ದಿನದ ಅಪರಾಧಗಳ ಪಕ್ಷಿನೋಟ 19ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 18.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 – ಅಬಕಾರಿ ಕಾಯ್ದೆ : 03

 ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ.18.03.2021 ರಂದು ರಾತ್ರಿ 9.30 ಗಂಟೆಗೆ ಠಾಣಾ ಕಿಂಗ್ ಜಾರ್ಜ್ ಹಾಲ್ ಪಾರ್ಕ್ ನಲ್ಲಿ  ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ನಾಗರಾಜ್‌, ಕೀರ್ತಿಕುಪ್ಪ ಗ್ರಾಮ ಮತ್ತು ಸಂಪತ್‌ಕುಮಾರ್‌, ಪಟೇಲ್‌ ಸ್ಟ್ರೀಟ್‌, ಕೆ.ಜಿ.ಎಫ್ ರವರು ಕುಳಿತುಕೊಂಡು ಮದ್ಯಸೇವನೆ ಮಾಡುತ್ತಿದ್ದವರನ್ನು ಮತ್ತು ಸ್ಥಳದಲ್ಲಿದ್ದ (1) 2 ಪ್ಲಾಸ್ಟಿಕ್ ಲೋಟ, (2) 01 90 ಎಂ.ಎಲ್ ನ  ORIGINAL CHOICE TETRE POCKET & 01 LEGACY XXX RUM TETRA POCKET, ಒರಿಜಿನಲ್ ಚಾಯ್ಸ್ 2 ಪಾಕೆಟ್‌ ಮತ್ತು (3) ಮೂರು ವಾಟರ್ ಪಾಕೇಟ್ಗಳನ್ನು ದೂರುದಾರರಾದ ಶ್ರೀ. ಶ್ರೀನಿವಾಸ್, ಸಿ.ಪಿ.ಸಿ. ರವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ.18.03.2021 ರಂದು ರಾತ್ರಿ 8.45 ಗಂಟೆಗೆ ಮಾರ್ಕೇಟ್ ಬಳಿ ಇರುವ ಅಂಗಡಿಯೊಂದರ ಬಳಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಬಾಲು @ ರಿಚರ್ಡ್‌, ಸುಸೈಪಾಳ್ಯಂ, ಕೆ.ಜಿ.ಎಫ್‌ ಮತ್ತು ಸೆಲ್ವರಾಜ್‌, ೪ನೇ ಬ್ಲಾಕ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು  ಕುಳಿತುಕೊಂಡು ಮದ್ಯಸೇವನೆ ಮಾಡುತ್ತಿದ್ದವರನ್ನು ಮತ್ತು ಸ್ಥಳದಲ್ಲಿದ್ದ (1) 2 ಪ್ಲಾಸ್ಟಿಕ್ ಲೋಟ, (2) 01 90 ಎಂ.ಎಲ್ ನ  ORIGINAL CHOICE TETRE POCKET & 01 LEGACY XXX RUM TETRA POCKET, (3) ಮೂರು ವಾಟರ್ ಪಾಕೇಟ್ಗಳನ್ನು ದೂರುದಾರರಾದ ಶ್ರೀ. ಹೆಚ್.ಗೋಪಾಲ್, ಎ.ಎಸ್.ಐ ರವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ.18.03.2021 ರಂದು ರಾತ್ರಿ7.30 ಗಂಟೆಗೆ ಸಲ್ಡಾನ ವೃತ್ತದ ಬಳಿ ಇರುವ ಫುಡ್ ಗೋಡನ್ ಹತ್ತಿರ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಲಾರೆನ್ಸ್‌ ಮತ್ತು ಫಾಲ್ಸನ್‌, ಕೆನಡೀಸ್‌, ಕೆ.ಜಿ.ಎಫ್ ರವರು ಕುಳಿತುಕೊಂಡು ಮದ್ಯಸೇವನೆ ಮಾಡುತ್ತಿದ್ದವರನ್ನು ಮತ್ತು ಸ್ಥಳದಲ್ಲಿದ್ದ (1) 2 ಪ್ಲಾಸ್ಟಿಕ್ ಲೋಟ, (2) ಎರಡು 90 ಎಂ.ಎಲ್ ನ  HAYWARDS CHEERS WHISKY TETRA POCKET, (3) ಮೂರು ವಾಟರ್ ಪಾಕೇಟ್ ಗಳನ್ನು ದೂರುದಾರರಾದ ಶ್ರೀ. ಬಾಲಾಜಿ ಸಿಂಗ್‌, ಸಿ.ಹೆಚ್.ಸಿ ರವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸರಣ್ಯ ಕೊಂ ಆಂಟೋಣಿ ಪ್ರವೀಣ್‌, ಫಿಟ್ಟರ್ಸ್‌ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರ ಗಂಡ 33 ವರ್ಷದ ಶ್ರೀ ಆಂಟೋಣಿ ಪ್ರವೀಣ್ ಕುಮಾರ್ ರವರು ದಿನಾಂಕ:06.03.2021 ರಂದು ಬೆಳಿಗ್ಗೆ 6-30 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋಗಿರುವವರು ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

ಇತರೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿರುತ್ತಾರೆ. ಬಂಗಾರಪೇಟೆ ಪಟ್ಟಣದ ವಿಜಯನಗರದಲ್ಲಿ ಸರಸ್ವತಿ  ಎಂಬುವರು ವೇಶ್ಯಾವಾಟಿಕೆ ನಡೆಸುತ್ತಿದ್ದರೆಂದು ಖಚಿತ ಮಾಹಿತಿ ತಿಳಿದು ದಿನಾಂಕ 18.03.2021 ರಂದು ಮಧ್ಯಾಹ್ನ 2.30 ಗಂಟೆಯಲ್ಲಿ ದೂರುದಾರರಾದ ಶ್ರೀ. ಸುನೀಲ್ ಕುಮಾರ್‌, ಸಿ.ಪಿ.ಐ, ಬಂಗಾರಪೇಟೆ ವೃತ್ತ ರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸರಸ್ವತಿ, ಚಂದ್ರ, ರಾಜೇಶ್ ಮತ್ತು ರವೀಂದ್ರ ರವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

– ಹಲ್ಲೆ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ಶಿವಶಂಕರ್‌ ಬಿನ್ ಆನಂದ್, ನೇರಳಕೆರೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:12-03-2021 ರಂದು ರಾತ್ರಿ 8.45 ಗಂಟೆಯಲ್ಲಿ ಸ್ನೇಹಿತ ಮಹೇಶ್ ರವರರೊಂದಿಗೆ ದಾಸರಹೊಸಹಳ್ಳಿ ಶಿವಬಾರ್ ನಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದಾಗ, ಗಜೇಂದ್ರ, ದಾಸರಹೊಸಹಳ್ಳಿ ಗ್ರಾಮ ಎಂಬುವನು ದೂರುದಾರರ ಬಳಿ ಮದ್ಯಪಾನ ಕೊಡಿಸು ಎಂದು ಕೇಳಿದ್ದು, ದೂರುದಾರರು ಆಗುವುದಿಲ್ಲ ಎಂದು ಹೇಳಿದ್ದಕ್ಕೆ, ಕೆಟ್ಟಮಾತುಗಳಿಂದ ಬೈದು, ಚಾಕುವಿನಿಂದ ಹೊಡೆದು ರಕ್ತಗಾಯಗಳುಂಟುಪಡಿಸಿರುತ್ತಾನೆ.

Leave a Reply

Your email address will not be published. Required fields are marked *