ದಿನದ ಅಪರಾಧಗಳ ಪಕ್ಷಿನೋಟ 19ನೇ ಡಿಸೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 18.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಮೋಸ/ವಂಚನೆ : 01

ಕೆ.ಜಿ.ಎಫ್ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ಹರೀಶ್ ರೆಡ್ಡಿ ಬಿನ್ ಪಾಪಿರೆಡ್ಡಿ, ಕಾಮಸಮುದ್ರಂ, ಬಂಗಾರಪೇಟೆ ತಾಲ್ಲೂಕು ರವರ ಸ್ನೇಹಿತನಾದ  ಹರೀಶ್ ಕುಮಾರ್ ರವರು ದಿನಾಂಕ:05.09.2019 ರಂದು ಆತನ  instrgram ನಲ್ಲಿ ಸಹಸ್ರ ಮತ್ತು ಮಯೂರಿ ಎಂಬುವರನ್ನು ಪರಿಚಯ ಮಾಡಿಸಿ,  ದೂರುದಾರರನ್ನು ಮೋಸ ಮಾಡುವ ಉದ್ದೇಶದಿಂದ  ಪ್ರೀತಿಸುವುದಾಗಿ ನಂಬಿಸಿ, ಸಹಸ್ರ ರವರು USA ನಲ್ಲಿ MBBS  ವಿದ್ಯಾಭ್ಯಾಸವನ್ನು ಮಾಡಲು ಹೋಗುವ ಸಲುವಾಗಿ 5000/- ರೂಪಾಯಿಗಳನ್ನು ಪಾವತಿ ಮಾಡುವಂತೆ ಸೂಚಿಸಿ  ನಂತರ  ಮನೆಯವರ ಚಿಕಿತ್ಸೆಗೆಂದು ಮತ್ತು ವಿಧ್ಯಾಭ್ಯಾಸಕ್ಕೆಂದು ನಂಬಿಸಿ ದಿನಾಂಕ:27.09.2019 ರಿಂದ ದಿನಾಂಕ:03.11.2020 ರ ವರೆಗೆ ದೂರುದಾರರಿಂದ ಒಟ್ಟು 25 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಹಣವನ್ನು ವಾಪಸ್ಸು ನೀಡದೇ ಮೋಸ ಮಾಡಿರುತ್ತಾರೆ.

– ರಸ್ತೆ ಅಪಘಾತಗಳು : 03

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಘುಪತಿ ಬಿನ್ ಮುನಿಸ್ವಾಮಿ, ಕಣ್ಣೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು  ರವರ ತಂದೆ ಮುನಿಸ್ವಾಮಿ, 60 ವರ್ಷ ರವರು ದಿನಾಂಕ 17.12.2020 ರಂದು ರಾತ್ರಿ 8:30 ಗಂಟೆಗೆ ರಾಬರ್ಟ್ ಸನ್ ಪೇಟೆಯ ನಂದಿನಿ ಹೋಟೆಲ್ ಮುಂಭಾಗದ ರಸ್ತೆಯ ಎಡಬದಿಯಲ್ಲಿ ನಿಂತಿದ್ದಾಗ ಕೆ.ಎ 08-ವೈ-2512 ಪಲ್ಸರ್ ದ್ವಿಚಕ್ರ ವಾಹನ ಸವಾರನು ಡಿಕ್ಕಿಪಡಿಸಿದ್ದು, ಮುನಿಸ್ವಾಮಿ ರವರನ್ನು ಚಿಕಿತ್ಸೆಗಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣರೆಡ್ಡಿ ಬಿನ್ ರಾಮರೆಡ್ಡಿ, ಬೆಲಪನಹಳ್ಳಿ ಗ್ರಾಮ, ಮುಳಬಾಗಿಲು ತಾಲ್ಲೂಕು ರವರು ದಿನಾಂಕ:17.12.2020 ರಂದು ರಾತ್ರಿ 19-00 ಗಂಟೆಯಲ್ಲಿ ಓಮಿನಿ ಕಾರು ಸಂಖ್ಯೆ KA-01-MB-0846 ರಲ್ಲಿ ವೆಂಕಟಾಪುರದ ಗ್ರಾಮದ ಬಳಿ ಬರುತ್ತಿದ್ದಾಗ, ರಸ್ತೆಯಲ್ಲಿ ಟ್ರಾಕ್ಟರ್ ಸಂಖ್ಯೆ AP-04-K-5269 ರನ್ನು ಅದರ ಚಾಲಕ ಯಾವುದೇ ಮುನ್ಸೂಚನೆ ನೀಡದೇ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಪಡಿಸಿದ್ದರಿಂದ ಓಮಿನಿ ಕಾರು ಚಲಾಯಿಸುತ್ತಿದ್ದ ದೂರುದಾರರಿಗೆ ಮತ್ತು ಕೃಷ್ಣಾರೆಡ್ಡಿ ರವರಿಗೆ ರಕ್ತಗಾಯಗಾಳಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಕುಮಾರ್‌ ಬಿನ್ ಕೃಷ್ಣಮೂರ್ತಿ, ಪುಂಗನೂರು ಟೌನ್, ಆಂದ್ರಪ್ರದೇಶ ರವರು ದಿನಾಂಕ 17.12.2020 ರಂದು ಸಂಜೆ 6.00 ಗಂಟೆಯಲ್ಲಿ ಬಂಗಾರಪೇಟೆಯ ಜೂನಿಯರ್ ಕಾಲೇಜು ಟ್ರಾಫಿಕ್ ಕಟ್ ಬಳಿ ಕಾರ್ ಸಂಖ್ಯೆ ಎಪಿ-39-ಎಕೆ-3501 ನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ, ಸದರಿ ಕಾರ್ ಗೆ ಹಿಂಬದಿಯಿಂದ ಸ್ವಿಪ್ಟ್ ಕಾರ್ ಸಂಖ್ಯೆ ಕೆಎ-04-ಎಂಕೆ-2665 ರ ಚಾಲಕನು ಡಿಕ್ಕಿಪಡಿಸಿದ್ದು, ದೂರುದಾರರು ಕಾರ್ ನ್ನು ನಿಲ್ಲಿಸಿ ಹೋಗಿ ನೋಡಿದಾಗ, ಸದರಿ ಸ್ವಿಪ್ಟ್ ಕಾರ್ ಗೆ ಓಮಿನಿ ಕಾರ್ ಸಂಖ್ಯೆ ಕೆಎ-05-9604 ರ ಚಾಲಕನು ಕಾರ್ ನ್ನು ಕೆಜಿಎಫ್ ಕಡೆಯಿಂದ ಬಂಗಾರಪೇಟೆಗೆ ಬರಲು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ವಿಪ್ಟ್ ಕಾರ್ ಗೆ ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ, ಸ್ವಿಪ್ಟ್ ಕಾರ್ ವಾಹನವು ಪಿರ್ಯಾದಿದಾರರ ಕಾರ್ ನ ಹಿಂಬದಿಗೆ ಡಿಕ್ಕಿಪಡಿಸಿದ್ದು, ಕಾರ್ ನ ಹಿಂಭಾಗ ಜಖಂಗೊಂಡಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಪ್ರೇಮಾ, ಭಾರತೀಪುರಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ಗಂಡ ವೆಂಕಟೇಶ್  ರವರಿಗೆ ಸುಮಾರು ದಿನಗಳಿಂದ  ಹೊಟ್ಟೆ  ನೋವು ಬರುತ್ತಿದ್ದು, ದಿನಾಂಕ 18.12.2020  ರಂದು     ಬೆಳಿಗ್ಗೆ 11.00  ಗಂಟೆಯಿಂದ 11.45  ಗಂಟೆಯ ಮಧ್ಯೆ   ವೆಂಕಟೇಶ್  ರವರಿಗೆ   ಹೊಟ್ಟೆನೋವು ಜಾಸ್ತಿಯಾಗಿ  ಹೊಟ್ಟೆ ನೊವು ತಾಳಲಾಗದೆ ಜೀವನದಲ್ಲಿ  ಜಿಗುಪ್ಸೆ ಗೊಂಡು   ಮನೆಯ  ಸ್ನಾನದ ಗೃಹದ  ಹತ್ತಿರ  ಮನೆಯ  ಮೇಲ್ಚಾವಣಿಯ ತರಾಯಿಗೆ ಸೀರೆಯಿಂದ  ನೇಣು  ಹಾಕಿಕೊಂಡು  ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *