ದಿನದ ಅಪರಾಧಗಳ ಪಕ್ಷಿನೋಟ 19ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 18.06.2020 ರಂದು   ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣಕಳ್ಳತನ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪನ್‌ಸಂಬಾಲ್‌, ಸಿ.ಎಸ್.ಓ., ಸ್ವರ್ಣ ಭವನ ಬಿ.ಜಿ.ಎಂ.ಎಲ್‌, ಕೆ.ಜಿ.ಎಫ್ ರವರಿಗೆ ದಿನಾಂಕ:17.06.2020 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಯಾರೋ ಕಳ್ಳರು ಎನ್.ಡಿ. ಮಿಲ್ ಗೆ ಹೋಗಿದ್ದಾರೆಂದು ಬಂದ ಮಾಹಿತಿ ಮೇರೆಗೆ ದೂರುದಾರರು ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ಎನ್.ಡಿ. ಮಿಲ್ ಗೆ ಹೋಗಿ ತಪಾಸಣೆ ಮಾಡುತ್ತಿರುವಾಗ ಯಾರೋ 3 ಜನ ದುರ್ಷ್ಕರ್ಮಿಗಳು ಎನ್.ಡಿ. ಮಿಲ್ ನಿಂದ ಪರಾರಿಯಾಗಿರುತ್ತಾರೆ.

– ಇತರೆ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಮಾಹಿತಿ ಪೊಲೀಸರಿಗೆ ನೀಡದೇ ಇರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ತಿಮ್ಮರಾಯಪ್ಪ ಬಿನ್ ಕುವಿಯಪ್ಪ, ಎದಿಪಲ್ಲಿ ಗ್ರಾಮ, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು ರವರು ನೀಡಿದ ದೂರಿನಲ್ಲಿ, ವಡ್ಡಹಳ್ಳಿ ಗ್ರಾಮದ ವಾಸಿಯಾದ ಪುಷ್ಪಾ ಕೊಂ ಗುಡಿಯಪ್ಪ ರವರಿಗೆ ಅಗಾಗ ಹೊಟ್ಟೆ ನೋವು ಬರುತ್ತಿದ್ದು, ದಿನಾಂಕ 17.06.2020  ರಂದು ಸಂಜೆ 4-30 ಗಂಟೆಯಲ್ಲಿ ಪುಷ್ಪಾ ರವರು ಹೊಟ್ಟೆನೋವಿನ ಬಾದೆಗೆ ತಾಳಲಾರದೇ ರಾಜಮ್ಮ ಕೋಂ ಕೃಷ್ಣಪ್ಪ, ವಡ್ಡಹಳ್ಳಿ ಗ್ರಾಮ ರವರ ತಮಟಮಾಕನಹಳ್ಳಿ ಗ್ರಾಮದಲ್ಲಿರುವ ಜಮೀನಿನಲ್ಲಿ ಮಾವಿನ ಮರದ ಕೊಂಬೆಗೆ ಸೀರೆಯಿಂದ ನೇಣು ಹಾಕಿಕೊಂಡು ಕಿರುಚಾಡಿದ್ದು, ಶಬ್ದ ಕೇಳಿ ಪಕ್ಕದ ಜಮೀನಿನಲ್ಲಿದ್ದ ಭಾಗ್ಯಮ್ಮ ಮತ್ತು ಸಿದ್ದಪ್ಪ ರವರು  ಪುಷ್ಪಾ ರವರನ್ನು ಕೆಳಗಿಳಿಸಿ ನೀರು ಕುಡಿಸಿದಾಗ ಪುಷ್ಪಾ ರವರು ಮೃತಪಟ್ಟಿರುತ್ತಾರೆ. ನಂತರ ಪುಷ್ಪಾ ರವರ ಗಂಡ ಗುಡಿಯಪ್ಪ, ಆಕೆಯ ಮಾವ ಬೆಲತಿಮ್ಮಪ್ಪ,  ಬೆಲತಿಮ್ಮಪ್ಪ ರವರ ಮಕ್ಕಳಾದ ವೆಂಕಟಮ್ಮ. ಸೌಂದರ್ಯ ಮತ್ತು ಪುಷ್ಪಾ  ರವರ ತಂದೆ ಶ್ರೀನಿವಾಸ್, ತಾಯಿ ಸರೋಜ (ವಾಸ ಕುರ್‍ನಪಲ್ಲಿ, ಬೇರಕಿ ಸಮೀಪ ತಮಿಳುನಾಡು) ಸರೋಜ ರವರ ಅಣ್ಣ ತಮ್ಮಂದಿರು ಮತ್ತು ವಡ್ಡಹಳ್ಳಿ ಗ್ರಾಮದ ಕೆಲವರು ಸೇರಿ ಮೃತದೇಹವನ್ನು ರಾತ್ರಿ 11.30 ಗಂಟೆಯಲ್ಲಿ ಸುಟ್ಟುಹಾಕಿರುತ್ತಾರೆ.

Leave a Reply

Your email address will not be published. Required fields are marked *