ದಿನದ ಅಪರಾಧಗಳ ಪಕ್ಷಿನೋಟ 19ನೇ ಆಗಸ್ಟ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  18.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಮೋಸ/ವಂಚನೆ : 01

ಕೆ.ಜಿ.ಎಫ್ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚೆನ್ನಬಸವರಾಜ ಬಿನ್ ಶಾಂತಪ್ಪ, ಕುಂಬಲೂರು ಗ್ರಾಮ, ದಾವಣಗೆರೆ ಜಿಲ್ಲೆ ರವರು ದಿನಾಂಕ;15.08.2020 ರಂದು ಮದ್ಯಾಹ್ನ 1.50 ಗಂಟೆಯಲ್ಲಿ MOVIE PLUS ಟಿ.ವಿ ಶೋ ನಲ್ಲಿ ಕೇಳಿದ ಪ್ರಶ್ನೆಗೆ 8603739190 ಗೆ ಕರೆ ಮಾಡಿ ಉತ್ತರಿಸಲು ತೋರಿಸಿದ್ದು ಅದರಂತೆ ಅಲ್ಲಿ ಕೇಳಿದ ಪ್ರಶ್ನೆಗೆ ಉತ್ತಿರಸಿದ್ದು, ದಿನಾಂಕ:17.08.2020 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಅನಾಮಧೇಯ ವ್ಯಕ್ತಿಯು ಮೊಬೈಲ್ ನಂ.918670608389 ಮತ್ತು 918409349489  ನಿಂದ ದೂರುದಾರರಿಗೆ ಕರೆ ಮಾಡಿ ತಾನು ದಯಾಶಂಕರ್ ಮಿಶ್ರ ಎಂತ ಪರಿಚಯ ಮಾಡಿಕೊಂಡು ನೀವು ಗೆದ್ದರಿವ ಮೊತ್ತಕ್ಕೆ ಸೆಕ್ಯುರಿಟಿ ಹಣ ಕಟ್ಟಬೇಕೆಂದು ಹೇಳಿ ಎಸ್.ಬಿ.ಐ ಬ್ಯಾಂಕ್ ಖಾತೆ ನಂ.34512030861 IFSC CODE-SBIN0004380 ನೀಡಿ ದೂರುದಾರರಿಂದ 25,400/- ರೂಪಾಯಿಗಳನ್ನು  ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ.

 

– ಇತರೆ :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೋವಿಡ್‌-19 ನಿಯಮ ಉಲ್ಲಂಘನೆ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.08.2020 ರಂದು ಸಂಜೆ 4.30  ಗಂಟೆಯಿಂದ 5.30 ಗಂಟೆಯ ಮಧ್ಯೆ ರಾಜಪೇಟೆ  ಮುಖ್ಯ ರಸ್ತೆಯಿಂದ ಮೇಲುಪಲ್ಲಿ ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯ ಪಕ್ಕದಲ್ಲಿ ಹಂಸಗಿರಿ ಬಿನ್ ತಿಮ್ಮಪ್ಪ ರವರು ವೇಣು ಬಾರ್ & ರೆಸ್ಟೋರೆಂಟ್ ಅನ್ನು ಹೊಸದಾಗಿ ತೆರೆದು, ಜನರನ್ನು ಸೇರಿಸಿಕೊಂಡು ಜನರ ಮಧ್ಯೆ ಸಾಮಾಜಿಕ ಅಂತರವಿಲ್ಲದೆ, ಮುಖಗಳಿಗೆ ಮಾಸ್ಕ್ ಧರಿಸಿದೆ ಬಿರಿಯಾನಿ ಪ್ಯಾಕೆಟ್ಸ್ ಗಳನ್ನು ಸಾರ್ವಜನಿಕರಿಗೆ ಹಂಚುತ್ತಾ ಮಾನ್ಯ ಜಿಲ್ಲಾಧಿಕಾರಿಗಳ  ಆದೇಶವನ್ನು ಉಲ್ಲಂಘನೆ ಮಾಡಿದ್ದು, ಈತನ ವಿರುದ್ದ ಪಿ.ಎಸ್.ಐ ಶ್ರೀ. ಎಂ.ಎಲ್ ಮುನಿಯಪ್ಪ ರವರು ಪ್ರಕರಣವನ್ನು ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾಗವೇಣಿ ಕೊಂ ಗೋಪಾಲಕೃಷ್ಣ, ಮಸ್ಕಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ಗಂಡ ಗೋಪಾಲಕೃಷ್ಣ ರವರ ಮೊದಲ ಹೆಂಡತಿ ಶ್ರೀಮತಿ ಎಸ್.ಜ್ಯೋತಿ ರವರು ಅನಾರೋಗ್ಯದಿಂದ 1 ½   ವರ್ಷದ ಹಿಂದೆ ಮೃತಪಟ್ಟಿದ್ದು,  ಇದರ ಬಗ್ಗೆಯೇ ಗೋಪಾಲಕೃಷ್ಣ ರವರು ಯಾವಾಗಲೂ ಆಲೋಚನೆ ಮಾಡಿಕೊಂಡು, ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ 18.08.2020 ರಂದು ಬೆಳಿಗ್ಗೆ 6.30 ಗಂಟೆಯಿಂದ 8.45 ಗಂಟೆಯ ಮಧ್ಯೆ ತಮ್ಮ ಜಮೀನಿನಲ್ಲಿ  ಜ್ಯೋತಿ ರವರ ಸಮಾಧಿಯ ಪಕ್ಕದಲ್ಲಿರುವ ಹೊಂಗೆ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *