ದಿನದ ಅಪರಾಧಗಳ ಪಕ್ಷಿನೋಟ 19ನೇ ಏಪ್ರಿಲ್‌ 2019 

– ಪ್ರಜಾ ಪ್ರಾತಿನಿಧ್ಯ ಅಧಿನಿಯಮ : 01

ಆಂಡ್ರಸನ್‌ಪೇಟೆ ಪೊಲಿಸ್ ಠಾಣೆಯಲ್ಲಿ ಪ್ರಜಾ ಪ್ರಾತಿನಿಧ್ಯ ಅಧಿನಿಯಮ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಕುಮಾರ್‌ ರವರು ಪ್ಲೇಯಿಂಗ್ ಸ್ಕ್ವಾಡ್ ಟೀಮ್ ಅಧಿಕಾರಿಯಾಗಿ ಕೆ.ಜಿ.ಎಫ್-146 ವಿಧಾನ ಸಭೆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 17-04-2019 ರಂದು ರಾತ್ರಿ 12.00 ಗಂಟೆಯಲ್ಲಿ ಬಿ.ಎಂ ರಸ್ತೆಯ ಲಾರೆನ್ಸ್ ಮನೆಯ ಪಕ್ಕದಲ್ಲಿ 1) ಗಣೇಶ್ .ಸಿ ಬಿನ್ ಲೇಟ್ ಚಿನ್ನಪ್ಪ, ವಾಸ-ಮಸ್ಕಂ ಡಿ ಬ್ಲಾಕ್, ಆಂಡ್ರಸನ್ಪೇಟೆ, 2) ಲೋಕೇಶ್ ಬಿನ್ ವಾಸುದೇವನ್, ವಾಸ- ಓಲ್ಡ್ ಪೋಸ್ಟ್ ಆಪೀಸ್ ರೋಡ್, ಆಂಡ್ರಸನಪೇಟೆ 3) ಅಮರನಾಥ್ ಬಿನ್ ಉದ್ದಂಡಿ, ವಾಸ-ಮಸ್ಕಂ ಡಿ ಬ್ಲಾಕ್, ಆಂಡ್ರಸನಪೇಟೆ, ಕೆ.ಜಿ.ಎಫ್ ರವರು  ನಿಂತುಕೊಂಡಿದ್ದು, ಅವರನ್ನು ದೂರುದಾರರು ಮತ್ತು ಸಿಬ್ಬಂದಿಯವರು ಪರಿಶೀಲಿಸಲಾಗಿ 6,110/-00 ರೂ ಮತ್ತು 02 ಮತದಾರರ ಪಟ್ಟಿಯಿದ್ದು,  ವಿಚಾರಿಸಲಾಗಿ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಇವರು ಯಾವುದೋ ಪಕ್ಷದ ಸಲುವಾಗಿ ಮತದಾರರಿಗೆ ಹಣವನ್ನು ಹಂಚಲು ಪ್ರಯತ್ನಿಸಿದ್ದರಿಂದ, 6110/- ರೂ, 02 ಮತದಾರರ ಪಟ್ಟಿಯನ್ನು ಹಾಗೂ ನೋಂದಣಿ ಸಂಖ್ಯೆ ಇಲ್ಲದ ಪಲ್ಸರ್ ದ್ವಿ-ಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

Leave a Reply

Your email address will not be published. Required fields are marked *