ದಿನದ ಅಪರಾಧಗಳ ಪಕ್ಷಿನೋಟ 19ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 18.09.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಇತರೆ :  03

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 18.09.2020 ರಂದು ಸಂಜೆ 4.30  ಗಂಟೆಯಲ್ಲಿ  ಮುದುಗುಳಿ  ಗ್ರಾಮದ ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ 1.ವೆಂಕಟೇಶ್ ಬಿನ್ ಮುನಿಯಪ್ಪ, 65  ವರ್ಷ, 2. ಯಲ್ಲಪ್ಪ ಬಿನ್ ಲೇಟ್ ಗುಳ್ಯಪ್ಪ, 65 ವರ್ಷ ವಾಸ ಮುದುಗುಳಿ ಗ್ರಾಮ  ರವರು ಮದ್ಯಪಾನ ಸೇವನೆ ಮಾಡುತ್ತಿದ್ದವರನ್ನು ಹಾಗೂ ಸ್ಥಳದಲ್ಲಿದ್ದ 1) Haywards Deluxe Whisky 90 ml  03  ಮದ್ಯದ ಖಾಲಿ ಪಾಕೇಟ್ ಗಳು, 2) 03  ಪ್ಲಾಸ್ಟಿಕ್ ಲೋಟಗಳು, 3) 04  ಖಾಲಿ ವಾಟರ್ ಪ್ಯಾಕೆಟ್ ಗಳನ್ನು ಪಿ.ಎಸ್.ಐ ಶ್ರೀ. ದಯಾನಂದ್ ಮತ್ತು ಸಿಬ್ಬಂದಿಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.09.2020 ರಂದು ಸಂಜೆ 4.30  ಗಂಟೆಯಲ್ಲಿ  ನಲ್ಲಗುಟ್ಟಹಳ್ಳಿ  ಗ್ರಾಮದ ವಾಸಿಯಾದ ಕಣ್ಣಮ್ಮ ಕೋಂ ಲೇಟ್ ರಾಮಕೃಷ್ಣಪ್ಪ ರವರ ವಾಸದ  ಮನೆಯ ಹಿಂಭಾಗದಲ್ಲಿ  ಸಾರ್ವಜನಿಕರು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಆರೋಪಿ ಮತ್ತು ಸ್ಥಳದಲ್ಲಿದ್ದ 1) Haywards Deluxe Whisky 90 ml  04  ಮದ್ಯದ ಖಾಲಿ ಪಾಕೇಟ್ ಗಳು, 2) 05  ಪ್ಲಾಸ್ಟಿಕ್ ಲೋಟಗಳು, 3) 05  ಖಾಲಿ ವಾಟರ್ ಪ್ಯಾಕೆಟ್ ಗಳನ್ನು ಪಿ.ಎಸ್.ಐ ಶ್ರೀ. ದಯಾನಂದ್ ಮತ್ತು ಸಿಬ್ಬಂದಿಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ:18.09.2020 ರಂದು ಸಂಜೆ 5-15 ಗಂಟೆಯಲ್ಲಿ ಕಮ್ಮಸಂದ್ರದ ಬಳಿ ಇರುವ ಶಾಮ್ ಪಾರಂ ಬಳಿ ಸಾರ್ವಜನಿಕರು ಸಂಚರಿಸುವ ರಸ್ತೆ ಬದಿಯಲ್ಲಿ ಪಿಚ್ಚಹಳ್ಳಿ ಗ್ರಾಮದ ರಾಜು ಮತ್ತು ರಾಮಚಂದ್ರಪ್ಪ, ಪೆಡದಂಪಲ್ಲಿ ಗ್ರಾಮದ ಶ್ರೀನಿವಾಸ ಮತ್ತು ಕಮ್ಮಸಂದ್ರ ಗ್ರಾಮದ ಬಾಬು ರವರು ಮದ್ಯಸೇವನೆ ಮಾಡುತ್ತಿದ್ದು, ಅವರನ್ನು ಮತ್ತು ಸ್ಥಳದಲ್ಲಿದ್ದ ORIGINAL CHOICE WHISKY 90 ML  2 ಖಾಲಿ TETRA ಪಾಕೇಟ್ ಗಳು  ಮತ್ತು 4 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಪಿ.ಎಸ್.ಐ ಶ್ರೀ. ನವೀನ್ ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *