಿದವರು ಯಾರು” ಎಂದು  ಹೇಳಿ ಗಂಬೀರಂ ಮತ್ತು ದೂರುದಾರರಿಗೆ ಕೊಲೆ ಮಾಡುವ ಉದ್ದೇಶದಿಂದ  ಚಾಕುವಿನಿಂದ ಚುಚ್ಚಿ ರಕ್ತ ಗಾಯ ಪಡಿಸಿದ್ದು, ದೂರುದಾರರ ಚಿಕ್ಕಮ್ಮ ಕಲೈವಾಣಿರವರು ಅಡ್ಡ ಬಂದಾಗ ಕೆಟ್ಟಮಾತುಗಳಿಂದ ಬೈದು, ಕಿಟಕಿ ಗಾಜುಗಳನ್ನು ಹೊಡೆದು, ಪಲ್ಸರ್ ವಾಹನವನ್ನು ಜಖಂಗೊಳಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *