ದಿನದ ಅಪರಾಧಗಳ ಪಕ್ಷಿನೋಟ 19ನೇ ಫೆಬ್ರವರಿ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 18.02.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಪಾಲ್ ಕೃಷ್ಣ ಬಿನ್ ಪದ್ಮನಾಭಾಚಾರ್‌, ನೇರಳಕೆರೆ ಗೇಟ್, ಬಂಗಾರಪೇಟೆ ರವರ ಮನೆಯ  ಮೇಲೆ ಇದ್ದ ಹೊಗೆ ಗೂಡಿನ ಮೂಲಕ ಕಳ್ಳತನ ಮಾಡಲು ದಿನಾಂಕ:17.02.2018 ರಂದು ರಾತ್ರಿ 11-00 ಗಂಟೆಯಲ್ಲಿ ಆರೋಪಿ ಪ್ರಭಾಕರ್ ಬಿನ್ ತಿಮ್ಮಯ್ಯ, ತೊಂಗಲಕುಪ್ಪ ಗ್ರಾಮ ರವರು ಮನೆಯೊಳಗೆ ಇಳಿಯಲು ಹೋಗಿ ಚಿಮಣಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಗ, ದೂರುದಾರರು ಮತ್ತಿತರರು ಆರೋಪಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಆರೋಪಿ  ಜಾರಿ ಬಿದ್ದು ತರಚಿದ ಗಾಯಗಳಾಗಿದ್ದು, ಆರೋಪಿ ವಿರುದ್ದ ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾನೆಂತ ಪ್ರಕರಣ ದಾಖಲಾಗಿರುತ್ತೆ.

Leave a Reply

Your email address will not be published. Required fields are marked *